Advertisement

Amazon Business: ಭಾರತದಲ್ಲಿ ಆರು ವರ್ಷ ಪೂರೈಸಿದ ಅಮೆಜಾನ್ ಬ್ಯುಸಿನೆಸ್

07:41 AM Sep 24, 2023 | Team Udayavani |

ಬೆಂಗಳೂರು: ಅಮೆಜಾನ್ ಬ್ಯುಸಿನೆಸ್ ತನ್ನ ಆರು ವರ್ಷಗಳನ್ನು ಪೂರೈಸಿದ್ದು, ಭಾರತದಲ್ಲಿ ಔದ್ಯಮಿಕ ಗ್ರಾಹಕರಿಗೆ ನೆರವಾಗಿದೆ.

Advertisement

ಅಮೆಜಾನ್ ಬ್ಯುಸಿನೆಸ್ ಆರಂಭವಾದಾಗಿನಿಂದಲೂ, ಉದ್ಯಮಗಳು ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ಮತ್ತು ಖರೀದಿ ಮಾಡುವ ವಿಧಾನವನ್ನೇ ಬದಲಿಸಿದೆ. 10 ಲಕ್ಷ ಮಾರಾಟಗಾರರಿಂದ 19 ಕೋಟಿ ರೂ. ಗೂ ಹೆಚ್ಚು ಜಿಎಸ್‌ಟಿಯನ್ನು ಪಾವತಿ ಮಾಡಿರುವ ಅಮೆಜಾನ್ ಬ್ಯುಸಿನೆಸ್‌ ಇಂದು ದೇಶಾದ್ಯಂತ 99.5% ಗೂ ಹೆಚ್ಚು ಪಿನ್‌ಕೋಡ್‌ಗಳಿಗೆ ಸೇವೆ ಸಲ್ಲಿಸುತ್ತಿದೆ.

ಆರ್ಡರ್‌ಗಳಿಗೆ ಕೋಟ್ ಮಾಡುವ ಅವಕಾಶ, ವಿವಿಧ ವಿಳಾಸಗಳಿಗೆ ಶಿಪ್‌ ಮಾಡುವ ಸೌಲಭ್ಯ ಹಾಗೂ ಇತರ ಸೌಲಭ್ಯಗಳನ್ನು ಇದು ಒದಗಿಸಿದೆ. ಇವೆಲ್ಲವನ್ನೂ ಅಮೆಜಾನ್ ಬ್ಯುಸಿನೆಸ್‌ನ ಐಒಎಸ್ ಮತ್ತು ಆಂಡ್ರಾಯ್ಡ್ ಆಪ್ಟಿಮೈಸ್ಡ್‌ ಮೊಬೈಲ್‌ ಆಪ್‌ನಲ್ಲೇ ಮಾಡಬಹುದಾಗಿದೆ.

ಆರು ವರ್ಷಗಳ ಈ ಪಯಣವನ್ನು ಸಂಭ್ರಮಿಸುವುದಕ್ಕಾಗಿ ಅಮೆಜಾನ್ ಬ್ಯುಸಿನೆಸ್ ಈಗ ಅಮೆಜಾನ್ ಪೇ ಲೇಟರ್‌ ಅನ್ನೂ ಅಳವಡಿಸಿಕೊಂಡಿದೆ. ಅರ್ಹ ಬ್ಯುಸಿನೆಸ್ ಗ್ರಾಹಕರಿಗೆ ವರ್ಚುವಲ್ ಕ್ರೆಡಿಟ್ ಅನ್ನು ಇದು ನೀಡುತ್ತಿದೆ. 2023-24 ರ ಬಜೆಟ್‌ನಲ್ಲಿ ಎಂಎಸ್‌ಎಂಇ ವಲಯಕ್ಕೆ ಕ್ರೆಡಿಟ್ ಗ್ಯಾರಂಟಿ ಸ್ಕೀಮ್‌ ಅನ್ನು ನೀಡುವ ಭಾರತ ಸರ್ಕಾರದ ಧ್ಯೇಯಕ್ಕೆ ಅನುಗುಣವಾಗಿ, ಅಮೆಜಾನ್ ಪೇ ಲೇಟರ್ ಅನ್ನು ಅಳವಡಿಸಲಾಗಿದೆ.

ದೇಶಾದ್ಯಂತ ಔದ್ಯಮಿಕ ಗ್ರಾಹಕರನ್ನು ಡಿಜಿಟಲೀಕರಿಸುವ ಅಮೆಜಾನ್ ಬ್ಯುಸಿನೆಸ್‌ನ ಗುರಿಯನ್ನು ಇದು ಇನ್ನಷ್ಟು ಪ್ರೋತ್ಸಾಹಿಸಲಿದೆ. ಅಲ್ಲದೆ, ಕಿರಿಕಿರಿ ಇಲ್ಲದ ಪಾವತಿ ಅನುಭವವನ್ನು ಒದಗಿಸುವುದರ ಜೊತೆಗೆ ಎಂಎಸ್ಎಂಇಗೆ ಸಾಲ ಲಭ್ಯತೆಯನ್ನೂ ಇದು ಹೆಚ್ಚಿಸಲಿದೆ.

Advertisement

ಅಮೆಜಾನ್ ಪೇ ಲೇಟರ್‌ನ ಇನ್‌ಸ್ಟಂಟ್ ಕ್ರೆಡಿಟ್‌ಗೆ ಡಿಜಿಟಲ್ ರೂಪದಲ್ಲಿ ಸೈನ್ ಅಪ್ ಆಗಿ, ಬಳಕೆ ಮಾಡಬಹುದು. ಈ ಮೂಲಕ ಎಲ್ಲ ವಿಭಾಗಗಳಲ್ಲಿನ ಉತ್ಪನ್ನಗಳನ್ನು ಸರಾಗವಾಗಿ ಖರೀದಿ ಮಾಡಬಹುದು. ಸರಾಗ ಪಾವತಿ ಅನುಭವದ ಜೊತೆಗೆ, Amazon.in ನಲ್ಲಿ ಬಿಲ್ ಪೇಮೆಂಟ್ ಮಾಡಲು, ಅಮೆಜಾನ್ ಪೇ ಕಾರ್ಪೊರೇಟ್ ಗಿಫ್ಟ್ ಕಾರ್ಡ್‌ಗಳನ್ನು ಖರೀದಿ ಮಾಡಲು, ಟ್ರಾವೆಲ್, ವಿಮೆ ಖರೀದಿ ಮಾಡಲು ಕೂಡಾ ಅವರಿಗೆ ಸಾಧ್ಯವಾಗುತ್ತದೆ.

ದೈನಂದಿನ ಅಗತ್ಯಗಳು, ಎಲೆಕ್ಟ್ರಾನಿಕ್ಸ್‌, ಕಾರ್ಪೊರೇಟ್‌ ಗಿಫ್ಟ್‌ಗಳು ಸೇರಿದಂತೆ ವಿವಿಧ ಉತ್ಪನ್ನಗಳನ್ನು ಬಲ್ಕ್‌ ಆಗಿ ಖರೀದಿ ಮಾಡಲು ತಮ್ಮ ಮಾಸಿಕ ಬಜೆಟ್‌ಗಳನ್ನು ವಿಸ್ತರಿಸಿಕೊಳ್ಳಲು ಗ್ರಾಹಕರಿಗೆ ನೆರವು ನೀಡುವ ಉದ್ದೇಶವನ್ನು ಇದು ಹೊಂದಿದೆ. ಬಳಸಿದ ಕ್ರೆಡಿಟ್ ಅನ್ನು ಮುಂದಿನ ತಿಂಗಳು ಮರುಪಾವತಿ ಮಾಡಬಹುದಾಗಿದ್ದು, ಯಾವುದೇ ಹೆಚ್ಚುವರಿ ಶುಲ್ಕ ಇರುವುದಿಲ್ಲ. ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ 12 ತಿಂಗಳವರೆಗಿನ ಇಎಂಐ ಕೂಡಾ ಇದರಲ್ಲಿ ಲಭ್ಯವಿದೆ. ಇದರಲ್ಲಿ ಯಾವುದೇ ಗೌಪ್ಯ ಶುಲ್ಕ ಇರುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next