Advertisement

ಮೂರು ಕಂಪೆನಿಗಳ ಹೆಲ್ತ್‌ ಕೇರ್‌ ಸಹೋದ್ಯಮಕ್ಕೆ ಅತುಲ್‌ ಗಾವಂಡೆ ಸಿಇಓ

11:44 AM Jun 21, 2018 | Team Udayavani |

ಬೋಸ್ಟನ್‌: ಅಮೆಜಾನ್‌ ಡಾಟ್‌ ಕಾಮ್‌ ಇಂಕ್‌, ಬರ್ಕ್‌ಶಯರ್‌ ಹ್ಯಾತ್‌ವೇ ಇಂಕ್‌ ಮತ್ತು ಜೆ ಪಿ ಮಾರ್ಗನ್‌ ಚೇಸ್‌ ಆ್ಯಂಡ್‌ ಕಂಪೆನಿ ಈ ವರ್ಷ ಜನವರಿಯಲ್ಲಿ ಆರಂಭಿಸಿರುವ ಆರೋಗ್ಯ ಸೇವೆಯ ಸಹೋದ್ಯಮ ಕಂಪೆನಿಯ ಸಿಇಓ ಹುದ್ದೆಗೆ ಖ್ಯಾತ ಸರ್ಜನ್‌ ಮತ್ತು ಲೇಖಕರಾಗಿರುವ ಅತುಲ್‌ ಗಾವಂಡೆ ಅವರನ್ನು ನೇಮಿಸಿಕೊಂಡಿದೆ. 

Advertisement

ಬೋಸ್ಟನ್‌ನಲ್ಲಿರುವ ಈ ಆರೋಗ್ಯ ಸೇವಾ ಕಂಪೆನಿಯು ಸುಮಾರು 10 ಲಕ್ಷದಷ್ಟು ಇರುವ ತನ್ನ ಮೂರು ಸ್ಥಾಪಕ ಸಂಸ್ಥೆಗಳ ಉದ್ಯೋಗಿಗಳನ್ನು ದೃಷ್ಟಿಯಲ್ಲಿರಿಸಿಕೊಂಡು ವೈದ್ಯಕೀಯ ಸೇವೆ ನೀಡಲಿದೆ. 

ಗಾವಂಡೆ ಅವರು ಪ್ರಕೃತ ಬ್ರಿಗಾಮ್‌ ಮತ್ತು ವಿಮೆನ್‌ ಹಾಸ್ಪಿಟಲ್‌ ನಲ್ಲಿ ಎಂಡೋಕ್ರೈನ್‌ ಸರ್ಜರಿ ಮತ್ತು ವೈದ್ಯ ವೃತ್ತಿಯನ್ನು ನಡಸುತ್ತಿದ್ದಾರೆ. ಅವರು ಹಾರ್ವರ್ಡ್‌ ಟಿ ಎಚ್‌ ಚ್ಯಾನ್‌  ಸ್ಕೂಲ್‌ ಆಪ್‌ ಪಬ್ಲಿಕ್‌ ಹೆಲ್ತ್‌ ಮತ್ತು ಹಾರ್ವರ್ಡ್‌ ಮೆಡಿಕಲ್‌ ಸ್ಕೂಲ್‌ನಲ್ಲಿ ಪ್ರೊಫೆಸರ್‌ಆಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next