Advertisement

ಫ್ಲಿಪ್‌ ಕಾರ್ಟ್‌, ಅಮೆಜಾನ್‌ ಗೆ ಸಣ್ಣ ನಗರಗಳಲ್ಲೇ ಭರ್ಜರಿ ವ್ಯಾಪಾರ

09:15 AM Oct 03, 2019 | Hari Prasad |

ಹೊಸದಿಲ್ಲಿ: ಭಾರತದಲ್ಲಿ ಹಬ್ಬಗಳ ದಿನ ಕಳೆಗಟ್ಟತೊಡಗಿದ್ದು, ಆನ್‌ ಲೈನ್‌ ತಾಣಗಳಲ್ಲಿ ವ್ಯಾಪಾರ ಜೋರಾಗಿದೆ. ಹೀಗೆ ವ್ಯಾಪಾರ ನಡೆಸುವವರಲ್ಲಿ ಸಣ್ಣ ನಗರಗಳ ಜನರೇ ಅತಿ ಹೆಚ್ಚು ಎಂದು ತಾಣಗಳು ಹೇಳಿಕೊಂಡಿವೆ. ಭಾರತದ ಟಯರ್‌ 2 ಮತ್ತು ಟಯರ್‌ 3 ನಗರಗಳಲ್ಲಿ ಹೆಚ್ಚು ವ್ಯಾಪಾರವಾಗುತ್ತಿದೆ ಎಂದು ಅಮೆಜಾನ್‌, ಫ್ಲಿಪ್‌ಕಾರ್ಟ್‌ ಮತ್ತು ಸ್ನ್ಯಾಪ್‌ ಡೀಲ್‌ಗ‌ಳು ಹೇಳಿಕೊಂಡಿವೆ.

Advertisement

ಫ್ಲಿಪ್‌ ಕಾರ್ಟ್‌ ಹೇಳುವಂತೆ ಟಯರ್‌ 2 ನಗರಗಳಲ್ಲಿ ಬಿಗ್‌ ಬಿಲಿಯನ್‌ ಡೇಯಂದು ವ್ಯಾಪಾರ ನಡೆಸುವವರ ಸಂಖ್ಯೆ ಕಳೆದ ವರ್ಷಕ್ಕಿಂತ ದುಪ್ಪಟ್ಟಾಗಿದೆ. ಅಮೆಜಾನ್‌ ಇಂತಹ ನಗರಗಳಿಂದಲೇ ಶೇ.91ರಷ್ಟು ವ್ಯಾಪಾರ ನಡೆಯುತ್ತಿದೆ ಎಂದು ಹೇಳಿದೆ.

ಸ್ನ್ಯಾಪ್‌ ಡೀಲ್‌ ಕೂಡ, ತನ್ನ ಗ್ರಾಹಕರಲ್ಲಿ ಶೇ.92ರಷ್ಟು ಮಂದಿ ಸಣ್ಣ ನಗರದವರು. ಇವರು ಮೆಟ್ರೋದವರಲ್ಲ ಎಂದು ಹೇಳಿದೆ. ಅಲ್ಲದೇ ಭರೂಚ್‌ (ಗುಜರಾತ್‌), ಪಾಲಿ (ರಾಜಸ್ಥಾನ), ತೇಜ್‌ಪುರ (ಅಸ್ಸಾಂ), ಪರಾದಿಪ್‌ (ಒಡಿಶಾ)ದಿಂದ ಅತಿ ಹೆಚ್ಚು ಖರೀದಿಯಾಗಿದ್ದಾಗಿ ಹೇಳಿದೆ.

ಸ್ಥಳೀಯ ಭಾಷೆಗೆ ಮಹತ್ವ
ಫ್ಲಿಪ್‌ ಕಾರ್ಟ್‌ ಸಣ್ಣ ನಗರಗಳು ಮತ್ತು ಹಳ್ಳಿಯವರನ್ನೂ ಸೆಳೆಯಲು ಆ್ಯಪ್‌ ಗಳಲ್ಲಿ ಹಿಂದಿಯನ್ನು ಪರಿಚಯಿಸಿದೆ. ಶೀಘ್ರ ಇತರ ಭಾಷೆಗಳನ್ನೂ ಪರಿಚಯಿಸುವುದಾಗಿ ಹೇಳಿದೆ. ಇತರ ಮಾರಾಟ ತಾಣಗಳೂ ಭಾಷೆಗಳನ್ನು ತಮ್ಮ ಆ್ಯಪ್‌ ಗಳಲ್ಲಿ ಪರಿಚಯಿಸಲು ಚಿಂತನೆ ನಡೆಸಿವೆ. ಇದರಿಂದ ಸ್ಥಳೀಯ ಮಾರುಕಟ್ಟೆಗೂ ಈ ಆನ್ ಲೈನ್ ತಾಣಗಳು ಪ್ರವೇಶಿಸುವ ಉದ್ದೇಶ ಇಟ್ಟುಕೊಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next