ಇಂಫಾಲ: ಮಣಿಪುರದ 24 ವರ್ಷದ ಯುವಕ ಟಿ.ನಿರಂಜಯ್ ಸಿಂಗ್ ಗಿನ್ನೆಸ್ ವಿಶ್ವದಾಖಲೆ ನಿರ್ಮಿಸಿದ್ದಾರೆ.
Advertisement
ಕೇವಲ ಒಂದು ನಿಮಿಷದಲ್ಲಿ 109 ಬಾರಿ ಪುಷ್‌ಅಪ್ ಮಾಡಿದ್ದಾರೆ. ಮಾತ್ರವಲ್ಲ ತಮ್ಮದೇ ಹಿಂದಿನ 105 ಪುಷ್‌ಅಪ್ ಗಳ ವಿಶ್ವದಾಖಲೆಯನ್ನು ಮುರಿದಿದ್ದಾರೆ.
ಕೈಬೆರಳುಗಳನ್ನು ನೆಲಕ್ಕೆ ಊರಿಕೊಂಡು ಅದರ ಬಲದ ಮೇಲೆಯೇ ಮಾಡಿರುವ ಪುಷ್‌ಅಪ್ ಸಾಹಸಕ್ಕೆ ಜನ ಬೆರಗಾಗಿದ್ದಾರೆ. ಗಿನ್ನೆಸ್ ದಾಖಲೆಯ ಈ ಸ್ಪರ್ಧೆಯನ್ನು ಅಝೆಕ್ಸ್ ಸ್ಫೋರ್ಟ್ಸ್ ಆಯೋಜಿಸಿತ್ತು. ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.