Advertisement

ಮಾರುಕಟ್ಟೆಯ ಸೌಧವೆಂಬ ಅದ್ಭುತ

05:38 PM Sep 28, 2019 | Team Udayavani |

ವಿವಿಧ ವಿನ್ಯಾಸಗಳ ಆಧುನಿಕ ಕಟ್ಟಡಗಳಿಗೆ ಹೆಸರುವಾಸಿಯಾದ ನೆದರ್ಲೆಂಡ್ಸ್‌ನ ರೋಟರ್‌ ಡಾಮ್‌ ನಗರದ ಪ್ರಮುಖ ಆಕರ್ಷಣೆ ಅಲ್ಲಿನ ಮಾರುಕಟ್ಟೆಯ ಸೌಧ ಅಥವಾ ಮಾರ್ಕ್ಟ್ ಹಾಲ್ ಕೇಂದ್ರ ಭಾಗದಲ್ಲಿ ಗಿಜಿಗುಡುವ ಸಂತೆ ಮತ್ತು ಹೋಟೆಲ್‌ಗ‌ಳಾದರೆ ಬದಿಗಳಲ್ಲಿ ಹಾಗೂ ಮೇಲ್ಛಾವಣಿಯಲ್ಲಿ ವಾಸದ ವಿಶಿಷ್ಟ ಮನೆಗಳು, ನೆಲಮಾಳಿಗೆಯಲ್ಲಿ ನಾಲ್ಕು ಅಂತಸ್ತಿನ ವಾಹನ ನಿಲುಗಡೆಯ ಸ್ಥಳ, ಮಾರುಕಟ್ಟೆಯ ಜಾಗದ ಒಳಛಾವಣಿಯಲ್ಲಿ ಸುಂದರವಾದ ಚಿತ್ರಕಲಾಕೃತಿಯಿದೆ. ವಾಸ, ವ್ಯಾಪಾರ, ಆಹಾರ, ವಾಹನ ನಿಲುಗಡೆ, ಕಲೆ ಎಲ್ಲದರ ಸಂಗಮವೂ ಒಂದೇ ನಿರ್ಮಿತಿಯಲ್ಲಿರುವುದು ಇದರ ವಿಶೇಷ.

Advertisement

2009ರ ಅಕ್ಟೋಬರ್‌ನಲ್ಲಿ ಇದರ ನಿರ್ಮಾಣ ಶುರುವಾಯಿತು. ನಿರ್ಮಾಣ ಪೂರ್ಣಗೊಂಡು 2014ರ ಅಕ್ಟೋಬರ್‌ನಲ್ಲಿ ನೆದರ್ಲೆಂಡ್ಸ್‌ ನ ರಾಣಿ ಮಾಕ್ಸಿಮಾರಿಂದ ಉದ್ಘಾಟಿಸಲ್ಪಟ್ಟಿತು. 178 ಮಿಲಿಯ ಯೂರೋಗಳ ಖರ್ಚಿನಲ್ಲಿ ನಿರ್ಮಿತವಾದ ಈ ಸೌಧ ಪೂರ್ತಿಯಾಗುವ ಮೊದಲೇ ತನ್ನ ವಿಶೇಷತೆಗಳಿಂದಾಗಿ ಪ್ರಖ್ಯಾತವಾಯಿತು. ಇದನ್ನು ವಿನ್ಯಾಸಗೊಳಿಸಿದ್ದು MVDRV ಎಂಬ ಡಚ್‌ ಸಂಸ್ಥೆ.

ಇಡೀ ಸೌಧದ ಉದ್ದ 120 ಮೀ. ಗಳು, ಅಗಲ 70 ಮೀ. ಗಳು ಹಾಗೂ ಎತ್ತರ 40 ಮೀ. ಗಳು. ಮಾರುಕಟ್ಟೆಯನ್ನು ಪ್ರವೇಶಿಸುವ ಸ್ಥಳದಿಂದ ನೋಡಿದಾಗ ಇದು ಕುದುರೆಲಾಳದ ಆಕೃತಿಯಂತಿದೆ.

ಹೊರನೋಟಕ್ಕೆ ಸಮ್ಮಿತೀಯವಾದ ಈ ಸೌಧದ ಎರಡು ಬದಿಯಲ್ಲಿ ಗಾಜಿನ ಗೋಡೆಗಳಿವೆ. ಈ ಗೋಡೆಗಳ ಕೆಳ ಭಾಗಗಳಿಂದ ಮಾರುಕಟ್ಟೆಗೆ ಪ್ರವೇಶ. ಈ ಗೋಡೆಗಳನ್ನು ಉಕ್ಕಿನ ಸರಳುಗಳ ಮೇಲೆ ಆಧರಿಸಿರುವ ಚೌಕಾಕಾರದ ಗಾಜಿನ ತುಂಡುಗಳಿಂದ ನಿರ್ಮಿಸಲಾಗಿದೆ. ಪ್ರತಿಗೋಡೆಯಲ್ಲಿ ಗಾಜಿನ ತುಣುಕುಗಳನ್ನು ಹಿಡಿದಿಡಲು ಉಪಯೋಗಿಸಿ ದ್ದು 26 ಲಂಬವಾದ ಸರಳುಗಳು, 22 ಅಡ್ಡವಾದ ಸರಳುಗಳು.

ಮಾರುಕಟ್ಟೆಯ ಒಳಭಾಗದ ಛಾವಣಿಪೂರ್ತಿ ಆನೊì ಕೊನೆನ್‌ ಎಂಬ ಕಲಾವಿದನ ಕೃತಿ ಇದೆ. 3 ಈ ತಂತ್ರಜ್ಞಾನ ಉಪಯೋಗಿಸಿ 4000 ಅಲ್ಯುಮಿನಿಯಮ್‌ ಹಾಳೆಗಳ ಮೇಲೆ ಮುದ್ರಿಸಿ ಅವುಗಳನ್ನು ಛಾವಣಿಯಲ್ಲಿ ಅಳವಡಿಸಲಾಯಿತು. ಇದನ್ನು ಹಾರ್ನ್ ಆಫ್ ಪ್ಲೆಂಟಿ ಎನ್ನುತ್ತಾರೆ. ಹಣ್ಣು, ತರಕಾರಿ, ಹೂವು, ಮೀನು, ಕೀಟಗಳ ಚಿತ್ರಗಳು ಇಡೀ ಜಾಗದ ಸೌಂದರ್ಯವನ್ನು ವೃದ್ಧಿಸಿವೆ. ಇದರ ಒಟ್ಟು ವಿಸ್ತಾರ 11, 000 ಚದರ ಮೀ. ಗಳು. ಇದನ್ನು ವೀಕ್ಷಿಸಿದ ಹಲವರು ಜಗತ್ತಿನ ಅತ್ಯಂತ ದೊಡ್ಡ ಕಲಾಕೃತಿ ಎಂದು ವರ್ಣಿಸಿದ್ದಾರೆ.

Advertisement

ನಾಲ್ಕು ಅಂತಸ್ತುಗಳ ನೆಲಮಾಳಿಗೆಯಲ್ಲಿ 1200ರಷ್ಟು ವಾಹನಗಳನ್ನು ನಿಲುಗಡೆ ಮಾಡುವಷ್ಟು ಅವಕಾಶವಿದೆ.

ಉಮಾಮಹೇಶ್ವರಿ ಎನ್‌.

Advertisement

Udayavani is now on Telegram. Click here to join our channel and stay updated with the latest news.

Next