Advertisement
ಪಶ್ಚಿಮ ಆಫ್ರಿಕಾದ ಬೆನಿನ್‌ನಲ್ಲಿರುವ ಗ್ರಾಮವೇ ಗನ್ವಿ. ನೊಕೌ ಸರೋವರದ ಮಧ್ಯದಲ್ಲಿದೆ ಈ ಗನ್ವಿ ಎಂಬ ಗ್ರಾಮ. 17ನೇ ಯ ಶತಮಾನದ ಹಿಂದಿನ ಕೃತಕ ದ್ವೀಪಗಳ ಸುತ್ತ ಜೋಡಿಸಲಾದ ವರ್ಣರಂಜಿತ ಮರದ ಸ್ಟೀಲಿನಿಂದ ಮನೆಗಳನ್ನು ಇಲ್ಲಿ ನಿರ್ಮಿಸಿ ವಾಸಿಸುತ್ತಿದ್ದಾರೆ. ಈ ಗ್ರಾಮದಲ್ಲಿ ಸುಮಾರು 20,000 ಜನರು ವಾಸಿಸುತ್ತಿದ್ದು, ಇದು ತೇಲುವ ಹಳ್ಳಿ ಎಂದೇ ಪ್ರಸಿದ್ಧಿ ಪಡೆದಿದೆ.
Related Articles
Advertisement
ಇವರ ಬದುಕು ಇತರರಿಗಿಂತ ತುಂಬಾನೆ ವಿಶೇಷವೆಂದು ಹೇಳಬಹುದು. ಯಾಕಂದ್ರೆ ಇವರ ಬದುಕು ನಡೆಯೋದು ನೀರಿನ ಮೇಲೆಯೆ. ಇಮ್ರ ತಮ್ಮ ಮನೆಗಳನ್ನು ಕಟ್ಟುವ ರೀತಿಯೇ ವಿಶೇಷ. ನೀರಿನ ಮೇಲೆ ಬಲವಾದ, ಕಂಬಗಳನ್ನು ನೆಟ್ಟು ಅದರ ಮೇಲೆ ಮನೆಗಳನ್ನು ನಿರ್ಮಿಸುತ್ತಾರೆ. ಜೀವನ ನಿರ್ವಹಣೆಗೆ ಮುಖ್ಯವಾಗಿ ತರಕಾರಿಗಳು, ಹಣ್ಣುಗಳನ್ನು ಬಳಸುತ್ತಾರೆ.
ಆಧುನೀಕತೆಯಿಂದಾಗಿ ಇಂದು ಜನರು ಬಸ್, ಬೈಕು, ಆಟೋ, ಕಾರುಗಳಲ್ಲಿ ಓಡಾಡ್ತಾರೆ. ಆದ್ರೆ ತೇಲುವ ಗ್ರಾಮದ ಜನರು ಮಾತ್ರ ತಮ್ಮ ಸಂಚಾರಕ್ಕೆ ಕಯಾಕ್‌ಗಳನ್ನ ಉಪಯೋಗಿಸ್ತಾರೆ. ಈ ಕಯಾಕ್‌ಗಳೇ ಇವ್ರ ಸಂಚಾರಕ್ಕೆ ನೆರವಾಗ್ತಾ ಇರೋದು. ಮೀನುಗಾರಿಕೆಯೆ ಇವ್ರ ಜೀವನಕ್ಕೆ ಮೂಲ ಆಧಾರವಾಗಿದೆ. ಯಾಕಂದ್ರೆ ನೀರಿನ ಮೇಲೆಯೆ ಇವರು ತಮ್ಮ ಬದುಕನ್ನು ಕಟ್ಟಿಕೊಂಡ ಕಾರಣ ಮೀನುಗಳನ್ನು ಮಾರಾಟ ಮಾಡಿ ತಮ್ಮ ಬದುಕನ್ನು ಮುನ್ನಡೆಸುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಇವೆಲ್ಲಾ ಪ್ರವಾಸಿ ತಾಣವಾದ ಕಾರಣ ಜನರಿಗೆ ಅನುಕೂಲವಾಗುವ ಉದ್ದೇಶದಿಂದ ಈ ಹಳ್ಳಿಯಲ್ಲಿ ಶಾಲೆ, ಮಾರುಕಟ್ಟೆಯ ಜತೆ ಮಸೀದಿಯನ್ನು ಕೂಡ ತೆರೆಯಲಾಗಿದೆ. ಪ್ರವಾಸಿ ತಾಣವಾದ ಕಾರಣ ಇತ್ತೀಚಿನ ದಿನಗಳಲ್ಲಿ ಇವರಿಗೆ ಜೀವನದ ಆದಾಯದ ಮೂಲವಾಗಿ ಮಾರ್ಪಟ್ಟಿದೆ. ಒಟ್ಟಾರೆಯಾಗಿ ನೋಡುತ್ತಾ ಹೋದರೆ, ತೇಲುವ ಗ್ರಾಮಗಳಲ್ಲಿ ಬದುಕುವ ಜನರು ಮೀನುಗಾರಿಕೆಯ ಜತೆ ಕೃಷಿಯನ್ನೇ ಅವಲಂಬಿಸಿರುವುದು ಕಂಡುಬರುತ್ತದೆ. ದೊಡ್ಡ ದೊಡ್ಡ ಕಂಬಗಳನ್ನು ಬಳಸಿಕೊಂಡು ತಮ್ಮ ಮನೆಗಳನ್ನು ನಿರ್ಮಿಸಿಕೊಂಡಿರುವುದು ಇಂದಿಗೂ ಅಚ್ಚರಿಯಾಗಿಯೇ ಉಳಿದಿದೆ.
ಇಲ್ಲಿನ ಜನರು ಹಳೆಯ ಕಾಲದ ತಾಮ್ರದ ಪಾತ್ರೆಗಳನ್ನು, ಅಲ್ಯುಮೀನಿಯಂ ಪಾತ್ರೆಗಳನ್ನೇ ನಿತ್ಯ ಜೀವನದಲ್ಲಿ ಬಳಸ್ತಿದ್ದಾರೆ. ಮಣ್ಣಿನ ಕೊಡಗಳನ್ನೂ ಕೂಡಾ ಬಳಕೆ ಮಾಡ್ತಾರೆ. ಇನ್ನು ಇವ್ರ ಕೃಷಿ ಪದ್ಧತಿ ಕೂಡ ತುಂಬಾನೆ ವಿಶೇಷ. ಯಾಕಂದ್ರೆ ಇಮ್ರ ನೀರಿಗಿಂತ ಸ್ವಲ್ಪ ಮೇಲಕ್ಕೆ ಎತ್ತರವಾಗಿ ಮಣ್ಣನ್ನು ಅಗೆದು ಅಲ್ಲಿ ಬೀಜವನ್ನು ಬಿತ್ತಿ ಕೃಷಿ ಮಾಡ್ತಾರೆ.
ಇದೇ ರೀತಿ ಹಂತ ಹಂತವಾಗಿ ಮಾಡಿಕೊಂಡು ಕೃಷಿ ಪದ್ಧತಿಯನ್ನು ಇನ್ನೂ ಮುಂದುವರೆಸಿದ್ದಾರೆ. ಇತ್ತೀಚೆಗೆ ಮಾನವನ ದುಷ್ಕೃತ್ಯಗಳಿಂದ ಅದೆಷ್ಟೋ ಪರಿಸರ ನಾಶವಾಗ್ತಾ ಇವೆ. ಹಾಗೇನೆ ಪ್ರಕೃತಿ ಕೂಡಾ ಅಂತವ್ರಿಗೆ ಭೂಕಂಪನ, ಚಂಡಮಾರುತ, ಬಿರುಗಾಳಿ, ಸುಳಿಗಾಳಿ ಮೂಲಕ ಸರಿಯಾದ ರೀತಿಯಲ್ಲಿಯೇ ಉತ್ತರ ನೀಡ್ತಾ ಇದೆ. ಇಂತಹ ದೃಷ್ಟಿಯಲ್ಲಿ ನೋಡುವುದಾದರೆ, ತೇಲುವ ಗ್ರಾಮಗಳ
ಜನರು ನೀರಿನ ಮೇಲೆಯೇ ದೊಡ್ಡ ದೊಡ್ಡ ಕಂಬಗಳನ್ನು ನಿರ್ಮಿಸಿ ಮನೆಗಳನ್ನು ಕಟ್ಟಿಕೊಂಡು ಬದುಕು ನಡೆಸುತ್ತಿರುವುದು ವಿಪರ್ಯಾಸವೇ ಸರಿ.
-ಹೇಮಾವತಿ
ಎಸ್‌ಡಿಎಮ್, ಉಜಿರೆ