ನವದೆಹಲಿ: ಅಮೇಜ್ಹ್ ಫಿಟ್ ಬ್ರಾಂಡ್ ಸಾಧನಗಳಿಗೆ ಹೆಸರುವಾಸಿಯಾದ ಹುಯಾಮಿ ಕಾರ್ಪೋರೇಷನ್ ಅಮೇಜ್ಹ್ ಫಿಟ್ ಟಿ ರೆಕ್ಸ್ ಸ್ಮಾರ್ಟ್‌ವಾಚ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ಯೋಚಿಸುತ್ತಿದೆ.
ಈ ವಾಚುಗಳ ವೈಶಿಷ್ಟ್ಯತೆ ಏನು ಗೊತ್ತಾ?
ಫಿಟ್‌ನೆಸ್ ಉತ್ಸಾಹಿಗಳಿಗೆ ಇದು ಉತ್ತಮ ಆಯ್ಕೆಯಾಗಿದೆ. ಈ ಸ್ಮಾರ್ಟ್‌ವಾಚ್ 1.3 ಇಂಚಿನ ಅಮೋಲೆಡ್ ಪರದೆಯನ್ನು ಹೊಂದಿದೆ. ಹಾಗೆಯೇ ಇದು 16.7 ಮಿಲಿಯನ್ ಬಣ್ಣಗಳನ್ನು ಪ್ರದರ್ಶಿಸುವ ಸಾಮರ್ಥ್ಯವನ್ನು ಹೊಂದಿದೆ.
20 ಗಂಟೆಗಳ ಜಿಪಿಎಸ್, ಗ್ಲೋನಾಸ್, ಬಯೋಟ್ರಾಕರ್ ಪಿಪಿಜಿ ಆಪ್ಟಿಕಲ್ ಹೃದಯ ಬಡಿತ ಸಂವೇದಕ, ಸುಧಾರಿತ ಚಟುವಟಿಕೆ ಟ್ರ್ಯಾಕರ್ ಅನ್ನು ಹೊಂದಿದೆ.
ಟಿ ರೆಕ್ಸ್ 20 ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ. ಸೈಕ್ಲಿಂಗ್, ಸ್ಕೀಯಿಂಗ್ ಚಟುವಟಿಕೆಗಳನ್ನು ಪತ್ತೆಹಚ್ಚುವ 14 ಕ್ರೀಡಾ ವಿಧಾನಗಳಲ್ಲಿಯೂ ಬರಲಿದೆ.
ಅಮಾಜ್ಹ್ ಫಟ್ ಸ್ಮಾರ್ಟ್‌ವಾಚ್ ಗಟ್ಟಿ ಮುಟ್ಟಾಗಿದ್ದು ವಿಪರೀತ ತಾಪಮಾನವನ್ನು ತಡೆದುಕೊಳ್ಳುವ ಸಾಮಾರ್ಥ್ಯವನ್ನೂ ಹೊಂದಿದ್ದು ಭಾರತದ ವಾತಾವರಣಕ್ಕೆ ಹೊಂದುವಂತೆ ಇದನ್ನು ತಯಾರಿಸಲಾಗುತ್ತಿದೆ.