ರೆಬೆಲ್‌ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ನಾಯಕರಾಗಿ ನಟಿಸುತ್ತಿರುವ “ಅಮರ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಲವರ್ ಬಾಯ್ ಆಗಿ ಯಂಗ್ ರೆಬೆಲ್ ಸ್ಟಾರ್ ಮಿಂಚಿದ್ದಾರೆ. ಅಲ್ಲದೇ 2ನಿಮಿಷ, 9ಸೆಕೆಂಡ್‍ಗಳು ಇರುವ ಈ ಟ್ರೈಲರ್ನಲ್ಲಿ ಅಭಿಷೇಕ್ ಹಾಗೂ ತಾನ್ಯಾಹೋಪ್ ನಡುವಿನ ಪ್ರೀತಿಯ ಪಯಣದ ಆರಂಭ ಹಾಗೂ ಆ ಮನಸ್ಸುಗಳ ನಡುವಿನ ಪ್ರೀತಿಯ ಹುಟ್ಟಿನ ದೃಶ್ಯಗಳನ್ನು ತೋರಿಸಲಾಗಿದ್ದು, ಇದೊಂದು ಪಕ್ಕಾ ಲವ್ ಸ್ಟೋರಿ ಎನ್ನುವುದು ತಿಳಿಯುತ್ತದೆ.
ವಿಶೇಷವಾಗಿ ಈ ಚಿತ್ರದಲ್ಲಿ ಅಂಬರೀಶ್ ಅಭಿನಯದ “ಒಲವಿನ ಉಡುಗೊರೆ’ ಸಿನಿಮಾದ ಹಾಡನ್ನೂ ಬಳಸಿಕೊಳ್ಳಲಾಗಿದ್ದು, ಜತೆಗೆ ಸ್ಯಾಂಡಲ್‍ವುಡ್‍ನ ಡಿ-ಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು ಸಂದೇಶ್ ಕಂಬೈನ್ಸ್ ಮೂಲಕ ಸಂದೇಶ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ನಾಗಶೇಖರ್ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆಯಿದ್ದು, ಸತ್ಯ ಹೆಗಡೆ ಛಾಯಾಗ್ರಹಣ, ಜೊ.ನಿ ಹರ್ಷ ಸಂಕಲನ ಕಾರ್ಯವಿದೆ.
ಚಿತ್ರದ ಹಾಡುಗಳಿಗೆ ಧನಂಜಯ್, ಇಮ್ರಾನ್, ಕಲೈ ನೃತ್ಯ ಸಂಯೋಜನೆಯಿದ್ದು, ರವಿವರ್ಮ, ಥ್ರಿಲ್ಲರ್ ಮಂಜು, ಅಂಬು ಅರಿವು ಸಾಹಸ ನಿರ್ದೇಶನವಿದೆ. ಅಭಿಷೇಕ್‌ಗೆ ನಾಯಕಿಯಾಗಿ ತಾನ್ಯಾ ಹೋಪ್ ಜೋಡಿಯಾಗಿದ್ದು, ಉಳಿದಂತೆ ಸುಧಾರಾಣಿ, ದೇವರಾಜ್, ದೀಪಕ್ ಶೆಟ್ಟಿ, ಅರುಣ್ ಸಾಗರ್, ಚಿಕ್ಕಣ್ಣ, ಸಾಧುಕೋಕಿಲ, ನಿರೂಪ್ ಭಂಡಾರಿ ಮುಂತಾದ ಕಲಾವಿದರ ತಾರಾಗಣವಿದೆ.