ಜಮ್ಮು: ಅಮರನಾಥ ಯಾತ್ರಿಕರು ಅತಿಥಿಗಳು, ಅವರು ನಮ್ಮ ಗುರಿಯಲ್ಲ ಎಂದು ಹಿಜ್ಬುಲ್ ಮುಜಾಯಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ರಿಯಾಜ್ ನಾಯ್ಕು ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಅದೀಗ ವೈರಲ್ ಆಗಿದೆ.
ಯಾತ್ರಿಕರ ಮೇಲೆ ದಾಳಿಗೆ ಸಜ್ಜಾಗಿರುವ ವಿಚಾರವನ್ನು ತಳ್ಳಿ ಹಾಕಿರುವ ನಾಯ್ಕು ,
ನಾವು ಎಂದಿಗೂ ಯಾತ್ರಿಕರ ಮೇಲೆ ದಾಳಿ ಮಾಡಿಲ್ಲ. ಯಾತ್ರಿಕರು ನಮ್ಮ ಟಾರ್ಗೆಟ್ ಅಲ್ಲ, ಅವರು ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಆಗಮಿಸುತ್ತಾರೆ. ಅವರು ಅತಿಥಿಗಳು ಎಂದಿದ್ದಾನೆ.
ನಾವು ಯಾತ್ರಿಕರ ನಡುವೆ ಸಂಘರ್ಷ ಹೊಂದಿಲ್ಲ. ಯಾರು ನಮ್ಮನ್ನು ಗನ್ ಹಿಡಿಯುವಂತೆ ಮಾಡಿದ್ದಾರೋ ಅವರ ವಿರುದ್ಧ ನಮ್ಮ ಹೋರಾಟ, ನಮ್ಮ ಹಕ್ಕುಗಳು ಮತ್ತು ಸ್ವಾತಂತ್ರ್ಯಕ್ಕಾಗಿ ನಾವು ನಿರಂತರ ಹೋರಾಟ ಮಾಡುವುದಾಗಿ ಹೇಳಿದ್ದಾನೆ.
ಆದರೆ ಈ ವಿಡಿಯೋವನ್ನು ಇದುವರಗೆ ಧೃಡಿಕರೀಸಲಾಗಿಲ್ಲ. ಪ್ರಸಕ್ತ ಸಾಲಿನ ಮೊದಲ ಬ್ಯಾಚ್ ಬುಧವಾರ ಬೆಳಗ್ಗೆ ಜಮ್ಮುವಿನ ಭಗವತಿ ನಗರದ ಬೇಸ್ ಕ್ಯಾಂಪ್‌ನಿಂದ ಅಮರನಾಥ ಯಾತ್ರೆ ಕೈಗೊಂಡ ವೇಳೆಯಲ್ಲೆ ಈ ವಿಡಿಯೋ ವೈರಲ್‌ಆಗಿದೆ.
ಉಗ್ರರ ದಾಳಿ ಸಾಧ್ಯತೆಯ ಹಿನ್ನೆಲೆಯಲ್ಲಿ ವ್ಯಾಪಕ ಭದ್ರತೆಯ ನಡುವೆ ಅಮರ ನಾಥ ಯಾತ್ರೆ ನಡೆಸಲಾಗುತ್ತಿದೆ.
ಪ್ರಸಕ್ತ ಸಾಲಿನಲ್ಲಿ ದೇಶದ ಎಲ್ಲಾ ಭಾಗಗಳಿಂದ 2 ಲಕ್ಷ ಮಂದಿ ಯಾತ್ರೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಇವರಲ್ಲಿ ದೇಶದ ಬೇರೆ ಬೇರೆ ಭಾಗಗಳಿಂದ ಸಾಧುಗಳೂ ಪಾಲ್ಗೊಳ್ಳುತ್ತಿದ್ದಾರೆ.