Advertisement

ಅಮರನಾಥ ಗುಹೆ ನಿಶ್ಶಬ್ದ ಪ್ರದೇಶವಲ್ಲ

07:35 AM Dec 15, 2017 | Harsha Rao |

ನವದೆಹಲಿ: ಅಮರನಾಥ ಗುಹಾಂತರ ದೇಗುಲ ನಿಶ್ಶಬ್ದ ಪ್ರದೇಶ ಎಂದು ಪರಿಗಣಿಸಲಾಗಿಲ್ಲ. ಕೇವಲ ದೇಗುಲ ಎದುರು ಭಾಗದಲ್ಲಿರುವ ಮುಖ್ಯ ಲಿಂಗದ ಎದುರು ಭಾಗಕ್ಕೆ ಬಂದಾಗ ಮಾತ್ರ ಮೌನವಾಗಿರಬೇಕು ಎಂದಿದೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ. ಅಲ್ಲಿ ಮಂತ್ರ ಪಠಣ, ಭಜನೆಗೆ ಯಾವುದೇ ನಿರ್ಬಂಧ ವಿಧಿಸಿಲ್ಲವೆಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ) ಗುರುವಾರ ಸ್ಪಷ್ಟನೆ ನೀಡಿದೆ. ಬುಧವಾರದ ತನ್ನ ಆದೇಶದಲ್ಲಿ, ಎನ್‌ಜಿಟಿಯು ಅಮರನಾಥ ಗುಹೆಯಲ್ಲಿ ಮಂತ್ರಘೋಷ, ಜಯಕಾರ, ಘಂಟಾನಾದಗಳನ್ನು ನಿರ್ಬಂಧಿಸಿರುವುದಾಗಿ ವರದಿಯಾಗಿತ್ತು. ಅದಕ್ಕೆ ಪ್ರತಿಭಟನೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ಹೊರಬಿದ್ದಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next