Advertisement

ಖಾಲಿಸ್ಥಾನ್‌ ಅನುಕಂಪದ ಕೆನಡ ರಕ್ಷಣಾ ಸಚಿವರನ್ನು ಭೇಟಿ ಆಗಲ್ಲ: ಸಿಂಗ್

11:43 AM Apr 13, 2017 | udayavani editorial |

ಚಂಡೀಗಢ : ಕೆನಡದ ರಕ್ಷಣಾ ಸಚಿವ ಹರ್‌ಜಿತ್‌ ಸಜ್ಜನ್‌ ಅವರನ್ನು ಪಂಜಾಬ್‌ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ಅವರು “ಖಾಲಿಸ್ಥಾನ್‌ ಸಹಾನುಭೂತಿಯ ಮನುಷ್ಯ’ ಎಂದು ಕರೆದಿದ್ದಾರೆ. ಅಂತೆಯೇ ತಾನು ಅವರನ್ನು ಈ ತಿಂಗಳಾಂತ್ಯದಲ್ಲಿ ನಡೆಯಲಿರುವ ಅವರ ಭಾರತ ಭೇಟಿಯ ಸಂದರ್ಭದಲ್ಲಿ ಭೇಟಿಯಾಗಲು ಇಷ್ಟಪಡುವುದಿಲ್ಲ ಎಂದು ಖಂಡತುಂಡವಾಗಿ ಹೇಳಿದ್ದಾರೆ. 

Advertisement

ಟಿವಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ  ಭಾಗವಹಿಸಿ ಮಾತನಾಡುತ್ತಿದ್ದ  ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ಅವರು, “ಹರ್‌ಜಿತ್‌ ಸಜ್ಜನ್‌ ಅವರು ತಮ್ಮ ತಂದೆಯಂತೆ ತಾವು ಕೂಡ ಖಾಲಿಸ್ಥಾನ್‌ ಬಗ್ಗೆ ಸಹಾನುಭೂತಿ ಉಳ್ಳ ವ್ಯಕ್ತಿಯಾಗಿದ್ದಾರೆ’ ಎಂದು ನೇರವಾಗಿ ನುಡಿದರು. 

ಕೆನಡದ ಜಸ್ಟಿನ್‌ ಟ್ರೂಡಿಯೋ ಅವರ ಸಂಪುಟದಲ್ಲಿ ಖಾಲಿಸ್ಥಾನ್‌ ಸಹಾನುಭೂತಿ ಹೊಂದಿರುವ ಕನಿಷ್ಠ ಐವರು ಸಚಿವರಿದ್ದಾರೆ; ಅವರೊಂದಿಗೆ ಯಾವುದೇ ನಂಟು, ಸಂಪರ್ಕ ಹೊಂದಿರಲು ನಾನು ಬಯಸುವುದಿಲ್ಲ’ ಎಂದು ಹೇಳಿದರು. 

“ನಾನು ಕೆನಡ ಪ್ರವೇಶಿಸುವುದನ್ನು ತಡೆಯುವಂತೆ ಅವರು ಸರಕಾರವನ್ನು ಒತ್ತಾಯಿಸಿದ್ದರು. ನಾನು ನನ್ನ ಪಂಜಾಬ್‌ ಮಿತ್ರರನ್ನು ಕಾಣಲು ಕೆನಡಕ್ಕೆ ಹೋಗಿದ್ದೆನೆಯೇ ಹೊರತು ಚುನಾವಣಾ ಪ್ರಚಾರಕ್ಕೆ ಅಲ್ಲ’ ಸಿಂಗ್‌ ಹೇಳಿರುವುದನ್ನು ಉಲ್ಲೇಖೀಸಿ ಅವರ ತಂಡದವರು ಕಾರ್ಯಕ್ರಮದ ಬಳಿಕ ಹೊರಡಿಸಿದ ಹೇಳಿಕೆಯು ತಿಳಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next