Advertisement

ಅಮರೇಶ್ವರ ರಥೋತ್ಸವ ಸಂಪನ್ನ

03:16 PM Feb 16, 2018 | |

ಔರಾದ: ಪಟ್ಟಣದ ಗ್ರಾಮ ದೇವತೆ ಹಾಗೂ ಉದ್ಭವಲಿಂಗ ಅಮರೇಶ್ವರ ರಥೋತ್ಸವ ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಅಮರೇಶ್ವರ ಮಂದಿರ ಬಳಿ ಬಸವರಾಜ ದೇಶಮುಖ, ತಹಶೀಲ್ದಾರ ಎಂ. ಚಂದ್ರಶೇಖರ, ಪಪಂ ಸದಸ್ಯ ಕುಮಾರ ದೇಶಮುಖ, ಮಾಜಿ ಜಿಪಂ ಸದಸ್ಯ ವಸಂತ ಬಿರಾದರ ಅವರು ರಥೋತ್ಸವಕ್ಕೆ ಚಾಲನೆ ನೀಡಿದರು. ಅಮರೇಶ್ವರ ಮಂದಿರದಿಂದ ಬಸವೇಶ್ವರ ವೃತ್ತದ ಮುಖ್ಯರಸ್ತೆ ಮಾರ್ಗವಾಗಿ ಅಗ್ನಿಕುಂಡದ ವರೆಗೂ ರಥೋತ್ಸವ ನಡೆಯಿತು.

Advertisement

ಶಾಸಕ ಪ್ರಭು ಚವ್ಹಾಣ, ಬೀದರ ಸಂಸದ ಭಗಂವತ ಖೂಬಾ, ಕಾಂಗ್ರೆಸ್‌ ಮುಖಂಡ ಡಾ| ಲಕ್ಷ್ಮಣ ಸೋರಳಿಕರ್‌, ದಯಾನಂದ ಘೂಳೆ, ವೀರೇಶ ಅಲ್ಮಾಜೆ, ಗಜಾನಂದ  ಟೀಗೆ, ಆನಂದ ದ್ಯಾಡೆ, ಅನೀಲ ಹೇಡೆ, ಅನೀಲಕುಮಾರ ನಿರ್ಮಳೆ, ಸಂತೋಷ ಚಾಂಡೇಶ್ವರೆ, ಅಮರ ಔರಾದೆ, ಶ್ರೀನಿವಾಸ ಖೂಬಾ, ಶರಣಪ್ಪ ಪಾಟೀಲ್‌ ರಥೋತ್ಸವದಲ್ಲಿ ಹೆಜ್ಜೆ ಹಾಕಿದರು.

ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣಾ ಹಾಗೂ ಪಟ್ಟಣದ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತರು ಪಾಲ್ಗೊಂಡಿದ್ದರು.

ರಂಗೋಲಿ ಸ್ಪಥೆ: ರಥೋತ್ಸವನಿಮಿತ್ತ ಪಟ್ಟಣದ ಅಮರೇಶ್ವರ ದೇವಸ್ಥಾನ ಆಡಳಿತ ಮಂಡಳಿಯಿಂದ ರಂಗೋಲಿ ಹಾಗೂ ಚಿತ್ರಕಲೆ ಸ್ಪರ್ಧೆ ಆಯೋಜಿಸಲಾಗಿತ್ತು. ಶಟಕಾರ ಬಡಾವಣೆ, ದೇಶಮುಖ ಬಡಾವಣೆ ಹಾಗೂ ಇನ್ನಿತರ ಬಡಾವಣೆಯಲ್ಲಿನ ಮಹಿಳೆಯರು, ಯುವತಿಯರು ರಂಗೋಲೆ ಬಿಡಿಸಿ ಜಾತ್ರೆಗೆ ಮೆರಗು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next