Advertisement

ಮೀಸಲಾತಿ ನೆಚ್ಚಿಕೊಂಡು ಜೀವನ ಮಾಡಬೇಡಿ.. ನಿಮ್ಮ ಪ್ರಯತ್ನದಿಂದ ಮುಂದುವರೆಯಿರಿ : ಅಮರೇಗೌಡ

02:02 PM Apr 05, 2022 | Team Udayavani |

ಕುಷ್ಟಗಿ : ಮೀಸಲಾತಿ ನೆಚ್ಚಿಕೊಂಡು ಜೀವನ ಮಾಡಬೇಡಿ.. ನಿಮ್ಮ ವಿದ್ವಾತ್, ಚಾಣಕ್ಯತನದಿಂದ ಪ್ರಯತ್ನವಾದಿಗಳಾಗಿ ಮುಂದುವರೆಯಿರಿ ಎಂದು‌ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.

Advertisement

ತಾಲೂಕಾಡಳಿತ ತಾ.ಪಂ. ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಡಾ. ಬಾಬು ಜಗಜೀವನರಾಮ್ 115ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ಯಾರ ಸ್ವತ್ತು ಅಲ್ಲ. ಸತತ ಪ್ರಯತ್ನದಿಂದ ಶೈಕ್ಷಣಿಕ‌ ಸಾಧನೆಗೆ ಸಾಕಷ್ಟು ಅವಕಾಶವಿದೆ. ಬಾಬು ಜೀವನರಾಮ್ ಅವರ ತತ್ವಾದರ್ಶಗಳು ದಲಿತರಿಗೆ ಮೀಸಲು ಅಲ್ಲ‌, ಎಲ್ಲ‌ ವರ್ಗಕ್ಕೂ ಮೀಸಲು‌ ಎಂದರು. ಬಾಬು ಜಗಜೀವನರಾಮ್ ಅವರು ಕೃಷಿಗೆ ಒತ್ತು ನೀಡಿದ್ದರು. ದೇಶವನ್ನು ಕೃಷಿಯಲ್ಲಿ ಸ್ವಾವಲಂಬಿ ಸಾಧಿಸಲು ಅವರ ಬಾಬೂಜಿಯವರು ಸತತವಾಗಿ 30 ವರ್ಷ ಸಚಿವರಾಗಿ ಸೇವೆ ಸಲ್ಲಿಸಿ, ದೇಶದ ಉಪ ಪ್ರಧಾನಿಗಳಾಗಿದ್ದನ್ನು ಸ್ಮರಿಸಿದರು.

ತಹಶೀಲ್ದಾರ ಎಂ.ಸಿದ್ದೇಶ ಮಾತನಾಡಿ ಉದ್ಯೋಗ ಕ್ಷೇತ್ರಗಳಲ್ಲಿ ಹಲವು ದಾರಿಗಳಿದ್ದರೂ ಇದೆಲ್ಲವುದಕ್ಕೂ ಮೂಲ ಶಿಕ್ಷಣವಾಗಿದೆ ಎಂದರು.

ಸಿಆರ್ ಪಿ ಶರಣಪ್ಪ ತುಮರಿಕೊಪ್ಪ ಮಾತನಾಡಿ, ಬಾಬು ಜಗ ಜೀವನರಾಮ್ ಅವರು‌ ಸೇರಿದಂತೆ ಹಲವು ಮಹಾನೀಯರ ದಿನಾಚರಣೆ ದಿನವೂ ಆಚರಣೆಯಾಗಬೇಕಿದೆ ಎಂದರು.

ಇದನ್ನೂ ಓದಿ : ರಾಜ್ಯ ಸರ್ಕಾರಿ ನೌಕರರಿಗೆ ಶೇ. 2.75 ತುಟ್ಟಿಭತ್ಯೆ ಹೆಚ್ಚಳ : ಜನವರಿಯಿಂದಲೇ ಪೂರ್ವಾನ್ವಯ

Advertisement

ಸಿಪಿಐ ನಿಂಗಪ್ಪ ರುದ್ರಪ್ಪಗೋಳ, ತಾ.ಪಂ.ಇಓ ಹನುಮಂತಗೌಡ, ದಲಿತ ಮುಖಂಡ ಶುಖರಾಜ ತಾಳಕೇರಿ, ಪುರಸಭೆ ಸದಸ್ಯ ವಸಂತ‌ ಮೇಲಿನಮನಿ, ಶಿವಪುತ್ರಪ್ಪ ಗುಮಗೇರಿ, ಪಂಚಾಯತ್ ರಾಜ್ ಇಂಜಿನೀಯರಿಂಗ್ ಇಲಾಖೆಯ ಎಇಇ ಕೈಲಾಸ್, ಬಿಇಒ ಸುರೇಂದ್ರ ಕಾಂಬ್ಳೆ, ಸಿಡಿಪಿಓ ಅಮರೇಶ ಹಾವಿನಾಳ, ಸಮಾಜ ಕಲ್ಯಾಣ ಅಧಿಕಾರಿ ಬಾಲಚಂದ್ರ ಸಂಗನಾಳ, ಗ್ರಾ.ಪಂ. ಸದಸ್ಯ ರಾಯಪ್ಪ ನಿಡಶೇಸಿ, ಶ್ರೈಶೈಲ ತುಮರಿಕೊಪ್ಪ, ವಿಶ್ವನಾಥ ರಾಠೋಡ್, ಟಿ. ಕೃಷ್ಣಮೂರ್ತಿ, ಮಾಜಿ ಸೈನಿಕ, ಯಲ್ಲಪ್ಪ ವಗ್ಗರ, ರಮೇಶ ಮೇಲಿನಮನಿ, ಬಾಳಪ್ಪ ಸೇಬಿನಕಟ್ಟಿ ಮತ್ತೀತರಿದ್ದರು.

ಪ್ರತಿಭಾನ್ವಿತರಾದ ಮಹೇಶ್ವರಿ ಟೆಂಗುಂಟಿ ಕನಕಪ್ಪ ಮಾದರ, ಅಶ್ಮೀತಾ ಬ್ರಹ್ಮಾವರ, ಗ್ಯಾನಪ್ಪ ಕಡೇಮನಿ ಅವರನ್ನು ತಾಲೂಕಾಡಳಿದಿಂದ ಸನ್ಮಾನಿಸಲಾಯಿತು. ದಲಿತ ಮುಖಂಡ ಶುಕರಾಜ ತಳಕೇರಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತಲಾ 2ಸಾವಿರ ರೂ. ಪ್ರೋತ್ಸಾಹ ಧನ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next