Advertisement

Amaravati ಆಂಧ್ರಪ್ರದೇಶದ ರಾಜಧಾನಿಯಾಗಲಿದೆ: ಚಂದ್ರಬಾಬು ನಾಯ್ಡು ಘೋಷಣೆ

03:34 PM Jun 11, 2024 | Team Udayavani |

ಹೈದರಾಬಾದ್:‌ ಇನ್ನು ಕೆಲವೇ ವರ್ಷಗಳಲ್ಲಿ ಅಮರಾವತಿ ಆಂಧ್ರಪ್ರದೇಶದ ರಾಜಧಾನಿಯಾಗಲಿದೆ ಎಂದು ತೆಲುಗು ದೇಶಂ ಪಕ್ಷದ ಎನ್.ಚಂದ್ರಬಾಬು ನಾಯ್ಡು, ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರಕ್ಕೂ ಮೊದಲು ತಿಳಿಸಿದ್ದಾರೆ.

Advertisement

ಅಮರಾವತಿ ಆಂಧ್ರಪ್ರದೇಶದ ಏಕೈಕ ರಾಜಧಾನಿಯಾಗಲಿದೆ, ಅಷ್ಟೇ ಅಲ್ಲ ಬಹುನಿರೀಕ್ಷೆಯ ಪೋಲಾವರಂ ಯೋಜನೆಯನ್ನೂ ಪೂರ್ಣಗೊಳಿಸುವುದಾಗಿ ಚಂದ್ರಬಾಬು ನಾಯ್ಡು ಈ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ.

“ಅಮರಾವತಿ ನಮ್ಮ ರಾಜಧಾನಿಯಾಗಲಿದೆ. ನಮಗೆ ಅಭಿವೃದ್ಧಿ ಪರವಾದ ರಾಜಕೀಯ ಬೇಕೆ ಹೊರತು, ಪೂರ್ವಾಗ್ರಹ ಪೀಡಿತ ರಾಜಕೀಯ ಅಗತ್ಯವಿಲ್ಲ.. ವಿಶಾಖಪಟ್ಟಣಂ ರಾಜ್ಯದ ವಾಣಿಜ್ಯ ಹಬ್‌ ಆಗಲಿದೆ. ನಾನು ಆಂಧ್ರದಲ್ಲಿ ಮೂರು ರಾಜಧಾನಿ ಮಾಡಲು ಹೊರಟಿರುವ ಜನರ ರೀತಿ ರಾಜಕಾರಣ ಮಾಡುವುದಿಲ್ಲ. ವಿಶಾಖಪಟ್ಟಣ ನನಗೆ ಪೂರ್ಣ ಅಧಿಕಾರ ನೀಡಿದೆ. ಆ ನಿಟ್ಟಿನಲ್ಲಿ ರಾಯಲಸೀಮೆಯನ್ನು ಭರ್ಜರಿಯಾಗಿ ಅಭಿಪಡಿಸುವುದಾಗಿ ಈ ಸಂದರ್ಭದಲ್ಲಿ ನಾಯ್ಡು ಹೇಳಿದರು.

ಆಂಧ್ರಪ್ರದೇಶದಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ ಬರೋಬ್ಬರಿ 164 ಸ್ಥಾನಗಳನ್ನು ಪಡೆಯುವ ಮೂಲಕ ಸ್ಪಷ್ಟ ಬಹುಮತ ಪಡೆದು ಅಧಿಕಾರದ ಗದ್ದುಗೆ ಏರುವ ಮೂಲಕ ಅಮರಾವತಿ ಯೋಜನೆ ಮುನ್ನೆಲೆಗೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next