ಇದು “ಅಮರಶಿಲ್ಪಿ’ ಜಕಣಾಚಾರಿಯ ಸ್ವಂತ ಊರು. ಅವನ ಕಾಲಕ್ಕೂ ಹಿಂದೆ ಈ ಸ್ಥಳಕ್ಕೆ “ಕ್ರೀಡಾಪುರ’ ಎಂಬ ಹೆಸರಿತ್ತು. ಜಕಣಾಚಾರಿ ತನ್ನ ಊರಲ್ಲೇ ಚೆನ್ನಕೇಶವನ ದೇವಾಲಯ ನಿರ್ಮಿಸಲು ತೀರ್ಮಾನಿಸುತ್ತಾನೆ. ಇದಕ್ಕೆ ಪೂರಕವಾಗಿ, ರಾಜ ವಿಷ್ಣುವರ್ಧನನು ವಿಗ್ರಹದ ಕೆತ್ತನೆಗೆಂದೇ “ಕೃಷ್ಣಶಿಲೆ’ಯನ್ನು ಕೊಡುಗೆ ನೀಡುತ್ತಾನೆ. ತಾನು ಕೆತ್ತಿದ ವಿಗ್ರಹದಲ್ಲಿ ಮಗ ಡಕಣಾಚಾರಿಯು ದೋಷ ಹುಡುಕಿದ್ದರಿಂದ, ಜಕಣಾಚಾರಿ ತಾನು ಹೇಳಿಕೊಂಡಂತೆ ತನ್ನ ಬಲಗೈಯನ್ನು ಕತ್ತರಿಸಿಕೊಳ್ಳುತ್ತಾನೆ. ಬಳಿಕ ಮಗನ ಸಹಾಯದಿಂದ, ತನ್ನ ಎಡಗೈಯಲ್ಲಿ ಸುಂದರ ಚೆನ್ನಕೇಶವ ವಿಗ್ರಹವನ್ನು ಕೆತ್ತಿ ಪೂರ್ಣಗೊಳಿಸುತ್ತಾನೆ. ವಿಗ್ರಹ ಪೂರ್ಣಗೊಳ್ಳುವುದರೊಳಗೆ ಆತನಿಗೆ “ಬಲಗೈ’ ವರವಾಗಿ ಬರುತ್ತದೆ. ಆದ್ದರಿಂದ, ಈ ಊರನ್ನು “ಕೈ ಕೊಟ್ಟ ದಳ’ ಅಂತ ಕರೆಯಲಾಯಿತು. ಇದೇ ಮುಂದೆ “ಕೈದಾಳ’ ಆಯಿತು ಎಂಬ ಪ್ರತೀತಿ ಇದೆ. ತುಮಕೂರಿನಿಂದ ಕುಣಿಗಲ್‌ಗೆ ಹೋಗುವ ಮಾರ್ಗದಲ್ಲಿ ಗೂಳೂರು ಎಂಬ ಊರಿನ ಬಳಿ, ಈ ಕೈದಾಳ ಚೆನ್ನಕೇಶವ ದೇವಸ್ಥಾನ ಸಿಗುತ್ತದೆ.
– ಕಾವ್ಯ ಎನ್., ತುಮಕೂರು