Advertisement

ಅಮರಶಿಲ್ಪಿ ಜಕಣಾಚಾರಿ ಶ್ರೇಷ್ಠ ಶಿಲ್ಪಕಲಾಕಾರ: ದೊಡ್ಡೆಂದ್ರ ಶ್ರೀ

07:18 AM Jan 14, 2019 | |

ಕಲಬುರಗಿ: ಅಮರಶಿಲ್ಪಿ ಜಕಣಾಚಾರಿ ಕಟ್ಟಿಗೆ, ಕಲ್ಲು ಬಂಡೆಗಳಿಂದ ತಾವು ತಯಾರಿಸಿದ ಶಿಲ್ಪಕಲೆಗಳ ಮೂಲಕ ಇಂದಿಗೂ ಜೀವಂತವಾಗಿದ್ದಾರೆ ಎಂದು ಸುಲೇಪೇಟ ದೊಡ್ಡೆಂದ್ರ ಮಹಾಸ್ವಾಮೀಜಿ ಹೇಳಿದರು.

Advertisement

ನಗರದಲ್ಲಿ ಹಮ್ಮಿಕೊಂಡಿದ್ದ ಅಮರಶಿಲ್ಪಿ ಜಕಣಾಚಾರಿಯವರ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಮರಶಿಲ್ಪಿ ಜಕಣಾಚಾರ್ಯರು ಉತ್ತಮ ಕಲಾಕೃತಿಗಳನ್ನು ನಿರ್ಮಿಸಿ ನಾಡಿನ ಅಲಂಕಾರ ಹೆಚ್ಚಿಸಿದ್ದಾರೆ. ಅವರ ಪರಿಶ್ರಮದ ಫಲವಾಗಿ ನಾಡಿನಾದ್ಯಂತ ಇರುವ ಕಲಾಕೃತಿಗಳನ್ನು ವೀಕ್ಷಿಸಲು ದೇಶ ವಿದೇಶಗಳಿಂದ ಯಾತ್ರಿಕರು ಆಗಮಿಸುವಂತೆ ಮಾಡಿದ್ದಾರೆ ಎಂದರು.

ಅಮರ ಶಿಲ್ಪಿ ಜಕಣಾಚಾರಿ ಅವರಂತಹ ಶಿಲ್ಪಿ ಇನ್ನು ಯಾರೂ ಜನಿಸಿಲ್ಲ. ಕಲ್ಲಿನಲ್ಲಿ ಕಸೂತಿ ಮಾಡಿ ಕಲ್ಲಹರಿಸಿ ಹೂ ಮಾಡಿದ ಮಹಾನ್‌ ವ್ಯಕ್ತಿ. ಬೇಲೂರು, ಹಳೆಬೀಡು, ಹಂಪಿ, ಐಹೊಳೆ, ಪಟ್ಟದಕಲ್ಲು ಮುಂತಾದ ಅನೇಕ ಯಾತ್ರಾ ಸ್ಥಳಗಳಲ್ಲಿ ಅವರು ಶಿಲೆಯಲ್ಲಿ ಜೀವಂತ ಕಲೆ ನಿರ್ಮಾಣ ಮಾಡಿದ್ದಾರೆ ಎಂದು ಹೇಳಿದರು. ಜಗತ್‌ ವೃತ್ತದಿಂದ ಸಂತ್ರಾಸವಾಡಿ ಕಾಳಿಕಾ ಮಂದಿರದವರೆಗೆ ಅಮರಶಿಲ್ಪಿ ಜಕಣಾಚಾರಿ ಭಾವಚಿತ್ರದ ಮೆರವಣಿಗೆ ನಡೆಯಿತು. ದೇವಿಂದ್ರಪ್ಪ ವಿಶ್ವಕರ್ಮ, ಅಮೃತ ಹಳ್ಳಿ, ಶರಣು ಎಂ. ಪಂಚಾಳ, ಈರಣ್ಣ ಕವಲಗಾ, ಸುಧಾಕರ ಮುತ್ಯಾನ ಬಬಲಾದ, ಶರಣು ರಾಮನಗರ, ಶರಣು ಫಿಲ್ಟರಬೆಡ್‌ ಸುಲ್ತಾನಪೂರ, ವಿಠಲರಾವ್‌ ಸುತಾರ, ಭೀಮರಾವ್‌ ಬಡಿಗೇರ, ದತ್ತಾತ್ರೇಯ ವಿಶ್ವಕರ್ಮ, ಮಲ್ಲಿಕಾರ್ಜುನ ದಣ್ಣೂರ, ಹಣಮಂತರಾವ್‌ ರಾಜಾಪೂರ, ನಾಗಮೂರ್ತಿ ದೇವನತೆಗನೂರ, ಸುಮೀತ ಆರ್‌. ಪಾಟೀಲ ಹಾಗೂ ಇತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next