Advertisement

ಅಮರನಾಥದಲ್ಲಿ ಮೇಘಸ್ಪೋಟ : ಬೀದರ್ ಜಿಲ್ಲೆಯ 18 ಯಾತ್ರಾತ್ರಿಗಳು ಸುರಕ್ಷಿತ

05:01 PM Jul 09, 2022 | Team Udayavani |

ಬೀದರ್ : ಜಮ್ಮು- ಕಾಶ್ಮೀರದ ಪ್ರಸಿದ್ಧ ಧಾರ್ಮಿಕ ಸ್ಥಳ ಅಮರನಾಥ ಯಾತ್ರೆಗೆ ಜಿಲ್ಲೆಯಿಂದ ಮೂರು ಪ್ರತ್ಯೇಕ ತಂಡದಲ್ಲಿರುವ ತೆರಳಿರುವ 15 ಜನರು ಸುರಕ್ಷಿತವಾಗಿದ್ದಾರೆ. ಅಮರನಾಥ ಗುಹೆ ಪ್ರದೇಶದಲ್ಲಿ ಮೇಘ ಸ್ಪೋಟ ಹಿನ್ನಲೆ ಆತಂಕದಲ್ಲಿದ್ದ ಯಾತ್ರಾತ್ರಿಗಳ ಕುಟುಂಬಸ್ಥರು ನಿಟ್ಟಿಸಿರು ಬಿಟ್ಟಿದ್ದಾರೆ.

Advertisement

ಅಮರನಾಥ ಕ್ಷೇತ್ರದಲ್ಲಿ ಶುಕ್ರವಾರ ಸಾಯಂಕಾಲ 5 ರ ಸುಮಾರಿಗೆ ಏಕಾಏಕಿ ಮೇಘಸ್ಪೋಟ ಉಂಟಾಗಿ 15 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಇನ್ನೂ ಅನೇಕರು ಸಿಲುಕಿಕೊಂಡಿರುವ ಮಾಹಿತಿ ಇದೆ. ಬೀದರ ಜಿಲ್ಲೆಯಿಂದ ಮೂರು ಪ್ರತ್ಯೇಕ ತಂಡದಲ್ಲಿ ಪ್ರವಾಸ ಕೈಗೊಂಡಿದ್ದ 18 ಜನರು ಸುರಕ್ಷಿತವಾಗಿದ್ದು, ಸ್ಪೋಟಕ್ಕೂ ಮುನ್ನವೇ ಗುಹೆಯಲ್ಲಿ ದರ್ಶನ ಮುಗಿಸಿ ವಾಪಸ್ಸಾಗಿದ್ದಾರೆ. ಇವರನ್ನು ಹೊರತುಪಡಿಸಿ ಜಿಲ್ಲೆಯಿಂದ ಯಾತ್ರೆಗೆ ತೆರಳಿರುವ ಸಾಧ್ಯತೆ ಇದ್ದು, ಇನ್ನೂ ಮಾಹಿತಿ ಲಭ್ಯವಾಗಬೇಕಿದೆ.

ಕಮಲನಗರ ತಾಲೂಕಿನ 6 ಜನ, ಭಾಲ್ಕಿ 2 ಮತ್ತು ಬಸವಕಲ್ಯಾಣದ 1 ಸೇರಿ ಒಟ್ಟು 9 ಜನರ ಒಂದು ತಂಡ ಜು. 3 ಕ್ಕೆ ಹೈದ್ರಾಬಾದ್‌ನಿಂದ ಬಿಟ್ಟು ಜು. 6ಕ್ಕೆ ಪಾಲಗಮ್ ತಲುಪಿದೆ. ನಂತರ ಎರಡು ದಿನ ಅಮರನಾಥನ ದರ್ಶನ ಪಡೆದು ಶುಕ್ರವಾರ ಮೇಘಸ್ಪೋಟಕ್ಕೂ ಮುನ್ನ ಶ್ರೀನಗರಕ್ಕೆ ಆಗಮಿಸಿದ್ದು, ಸಧ್ಯ ವೈಷ್ಣೋದೇವಿ ಪ್ರವಾಸದಲ್ಲಿದೆ. ಬೀದರನ ಶಿವಕುಮಾರ ಸ್ವಾಮಿ ಮತ್ತು ಪ್ರಕಾಶ ಭಂಡಾರಿ ಸೇರಿ ಒಟ್ಟು 8 ಜನರ ಮತ್ತೊಂದು ತಂಡವು ಶುಕ್ರವಾರ ಬೆಳಿಗ್ಗೆವರೆಗೆ ಗುಹೆಯಲ್ಲಿ ದರ್ಶನ ಪಡೆದು ಶ್ರೀನಗರದಲ್ಲಿ ಸುರಕ್ಷಿತ ಸ್ಥಳದಲ್ಲಿ ನೆಲೆಸಿದ್ದಾರೆ. ಇನ್ನೂ ಬೀದರನ ಮಹೇಶ್ವರ ಸ್ವಾಮಿ ಅವರು ತಮ್ಮ ತೆಲಂಗಾಣದ ಮೂವರು ಗೆಳೆಯರೊಂದಿಗೆ ದೇವರ ದರ್ಶನ ಪಡೆದು ವಾಪಸ್ಸಾಗಿದ್ದು, ಬಳಿಕ ಈ ನೈಸರ್ಗಿಕ ಘಟನೆ ಸಂಭವಿಸಿದೆ. ಸಧ್ಯ ಸ್ವಾಮಿ ಅವರು ಸಹ ವೈಷ್ಣೋದೇವ ದರ್ಶನದ ಪ್ರಯಾಣದಲ್ಲಿದ್ದಾರೆ.

ಇದನ್ನೂ ಓದಿ : ದಕ್ಷಿಣ ಕನ್ನಡ ಜಿಲ್ಲೆಯ 27 ಅಮರನಾಥ ಯಾತ್ರಾರ್ಥಿಗಳು ಸುರಕ್ಷಿತ

Advertisement

Udayavani is now on Telegram. Click here to join our channel and stay updated with the latest news.

Next