Advertisement

ಅಮರನಾಥ: ಮೇಘಸ್ಫೋಟಕ್ಕೆ ಮೊದಲೇ ಸುರಕ್ಷಿತವಾಗಿ ತೆರಳಿದ್ದ ಕಲಬುರಗಿಯ ಯಾತ್ರಾರ್ಥಿಗಳು

04:13 PM Jul 09, 2022 | Team Udayavani |

ಕಲಬುರಗಿ: ಜಮ್ಮು ಕಾಶ್ಮೀರದ ಪವಿತ್ರ ಯಾತ್ರಾಸ್ಥಳ ಅಮರನಾಥ ದರ್ಶನಕ್ಕೆ ತೆರಳಿರುವ ಜಿಲ್ಲೆಯ ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದಾರೆ. ಜಿಲ್ಲೆಯ ಅಫಜಲಪುರ ತಾಲೂಕಿನ ದೇವಲ್ ಗಾಣಗಾಪುರದಿಂದ 11 ಹಾಗೂ ಕಲಬುರಗಿ ತಾಲೂಕಿನ ಮುತ್ಯಾನ ಬಬಲಾದ ಮಠದ ಗುರುಪಾದಲಿಂಗ ಮಹಾಸ್ವಾಮಿಗಳ ನೇತೃತ್ವದಲ್ಲಿ ತೆರಳಿದ್ದ 14 ಯಾತ್ರಾರ್ಥಿಗಳು ಸುರಕ್ಷಿತರಾಗಿದ್ದಾರೆ.

Advertisement

ದೇವಲ್ ಗಾಣಗಾಪುರದ ಯಾತ್ರಾರ್ಥಿಗಳು ಶುಕ್ರವಾರ ಸಂಭವಿಸಿದ ಮೇಘಸ್ಫೋಟಕ್ಕಿಂತ ಮುಂಚೆ ದರ್ಶನ ಪಡೆದು ಆಶ್ರಯದ ಟೆಂಟ್ ಗಳಿಗೆ ಬಂದು ತಂಗಿದ್ದಾರೆ.

ಮುತ್ಯಾನ ಬಬಲಾದ ಶ್ರೀ ಗಳು ಹಾಗೂ ಭಕ್ತರು ಶುಕ್ರವಾರ ಬೆಳಿಗ್ಗೆಯೇ ಅಲ್ಲಿಂದ ಹಿಂದುರುಗಿ ವೈಷ್ಣೋದೇವಿ ದರ್ಶನಕ್ಕೆ ತೆರಳಿದ್ದಾರೆ.

ಇದನ್ನೂ ಓದಿ:ಉಗ್ರ ಚಟುವಟಿಕೆಗಳಲ್ಲಿ ಬಿಜೆಪಿ ನಾಯಕರಿಗೆ ನಿಕಟ ಸಂಪರ್ಕ: ಉತ್ತಮ್ ಕುಮಾರ್ ರೆಡ್ಡಿ

Advertisement

ಅಧಿಕೃತ ಪ್ರವಾಸ ಪ್ರಕಾರ ಇನ್ನೇರಡು ದಿನಗಳಲ್ಲಿ ಇವರೆಲ್ಲರೂ ಕಲಬುರಗಿಗೆ ಆಗಮಿಸಲಿದ್ದಾರೆ. ದರ್ಶನ ಆರಂಭವಾದ ಜೂನ್ 30ರಂದೇ ಕಲಬುರಗಿ ನಗರದ ವೈದ್ಯರಾದ ಡಾ. ದೇವಾನಂದ ಬಿರಾದಾರ ನೇತೃತ್ವದಲ್ಲಿ ಮೊದಲ ತಂಡದಲ್ಲೇ ಹಲವರು ಯಾತ್ರಾರ್ಥಿಗಳು ಅಮರನಾಥ ದರ್ಶನ ಪಡೆದುಕೊಂಡು ಬಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next