Advertisement
ಆದರೆ ವಿಶ್ವ ರ್‍ಯಾಂಕಿಂಗ್‌ನಲ್ಲಿ 130ನೇ ಸ್ಥಾನದಲ್ಲಿರುವ ಅಮಂಡಾ ಅವರ ದ್ವಿತೀಯ ಸುತ್ತಿನ ಸ್ಪರ್ಧೆ ನಿರೀಕ್ಷಿಸಿದಷ್ಟು ಸುಲಭವಿಲ್ಲ. ಇಲ್ಲಿ ಅವರು ವಿಂಬಲ್ಡನ್ ಚಾಂಪಿಯನ್, ಸ್ಪೇನಿನ ಗಾರ್ಬಿನ್ ಮುಗುರುಜಾ ಸವಾಲನ್ನು ಎದುರಿಸಬೇಕಿದೆ. ದಿನದ ಇನ್ನೊಂದು ಪಂದ್ಯದಲ್ಲಿ ಬ್ರಝಿಲ್‌ನ ಬೀಟ್ರಿಝ್ ಹದ್ದಾದ್ ಬ್ರಿಟನ್ನಿನ ಹೀತರ್ ವಾಟ್ಸನ್ ಅವರನ್ನು 7-6 (3), 6-2 ಅಂತರದಿಂದ ಸೋಲಿಸಿದರು. ಇವರ ಮುಂದಿನ ಸುತ್ತಿನ ಎದುರಾಳಿ ಚೀನದ ಜಾಂಗ್ ಶುಯಿ.
ಭಾರತದ ಇನ್ ಫಾರ್ಮ್ ಸಿಂಗಲ್ಸ್ ಆಟಗಾರ ಯೂಕಿ ಭಾಂಬ್ರಿ “ಮಯಾಮಿ ಓಪನ್ ಟೆನಿಸ್’ ಪಂದ್ಯಾವಳಿಯ ಪ್ರಧಾನ ಸುತ್ತು ಪ್ರವೇಶಿಸಿದ್ದಾರೆ. ಅರ್ಹತಾ ಸುತ್ತಿನ ಪಂದ್ಯದಲ್ಲಿ ಅವರು ಸ್ವೀಡನ್‌ನ ಎಲಿಯಾಸ್ ವೈಮರ್ ವಿರುದ್ಧ 7-5, 6-2 ಅಂತರದ ಗೆಲುವು ಸಾಧಿಸಿ ಮುನ್ನಡೆಗೈದರು. ಗುರುವಾರ ನಡೆಯಲಿರುವ ಮೊದಲ ಸುತ್ತಿನ ಪಂದ್ಯದಲ್ಲಿ ಯೂಕಿ ಭಾಂಬ್ರಿ ಬೋಸ್ನಿಯಾದ ಮಿರ್ಜಾ ಬಾಸಿಕ್ ವಿರುದ್ಧ ಸೆಣಸಲಿದ್ದಾರೆ. ಇದು ಭಾಂಬ್ರಿ-ಬಾಸಿಕ್ ನಡುವಿನ 2ನೇ ಮುಖಾಮುಖೀ. ಇದಕ್ಕೂ ಮುನ್ನ ಇವರಿಬ್ಬರು 2016ರ ಸೋಫಿಯಾ ಓಪನ್ ಪಂದ್ಯಾವಳಿಯಲ್ಲಿ ಎದುರಾಗಿದ್ದರು. ಅಲ್ಲಿ ಬಾಸಿಕ್ ನೇರ ಸೆಟ್‌ಗಳ ಜಯ ಸಾಧಿಸಿದ್ದರು.