Advertisement
ತಾಂತ್ರಿಕವಾಗಿ ಶ್ರೇಷ್ಠ ಗುಣಮಟ್ಟದ ಆಟದ ಪ್ರದರ್ಶನ ನೀಡಿದ ಸೆಹ್ರಾವತ್ ಅವರು ಹಲವು ಸಮಸ್ಯೆಗಳಿಂದ ಒದ್ದಾಡುತ್ತಿರುವ ಭಾರತೀಯ ಕುಸ್ತಿ ಸಮುದಾಯದಲ್ಲಿ ಹೊಸ ಬೆಳಕನ್ನು ತಂದರು. ನೂತನವಾಗಿ ಆಯ್ಕೆಯಾದ ಫೆಡರೇಶನ್‌ನ ಸದಸ್ಯರ ಅಮಾನತು, ಕಿರಿಯ ಕುಸ್ತಿಪಟುಗಳ ಪ್ರತಿಭಟನೆಯಿಂದ ಕುಸ್ತಿ ರಂಗ ಸಮಸ್ಯೆಯಿಂದ ಒದ್ದಾಡುತ್ತಿದೆ. ಭಾರತೀಯ ಕುಸ್ತಿ ಫೆಡರೇಶನ್ ಅಮಾನತುಗೊಂಡಿದ್ದರಿಂದ ಭಾರತೀಯ ತಂಡವು ಯುನೈಟೆಡ್ ವಿಶ್ವ ಕುಸ್ತಿ (ಯುಡಬ್ಲ್ಯುಡಬ್ಲ್ಯು) ಅಡಿ ಸ್ಪರ್ಧಿಸುತ್ತಿದೆ.
ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಮತ್ತು ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಜಯಿಸಿದ್ದ ದೀಪಕ್ ಪೂನಿಯ 86 ಕೆ.ಜಿ. ವಿಭಾಗದಲ್ಲಿ ಪದಕ ಸುತ್ತಿಗೇರಲು ವಿಫಲರಾಗಿದ್ದಾರೆ. ಅವರು ಮೊದಲ ಸುತ್ತಿನಲ್ಲಿಯೇ ಕಜಾಕ್‌ಸ್ಥಾನದ ಅಜಮತ್ ದೌಲೆಟ್‌ಬೆಕೋವ್ ಅವರಿಗೆ ಶರಣಾಗಿ ಹೊರಬಿದ್ದರು. ರಿಪಚೇಜ್ ಸುತ್ತಿನಲ್ಲಿ ಅವರು ಮೊದಲ ಹೋರಾಟದಲ್ಲಿ ಗೆದ್ದರೂ ಇನ್ನೊಂದರಲ್ಲಿ ಸೋತು ಪದಕ ಗೆಲ್ಲಲು ವಿಫಲರಾದರು.