ಸಿರ್ಸಾ: ದೇಶದ ಖ್ಯಾತ ಧಾರ್ಮಿಕ ನಾಯಕ, ಸ್ವಘೋಷಿತ ದೇವಮಾನವ, ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಶುಕ್ರವಾರ ಹರ್ಯಾಣದ ಪಂಚಕುಲಾ ಸಿಬಿಐ ವಿಶೇಷ ನ್ಯಾಯಾಲಯ ಪ್ರಕಟಿಸಿದ್ದು, 7 ವರ್ಷ ಜೈಲುಶಿಕ್ಷೆ ವಿಧಿಸಿದೆ.
ತೀರ್ಪನ್ನು ಪ್ರಕಟಿಸಿದ ನ್ಯಾಯಾಧೀಶರು, ರಾಮ್ ರಹೀಂ ಸಿಂಗ್ ನನ್ನು ವಶಕ್ಕೆ ಪಡೆಯಲು ಪೊಲೀಸರಿಗೆ ಸೂಚನೆ ನೀಡಿದ್ದರು, ಈ ಹಿನ್ನೆಲೆಯಲ್ಲಿ ರಾಮ್ ರಹೀಂ ಸಿಂಗ್ ನನ್ನು ಪೊಲೀಸರು ಅಂಬಾಲಾ ಜೈಲಿಗೆ ಕರೆದೊಯ್ಯಲಿದ್ದಾರೆ ಎಂದು ಸಂತ್ರಸ್ತೆ ಪರ ವಕೀಲರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಡೇರಾ ಸಚ್ಚಾ ಸೌದಾ ಮುಖ್ಯಸ್ಥ ರಾಮ್ ರಹೀಮ್ ಸಿಂಗ್ 2.25ಕ್ಕೆ ಹಿಂಬಾಗಿಲ ಮೂಲಕ ವಿಶೇಷ ಸಿಬಿಐ ಕೋರ್ಟ್ ಅನ್ನು ಪ್ರವೇಶಿಸಿದ್ದ. 235ರಿಂದ ಸಿಬಿಐ ನ್ಯಾಯಾಲಯದ ನ್ಯಾಯಾಧೀಶರಾದ ಜೈದೀಪ್ ಸಿಂಗ್ ಅವರು ತೀರ್ಪನ್ನು ಓದಲು ಆರಂಭಿಸಿದ್ದರು. 3.05 ನಿಮಿಷಕ್ಕೆ ಡೇರಾ ಬಾಬಾ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಮಹತ್ವದ ತೀರ್ಪು ಪ್ರಕಟಿಸಿದ್ದಾರೆ.
ಹರ್ಯಾಣ, ಪಂಜಾಬ್ ರಾಜ್ಯಾದ್ಯಂತ ಕೋಟ್ಯಂತರ ಅನುಯಾಯಿಗಳನ್ನು ಹೊಂದಿರುವ ರಾಮ್ ರಹೀಂ ವಿರುದ್ಧ ತೀರ್ಪು ಪ್ರಕಟವಾದಲ್ಲಿ ಭಾರೀ ಹಿಂಸಾಚಾರ ಆಗುವ ಸಾಧ್ಯತೆಗಳಿದ್ದು, ಮುಂಜಾಗ್ರತಾ ಕ್ರಮವಾಗಿ ಎರಡೂ ರಾಜ್ಯಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿ ಸ ಲಾ ಗಿದೆ. ಸೂಕ್ಷ್ಮಪ್ರದೇ ಶಗಳಲ್ಲಿ ಒಟ್ಟಾರೆ 118 ಸಾವಿರ ಅರೆ ಸೇನಾ ಪಡೆ ಯೋಧರನ್ನು ಹಾಗೂ 55 ಸಾವಿರ ಪೊಲೀಸ್ ಪಡೆಯನ್ನು ನಿಯೋ ಜಿ ಸ ಲಾ ಗಿ ತ್ತು.
ಇಬ್ಬರು ಸಾಧ್ವಿ ಯರ ಮೇಲಿನ ಅತ್ಯಾ ಚಾರ ಆರೋ ಪ ದಡಿ ಸಿಬಿಐ ವಿಶೇಷ ನ್ಯಾಯಾಲಯ ಹಲವು ವರ್ಷಗಳ ಕಾಲ ರಾಮ್ ರಹೀಂ ವಿರು ದ್ಧ ವಿಚಾ ರ ಣೆ ನಡೆ ಸಿದೆ. ಶುಕ್ರ ವಾರ ತೀರ್ಪು ನಿಗ ದಿ ಯಾ ಗಿ ರು ವು ದ ರಿಂದ ಲಕ್ಷಾಂತರ ಸಂಖ್ಯೆ ಯಲ್ಲಿ ಪಂಚ ಕು ಲಾ ದ ಲ್ಲಿ ರು ವ ಡೇರಾ ಸಚ್ಚಾ ಸೌದಾ ಆಶ್ರ ಮಕ್ಕೆ ಅನು ಯಾ ಯಿ ಗಳು
ಜಮಾಯಿಸಿದ್ದರು.