ಹೈದರಾಬಾದ್: ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಪಂದ್ಯದಲ್ಲಿ ತನ್ನ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್ ವೇಗಿ ಅಲ್ಜಾರಿ ಜೋಸೆಫ್ ಒಂದೇ ಪಂದ್ಯದಲ್ಲಿ ಹೀರೋ ಆಗಿದ್ದಾರೆ. ಕೆರಿಬಿಯನ್ ವೇಗಿ ಒಂದೇ ಪಂದ್ಯದಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ.
ಬಲಿಷ್ಠ ಬ್ಯಾಟಿಂಗ್ ಶಕ್ತಿ ಹೊಂದಿರುವ ಹೈದರಾಬಾದ್ ತಂಡವನ್ನು ಕಟ್ಟಿ ಹಾಕಿ ಜಯ ಮುಂಬೈ ವಿಜಯ ಗಳಿಸಲು ಜೋಸೆಫ್ ಪ್ರಮುಖ ಪಾತ್ರ ವಹಿಸಿದರು. ಈ ಪಂದ್ಯದಲ್ಲಿ ಜೋಸೆಫ್ ಮಾಡಿದ ಕೆಲವು ದಾಖಲೆಗಳು ಇಲ್ಲಿವೆ.
* ಕೇವಲ 12 ರನ್ ಗೆ ಆರು ವಿಕೆಟ್ ಕಿತ್ತ ಜೋಸೆಫ್ ಐಪಿಎಲ್ ಇತಿಹಾಸದಲ್ಲಿ ಅತ್ಯುತ್ತಮ ಬೌಲಿಂಗ್ ದಾಳಿ ನಡೆಸಿದರು. ಇದುವರೆಗೆ ಈ ದಾಖಲೆ ಸೋಹೈಲ್ ತನ್ವಿರ್ ಹೆಸರಲ್ಲಿತ್ತು. 2008ರಲ್ಲಿ ತನ್ವಿರ್ 14 ರನ್ ಗೆ ಆರು ವಿಕೆಟ್ ಕಿತ್ತು ದಾಖಲೆ ಬರೆದಿದ್ದರು. ಈ ದಾಖಲೆ 11 ವರ್ಷಗಳ ನಂತರ ಜೋಸೆಫ್ ಅಳಿಸಿ ಹಾಕಿದರು.
* ತನ್ನ ಐಪಿಎಲ್ ಪದಾರ್ಪಣೆ ಪಂದ್ಯದಲ್ಲಿ ಐದು ವಿಕೆಟ್ ಪಡೆದ ಎರಡನೇ ಬೌಲರ್ ಎನಿಸಿದರು. 2017ರಲ್ಲಿ ಆಂಡ್ರೂ ಟೈ 17 ರನ್ ಗೆ ಐದು ವಿಕೆಟ್ ಕಿತ್ತಿದ್ದರು.
*ಅಲ್ಜಾರಿ ಜೋಸೆಫ್ ಮುಂಬೈ ಪರ ಐದು ವಿಕೆಟ್ ಕಿತ್ತ ನಾಲ್ಕನೇ ಬೌಲರ್. ಲಸಿತ್ ಮಾಲಿಂಗ, ಹರ್ಭಜನ್ ಸಿಂಗ್, ಮುನಾಫ್ ಪಟೇಲ್ ಮುಂಬೈ ಇಂಡಿಯನ್ಸ್ ಪರ ಐದು ವಿಕೆಟ್ ಪಡೆದಿದ್ದರು.
* ಜೋಸೆಫ್ ಐಪಿಎಲ್ ನಲ್ಲಿ ಐದು ವಿಕೆಟ್ ಗೊಂಚಲು ಪಡೆದ ಎರಡನೇ ಅತೀ ಕಿರಿಯ ವ್ಯಕ್ತಿ. ಜೋಸೆಫ್ ಗೀಗ 22 ವರ್ಷ 137 ದಿನಗಳು. 2013ರಲ್ಲಿ ಆರ್ ಸಿಬಿ ವಿರುದ್ದ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡುತ್ತಿದ್ದ ಜಯದೇವ್ ಉನಾದ್ಕತ್ ಐದು ವಿಕೆಟ್ ಕಿತ್ತಾಗ ಅವರಿಗೆ 21 ವರ್ಷ 214 ದಿನ ವಯಸ್ಸಾಗಿತ್ತು.