Advertisement

ಭಾರತೀಯರ ನಿದ್ದೆಗೆಡಿಸಿದ ಅಲಿಸ್ಸಾ ಹೀಲಿ

09:31 PM Mar 13, 2020 | Lakshmi GovindaRaj |

ಮೊನ್ನೆಯಷ್ಟೇ ಮಹಿಳಾ ಟಿ20 ವಿಶ್ವಕಪ್‌ ಮುಗಿದಿದೆ. ಭಾರತ ಮಹಿಳಾ ತಂಡ ಫೈನಲ್‌ವರೆಗೆ ತಲುಪಿ, ಅಲ್ಲಿ ಹೀನಾಯವಾಗಿ ಸೋತಿದ್ದು ಎಲ್ಲರಿಗೂ ಗೊತ್ತೇ ಇದೆ. ಫೈನಲ್‌ವರೆಗೆ ಅಬ್ಬರಿಸುತ್ತ ಸಾಗಿದ ಭಾರತ, ಅಲ್ಲಿ ಮಾತ್ರ ವಿಲವಿಲ ಒದ್ದಾಡಿದ್ದು ಎಲ್ಲರಿಗೂ ವಿಸ್ಮಯ ಉಂಟು ಮಾಡಿದೆ. ಇದು ಮಾನಸಿಕ ದೌರ್ಬಲ್ಯವೋ, ಸಾಮರ್ಥ್ಯವೇ ಅಷ್ಟೋ, ಹೇಳಬಲ್ಲವರಾರು? ಇರಲಿ ಭಾರತದ ವಿರುದ್ಧ ಫೈನಲ್‌ನಲ್ಲಿ ಪರಿಸ್ಥಿತಿಯನ್ನು ಬದಲಿಸಿದ್ದು, ಆಸ್ಟ್ರೇಲಿಯದ ಆರಂಭಿಕ ಬ್ಯಾಟ್ಸ್‌ವುಮನ್‌ ಅಲಿಸ್ಸಾ ಹೀಲಿ.

Advertisement

ಮೊದಲ ಎಸೆತದಿಂದಲೇ ಜೋರು ಜೋರಾಗಿ ಸ್ಫೋಟಿಸಿದ ಅವರು ಭಾರತದ ಎಲ್ಲ ಬೌಲರ್‌ಗಳ ದಿಕ್ಕೆಡಿಸಿದರು. ಭಾರತೀಯರು ಹಿಡಿತ ಸಾಧಿಸುತ್ತೇವೆ ಎಂದುಕೊಳ್ಳುವ ಮೊದಲೇ, ಆಸ್ಟ್ರೇಲಿಯ ಸಂಪೂರ್ಣ ನಿಯಂತ್ರಣ ಸಾಧಿಸಲು ಕಾರಣವಾದರು. ಅವರ ಅಬ್ಬರದ ಕಾರಣ ಆಸ್ಟ್ರೇಲಿಯ 184 ರನ್‌ ಬಾರಿಸಿತು. ಅಷ್ಟರಲ್ಲೇ ಭಾರತ ಸೋತಾಗಿತ್ತು. ಅವತ್ತು ಅಲಿಸ್ಸಾ ಹೀಲಿ 75 ರನ್‌ಗಳನ್ನು ಚಚ್ಚಿದ್ದರು.

ಅದಕ್ಕೆ ಬಳಸಿಕೊಂಡಿದ್ದು ಕೇವಲ 39 ಎಸೆತ. ಅದರಲ್ಲಿ 7 ಬೌಂಡರಿ, 5 ಸಿಕ್ಸರ್‌ಗಳು ಸೇರಿದ್ದವು. ಈ ಹೀಲಿ ಆಸೀಸ್‌ನ ಖ್ಯಾತ ವೇಗದ ಬೌಲರ್‌ ಮಿಚೆಲ್‌ ಸ್ಟಾರ್ಕ್‌ ಅವರ ಪತ್ನಿ. ಈಕೆಯ ಆಟ ನೋಡಲು, ದ.ಆಫ್ರಿಕಾದಲ್ಲಿದ್ದ ಸ್ಟಾರ್ಕ್‌ ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿಯಿದ್ದಂತೆಯೇ ಆಸ್ಟ್ರೇಲಿಯಕ್ಕೆ ಹಾರಿದ್ದರು ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಅವರು ಅಷ್ಟು ಪರಿಶ್ರಮ ಪಟ್ಟು ಹಾರಿದ್ದಕ್ಕೂ ಸಾರ್ಥಕವಾಯ್ತು ಎನ್ನುವುದು ಗಮನಾರ್ಹ!

Advertisement

Udayavani is now on Telegram. Click here to join our channel and stay updated with the latest news.

Next