ನೀನು ಸಿಗೋಕಿಂತ ಮುಂಚೇನೇ ಲೈಫು ಚೆನ್ನಾಗಿತ್ತು. ಅಲ್ಲಿ ಇಲ್ಲಿ ಕಾಣಿಸೋ ಗಡ್ಡ ಬಿಟ್ಟ ಹುಡುಗರಿಗೆಲ್ಲ ಲೈನ್ ಹೊಡ್ಕೊಂಡು ಆರಾಮಾಗಿದ್ದೆ. ಈಗ ನಿನ್ನ ಕ್ಲೀನ್ ಮುಖದ ಮುಂದೆ ಅವರೆಲ್ಲಾ ದೇವದಾಸರಂತೆ ಕಾಣಿಸ್ತಾರೆ. ಗಲಗಲ ಅಂತ ಮಾತಾಡಿಕೊಂಡು ಇಧ್ದೋಳಿಗೆ, ನಿನ್ನ ಮುಂದೆ ಮೌನಿಯಾಗೋ ಆಸೆ ಶುರುವಾಗಿದೆ…
ನಮ್ಮಿಬ್ಬರದು ಎಷ್ಟು ವರ್ಷದ ಪರಿಚಯ?…. ಈ ಪ್ರಶ್ನೆಯನ್ನು ನಾನು ದಿನಕ್ಕೆ ನೂರು ಬಾರಿ ಕೇಳಿಕೊಳ್ಳುತ್ತೇನೆ. “ಅವನು ನಿಂಗೆ ಒಂದೈದು ಜನ್ಮದಿಂದ ಪರಿಚಯ’ ಅನ್ನುವ ಹೃದಯದ ಮಾತು ನಿಜ ಅನ್ನೋವಾಗ್ಲೆ, ಮೆದುಳು ತಲೆ ಮೊಟಕಿ ಹೇಳುತ್ತೆ : “ಲೇ, ಅವನ ಪರಿಚಯ ಆಗಿನ್ನೂ ತಿಂಗಳಾಗಿಲ್ಲ’ ಅಂತ. ಯಾರನ್ನು ನಂಬೋದು ನೀನೇ ಹೇಳು. ಕೆಲವೊಂದು ಘಟನೆಗಳು ಅಚಾನಕ್ಕಾಗಿ ಘಟಿಸಿಬಿಡುತ್ತವೆ. ಆದರೆ, ವ್ಯಕ್ತಿಗಳ ವಿಷಯದಲ್ಲಿ ಹೀಗಾಗೋದು ತೀರಾ ಅಪರೂಪ. ಯಾರನ್ನಾದರೂ “ಇವರು ನಮ್ಮವರು’ ಅಂತ ಒಪ್ಪಿಕೊಳ್ಳೋಕೆ ತುಂಬಾ ಸಮಯ ಬೇಕಾಗುತ್ತೆ. ಆದ್ರೆ ಈ ಸಿದ್ಧ ಸೂತ್ರಗಳೆಲ್ಲ ನಿನ್ನ ವಿಷಯದಲ್ಲಿ ಉಲ್ಟಾ ಆಗಿ ಹೋಯ್ತು. “ಅಪರಿಚಿತ’ ಎಂಬ ಟ್ಯಾಗ್ ಕಳಚಿ “ಆಪ್ತ’ ಅನ್ನಿಸಿಕೊಳ್ಳೋಕೆ ತುಂಬಾ ಕಡಿಮೆ ಟೈಂ ತಗೊಂಡೆ ನೀನು.
ನಿನ್ನ ಜೊತೆ ಫಸ್ಟ್ ಟೈಂ ಮಾತಾಡಿದ್ದು ಹೇಗಿತ್ತು ಗೊತ್ತಾ? ಸುಮಾರು ವರ್ಷಗಳಾದ ಮೇಲೆ ಹಳೇ ಗೆಳೆಯನೊಬ್ಬ ಸಿಕ್ಕಾಗ ಮಾತು ಶುರುವಾಗುತ್ತಲ್ಲ ಹಾಗೆ. ನೀನು ಮೌನಿ ಅಂತ ಯಾರೋ ಹೇಳಿದ್ದನ್ನ ಕೇಳಿದ್ದೆ. ಆದ್ರೆ ನಂಜೊತೆ ಸಿಕ್ಕಾಪಟ್ಟೆ ಮಾತಾಡ್ತೀಯ. ಹಂಗೇ ಜಾಸ್ತಿ ಜಾಸ್ತಿ ಮಾತಾಡು. ಇಲ್ಲಾಂದ್ರೆ ನಾನೊಬ್ಳೆ ಬಾಯಿ ಬಡ್ಕೊಂಡು ನಿಂಗೆ ತಲೆನೋವು ತರಿಸ್ತೀನಿ. ನಿನಗೀಗ್ಲೆà ಅದು ಅರ್ಥವಾಗಿರುತ್ತೆ ಬಿಡು. ಹಾಗೇ ಸುಮ್ಮನೆ ನದಿ ದಡದಲ್ಲೋ, ಸಮುದ್ರ ತೀರದಲ್ಲೋ ಕುಳಿತು ಜಗತ್ತಿನ ಎಲ್ಲ ವಿಷಯಗಳ ಬಗ್ಗೆ ಮಾತಾಡೋ, ನಿನ್ನ ದನಿಗೆ ಕಿವಿಯಾಗೋ ಆಸೆ ನಂದು. ನಿಂಗಿಷ್ಟದ ಕ್ರಿಕೆಟ್, ಆ ನಿನ್ನ ಬೋರಿಂಗ್ ಬಾಸ್, ಮೊನ್ನೆ ನೋಡಿದ ಸಿನಿಮಾ, ರೀಚ್ ಮಾಡೋಕಾಗದ ಟಾರ್ಗೆಟ್, ದ್ವೆ„ತ-ಅದ್ವೆ„ತ, ಕೊತ್ತಂಬ್ರಿ ಸೊಪ್ಪು, ಮೆಣಸಿನಕಾಯಿ ಬಜ್ಜಿ ….ಏನಾದ್ರೂ ಸರಿ, ನಾನು ಕೇಳಿಸ್ಕೋತೀನಿ. ಸ್ನೇಹ- ಸಂಬಂಧ ಉಳಿಸಿಕೊಳ್ಳೋಕೆ ಮಾತಿನ ಜೊತೆ ಮೌನವೂ ಮುಖ್ಯ. ನಾವು ಆಡಿದ ಮಾತು, ಹಾಗೇ ಉಳಿದ ಮೌನ ಇಬ್ಬರಿಗೂ ಅರ್ಥವಾಗಬೇಕು. ಕೆಲವೊಂದ್ಸಲ ನಾನು ಸುಮ್ಮನೆ ಇದ್ದಾಗ, “ನೀನು ಹೀಗಿಗೆ ಯೋಚೆ° ಮಾಡ್ತಿದ್ದಿ ಅಲ್ವಾ?’ ಅಂತ ನನ್ನ ಮೌನವನ್ನ ಅರ್ಥ ಮಾಡಿಕೊಳ್ತೀಯ ನೀನು. ಅದ್ಕೆà ಹೇಳಿದ್ದು, ನೀನು ಹಳೇ ಗೆಳೆಯ ಅಂತ.
ಆದ್ರೂ ನೀನು ಸಿಗೋಕಿಂತ ಮುಂಚೇನೇ ಲೈಫು ಚೆನ್ನಾಗಿತ್ತು. ಅಲ್ಲಿ ಇಲ್ಲಿ ಕಾಣಿಸೋ ಗಡ್ಡ ಬಿಟ್ಟ ಹುಡುಗರಿಗೆಲ್ಲ ಲೈನ್ ಹೊಡ್ಕೊಂಡು ಆರಾಮಾಗಿದ್ದೆ. ಈಗ ನಿನ್ನ ಕ್ಲೀನ್ ಮುಖದ ಮುಂದೆ ಅವರೆಲ್ಲಾ ದೇವದಾಸರಂತೆ ಕಾಣಿಸ್ತಾರೆ. ಗಲಗಲ ಅಂತ ಮಾತಾಡಿಕೊಂಡು ಇಧ್ದೋಳಿಗೆ, ನಿನ್ನ ಮುಂದೆ ಮೌನಿಯಾಗೋ ಆಸೆ ಶುರುವಾಗಿದೆ. ಯಾರನ್ನಾದ್ರೂ ನಾನು ಇಷ್ಟೊಂದು ಹಚ್ಚಿಕೊಂಡುಬಿಡ್ತೀನಿ ಅನ್ನೋ ಯೋಚನೆ ಕನಸಿನಲ್ಲೂ ನನಗೆ ಬಂದಿರಲಿಲ್ಲ. ನಾನು ಬರೀ ನನ್ನ ಸುತ್ತ ಮಾತ್ರ ಸುತ್ತುತ್ತಾ ಇದ್ದೆ. ಈಗ ದೇವರಿಗೆ ಪ್ರದಕ್ಷಿಣೆ ಹಾಕೋ ಥರ ದಿನಾ ಬೆಳಗ್ಗೆ-ಸಂಜೆ ನಿನ್ನ ಸುತ್ತ ಸುತ್ತುತ್ತಾ ಇದೀನಿ. ಥೋ, ಇದೆಲ್ಲಾ ನಂಗಿಷ್ಟ ಆಗಲ್ಲ. ಆದ್ರೂ ನಂಗೆ ನೀನು ತುಂಬಾ ಇಷ್ಟ. ಇದೊಂಥರಾ ವಿಚಿತ್ರ ಅಲ್ವಾ?
ಹೊಸದಾಗಿ ಸಿಕ್ಕಿರುವ ಹಳೇ ಗೆಳೆಯನೇ, ಆಗಾಗ ಗುನುಗಿಕೊಳ್ಳೋ ಹಳೆಯ ಹಾಡಿನಂತೆ ಯಾವಾಗ್ಲೂ ಜೊತೆಗಿರು ಮಾರಾಯ.
ಇಂತಿ ನಿನ್ನ ಹೊಸ ಗೆಳತಿ
ಗೌತಮಿ