Advertisement

ನಿತ್ಯ ನೆನಪಾಗುತಾರೆ ಧರ್ಮಸಿಂಗ್‌: ಖರ್ಗೆ

09:56 AM Dec 26, 2017 | |

ಕಲಬುರಗಿ: ನಾಲ್ಕೂವರೆ ದಶಕಗಳ ಕಾಲ ರಾಜಕೀಯ ಜೀವನುದ್ದಕ್ಕೂ ಜೋಡು ಎತ್ತಿನಂತೆ ಮುನ್ನಡೆದುಕೊಂಡ ಬಂದಿರುವ ತಮಗೆ ಆತ್ಮೀಯ ಗೆಳೆಯ, ಮಾಜಿ ಸಿಎಂ ಧರ್ಮಸಿಂಗ್‌ ನಮ್ಮನ್ನಗಲಿರುವುದ ರಿಂದ ತಮಗೆ ನಿತ್ಯ ಒಂದು ಸಲವಾದರೂನೆನಪಿಗೆ ಬರುತ್ತಿರುತ್ತಾರೆ ಎಂದು ಲೋಕಸಭೆ ಕಾಂಗ್ರೆಸ್‌ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಭಾವುಕರಾಗಿ ನುಡಿದರು.

Advertisement

ಜೇವರ್ಗಿ ಪಟ್ಟಣದಲ್ಲಿ ಧರ್ಮಸಿಂಗ್‌ ಫೌಂಡೇಶನ್‌ ವತಿಯಿಂದ ಶಾಸಕ ಡಾ| ಅಜಯಸಿಂಗ್‌ ಸೋಮವಾರ ಆಯೋಜಿಸಿದ್ದ ಎರಡು ದಿನಗಳ ಬೃಹತ್‌ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು, ರಾಜಕೀಯ ಜೀವನದಲ್ಲಿ ಯಾರಾದರೂ ಬಹಳ ಎಂದರೆ 20 ಇಲ್ಲವೇ 30 ವರ್ಷದ ಗೆಳೆತನ ಜೋಡಿ ನೋಡಿದ್ದೇವೆ. ಆದರೆ ತಮ್ಮದು ಐದು ದಶಕಗಳ ಗೆಳೆತನ. ವೈಚಾರಿಕತೆಯಿಂದ ಕೆಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯವಿದ್ದರೂ ರಾಜಕೀಯ ನಿರ್ಣಯ, ಅಭಿವೃದ್ಧಿ ವಿಷಯ ಸೇರಿದಂತೆ ಇತರ ವಿಷಯಗಳಲ್ಲಿ ಸದಾ ಒಮ್ಮತನವಿತ್ತು. ಅವರಲ್ಲಿನ ತಾಳ್ಮೆ ಆಶ್ಚರ್ಯ ಮೂಡಿಸುವಂತಿತ್ತು. ಈಗ ಅವರ ಅಗಲುವಿಕೆ ತೀವ್ರವಾಗಿ ಕಾಡುತ್ತಿದೆ. ಹೀಗಾಗಿ ನಿತ್ಯ ಒಂದು ಸಲವಾದರೂ ನೆನಪಿಗೆ ಬರುತ್ತಿದ್ದಾರೆ. ಇದ್ದಾರೆ ಎಂದು ಘಟನೆಗಳ ಕುರಿತಾಗಿ ಮೆಲಕು ಹಾಕಿದರು.

ವಿಶಾಲ ಹೃದಯುಳ್ಳ ಧರ್ಮಸಿಂಗ್‌ ಅವರನ್ನು ವಿಶಾಲ ಮನೋಭಾವ ಹೊಂದಿರುವ ಜೇವರ್ಗಿ ಜನರು 8 ಸಲ ಆಯ್ಕೆಗೊಳಿಸಿದ್ದೀರಿ. ತಂದೆಯವರ ಗುಣಗಳನ್ನು ಮೈಗೂಡಿಸಿಕೊಂಡಿರುವ, ಸರಳತೆ ಯುವ ನಾಯಕ ಡಾ| ಅಜಯಸಿಂಗ್‌ ಅವರಿಗೂ ಜನರು ಮುಂದಿನ ದಿನಗಳಲ್ಲೂ ಆಶೀರ್ವಾದ ನೀಡಬೇಕು ಎಂದು ಸಮಾರಂಭದಲ್ಲಿ ಪಾಲ್ಗೊಂಡ ಜನಸ್ತೋಮಗೆ ಸಂಸದ ಖರ್ಗೆ ಮನವಿ ಮಾಡಿದರು.

ಧರ್ಮಸಿಂಗ್‌ ಜನ್ಮ ದಿನದ ಪ್ರಯುಕ್ತ ಕಳೆದ 13ವರ್ಷಗಳಿಂದ ಬೃಹತ್‌ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳುತ್ತಾ ಬರುತ್ತಿರುವುದು ಶ್ಲಾಘನೀಯವಾಗಿದೆ. ಎಲ್ಲರಿಗೂ ಆರೋಗ್ಯ ಎಂಬುದು ಹಿಂದಿನ ಯುಪಿಎ ಸರ್ಕಾರದ ಪ್ರಮುಖ ಕಾರ್ಯವಾಗಿತ್ತು. ಇದೇ ತೆರನಾದ ಸಾಮಾಜಿಕ ಸೇವಾ ಕಾರ್ಯಗಳನ್ನು ಶಾಸಕರಾದ ಡಾ| ಅಜಯಸಿಂಗ್‌ ಹಾಗೂ ಡಾ| ವಿಜಯಸಿಂಗ್‌ ಮುಂದುವರಿಸಿಕೊಂಡು ಹೋಗಲಿ. ತಮ್ಮ ಬೆಂಬಲ ಸದಾವಿದೆ ಎಂದರು ಖರ್ಗೆ.

ಸಚಿವರಾದ ಈಶ್ವರ ಖಂಡ್ರೆ ಹಾಗೂ ಡಾ| ಶರಣಪ್ರಕಾಶ ಪಾಟೀಲ ಮಾತನಾಡಿ, ಕಳೆದ ವರ್ಷ ಕಲಬುರಗಿಯಲ್ಲಿ ಧರ್ಮಸಿಂಗ್‌ ಅವರ ಜನ್ಮ ದಿನಾಚರಣೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಅಲ್ಲದೇ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಇತರ ನಾಯಕರ ಸಮ್ಮುಖದಲ್ಲಿ ಆಚರಿಸಲಾಗಿ ಶತಾಯುಷಿಗಳಾಗಲಿ ಎಂದು ಪ್ರಾರ್ಥಿಸಿದ್ದೇವು. ಆದರೆ ಈ ವರ್ಷದ ಜನ್ಮ ದಿನಾಚರಣೆಗೆ ಕಳೆದುಕೊಳ್ಳುತ್ತೇವೆ ಎಂದುಕೊಂಡಿರಲಿಲ್ಲ. ಅವರ ಸಲಹೆ, ಮಾರ್ಗದರ್ಶನ ತಮಗೆ ಸದಾ ಮಾರ್ಗದರ್ಶನ ಎಂದು
ಹೇಳಿದರು.

Advertisement

ಶಾಸಕ ಡಾ| ಅಜಯಸಿಂಗ್‌ ಮಾತನಾಡಿ, ತಂದೆಯವರು ರಾಜಕೀಯ ಜೀವನವಲ್ಲದೇ ಬದುಕಿನಲ್ಲಿ ಮುಂದಾಗುವ ಘಟನೆಗಳನ್ನು ಮೊದಲೇ ಊಹಿಸುತ್ತಿದ್ದರು ಎಂದು ಕೆಲವು ಘಟನೆಗಳನ್ನು ಪ್ರಸ್ತಾಪಿಸಿದರು.

ಶಾಸಕರಾದ ರಾಜಶೇಖರ ಪಾಟೀಲ ಹುಮನಾಬಾದ, ಡಾ| ಉಮೇಶ ಜಾಧವ, ಬಿ.ಆರ್‌. ಪಾಟೀಲ, ಮಾಜಿ ಸಚಿವ ಶರಣಬಸಪ್ಪ ದರ್ಶನಾಪುರ, ಮಾಜಿ ಶಾಸಕರಾದ ಶರಣಪ್ಪ ಸುಣಗಾರ, ಖಾಜಿ ಅರ್ಷದ ಅಲಿ, ಮಾರುತಿರಾವ ಡಿ. ಮಾಲೆ, ಮಹಾಪೌರ ಶರಣು ಮೋದಿ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡರಾದ ಬಸವರಾಜ ಭೀಮಳ್ಳಿ, ತಿಪ್ಪಣ್ಣಪ್ಪ ಕಮಕನೂರ, ಚಂದ್ರಾಸಿಂಗ್‌, ಭಾಗಣ್ಣಗೌಡ ಸಂಕನೂರ, ಇಲಿಯಾಸ್‌ ಭಾಗವಾನ್‌, ಆರ್‌.ಕೆ. ಹುಡಗಿ, ವಸಂತ ಕುಷ್ಟಗಿ, ಜಾಬಶೆಟ್ಟಿ, ಬಾಬುರಾವ ಜಹಾಗೀರದಾರ್‌, ನಾರಾಯಣರಾವ ಕಾಳೆ, ಕೃಷ್ಣಾಜಿ ಕುಲಕರ್ಣಿ, ಸಿ.ಎಸ್‌.ಪಾಟೀಲ, ರಾಜಶೇಖರ ಸಿರಿ ಸೇರಿದಂತೆ ಮುಂತಾದವರಿದ್ದರು. ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ ಸ್ವಾಗತಿಸಿದರು. ರುಕುಂ ಪಟೇಲ್‌ ವಂದಿಸಿದರು.

ಸಾವಿರಾರು ಜನರ ಆರೋಗ್ಯ ತಪಾಸಣೆ
ಆರೋಗ್ಯ ತಪಾಸಣಾ ಶಿಬಿರದಲ್ಲಿ ಜೇವರ್ಗಿ ತಾಲೂಕಿನ ಸಾವಿರಾರು ಜನರು ಉಚಿತ ತಪಾಸಣೆ ಹಾಗೂ ಚಿಕಿತ್ಸೆ ಪಡೆಯುವರು. ಮೊದಲನೇ ದಿನವೇ ಹಳ್ಳಿ-ಹಳ್ಳಿಯಿಂದ ವಾಹನಗಳಲ್ಲಿ ಜನರು ಬಂದು ಸರದಿಯಲ್ಲಿ ನಿಂತು ತಪಾಸಣೆ ಮಾಡಿಸಿಕೊಳ್ಳುತ್ತಿರುವುದು ಹಾಗೂ ಚಿಕಿತ್ಸೆ ಸೌಲಭ್ಯ ಪಡೆಯುತ್ತಿರುವುದು ಕಂಡು ಬಂತು.

ಶಿಬಿರದಲ್ಲಿ ಬೆಂಗಳೂರು ಹೆಸರಾಂತ ಆಸ್ಪತ್ರೆಗಳಾದ ಎಂ.ಎಸ್‌. ರಾಮಯ್ಯ, ನಾರಾಯಣ ಹೃದಯಾಲಯ, ಸಪ್ತಗಿರಿ ಮಲ್ಟಿಸ್ಪೇಷಾಲಿಟಿ, ಭಗವಾನ ಮಹಾವೀರ ಜೈನ್‌, ಅನುಗ್ರಹ ಕಣ್ಣಿನ ಹಾಸ್ಪಿಟಲ್‌, ವಿಜಯಪುರ ಹಾಗೂ ಬಸವೇಶ್ವರ ಆಸ್ಪತ್ರೆ ಸೇರಿ ನಾಡಿನ 50ಕ್ಕೂ ಹೆಚ್ಚು ಖ್ಯಾತ ವೈದ್ಯರು ತಪಾಸಣೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next