Advertisement

ನಿಮದೇ ನೆನಪು ದಿನವೂ ಮನದಲ್ಲಿ…

12:30 AM Jan 01, 2019 | |

ನಿಮ್ಮನ್ನೇ ಜೀವದಂತೆ ಹಚ್ಚಿಕೊಂಡಿದ್ದ ನನಗಿಲ್ಲ ತುಂಬಾ ಕಷ್ಟವಾಗುತ್ತಿದೆ. ನಿಮ್ಮ ನೆನಪು ದಿನವೂ ಕಾಡುತ್ತಿದೆ. ನೀವೀಗ ಎಲ್ಲಿದ್ದೀರಿ, ಹೇಗಿದ್ದೀರಿ, ಏನು ಮಾಡುತ್ತಿದ್ದೀರಿ? ನಿಮ್ಮ ಫೋನ್‌ ಕೂಡ ಸ್ವಿಚ್‌ಆಫ್ ಆಗಿ ಆರು ತಿಂಗಳಾಗಿದೆ. ಯಾರಾದರೂ ಗೂಬೆ ಎಂದರೆ ಸಾಕು; ನಿಮ್ಮದೇ ನೆನಪಾಗಿ ಕಣ್ತುಂಬುತ್ತದೆ.

Advertisement

ಹಾಯ್‌ ಸೀನಿಯರ್‌ ಪಿಲ್ಲು
ತುಂಬಾ ದಿನಗಳಿಂದ ನಿಮ್ಮ ನೆನಪು ಬಹಳ ಕಾಡುತ್ತಿದೆ. ಆದರೆ, ನಿಮ್ಮನ್ನು ಸಂಪರ್ಕಿಸಲು ಯಾವ ಮಾರ್ಗವೂ ಇಲ್ಲದೆ ಈ ಪತ್ರ ಬರೆಯುತ್ತಿದ್ದೇನೆ.  ನಿಮಗೆ ನೆನಪಿದೆಯಾ? ಗಂಗೋತ್ರಿಯ ಕ್ಯಾಂಪಸ್‌ಗೆ ಮೊದಲು ಬಂದಾಗ, ಅವತ್ತು ಫ್ರೆಶರ್ ಪಾರ್ಟಿ ನಡೆಯುತ್ತಿತ್ತು. ನೀವು ನೂರಾರು ಜೂನಿಯರ್‌ಗಳ ನಡುವೆ, ಎಲ್ಲರನ್ನೂ ಬಿಟ್ಟು ನನಗೆ ಹೂಗುತ್ಛ ನೀಡಿ ಸ್ವಾಗತಿಸಿದ್ರಿ. ಅದು ನನ್ನ ಅದೃಷ್ಟವೋ, ದುರದೃಷ್ಟವೋ ಗೊತ್ತಿಲ್ಲ. ಸೀನಿಯರ್‌ಗಳು ನನಗೆ, ನಿಮಗೆ ಪ್ರಪೋಸ್‌ ಮಾಡುವ ಟಾಸ್ಕ್ ನೀಡಿದಾಗ, ಕೈ-ಕಾಲು ನಡುಗಿಸುತ್ತಾ ಅದೆಷ್ಟು ಗಲಿಬಿಲಿಗೊಂಡೆನೊ. ಆದರೆ, ನೀವು ಲಿಪ್‌ಸ್ಟಿಕ್‌ ರಂಗಿನ ತುಟಿಯಲ್ಲಿ ಮುಗುಳುನಗುತ್ತಾ, ಕಾಜಲ್‌ ಹಚ್ಚಿದ ಕಣ್ಣುಗಳಲ್ಲಿ ನನ್ನನ್ನೇ ದುರುಗುಟ್ಟಿ ನೋಡುತ್ತಿದ್ರಿ. ಇದ್ದಬದ್ದ ಧೈರ್ಯವನ್ನೆಲ್ಲ ಒಗ್ಗೂಡಿಸಿಕೊಂಡು, “ಐ ಲವ್‌ ಯೂ ಸೀನಿಯರ್‌’ ಅಂದುಬಿಟ್ಟೆ! ನೀವು ನಯವಾಗಿ ಒಪ್ಪಿದಿರಿ. ಆಗ ನನ್ನ ಹೃದಯದ ಬಡಿತ ಸ್ಟೆತಾಸ್ಕೋಪ್‌ನಲ್ಲಿ ಕೇಳುವಂತೆ ಜೋರಾಗಿ ಕೇಳಿಸುತ್ತಿತ್ತು. 

ಕಾಲೇಜಿನಲ್ಲಿ ಮೊದಲು ಪರಿಚಯವಾಗಿದ್ದು ನಿಮ್ಮದೇ. ದಿನ ಕಳೆದಂತೆ, ನಿಮ್ಮ ಒಳ್ಳೆಯತನ, ಮಾತು, ಸಲುಗೆ, ಸಹಾಯ, ಕಾಳಜಿ ಎಲ್ಲವೂ ಇಷ್ಟವಾಯಿತು. ಬರುಬರುತ್ತಾ ನೀವೂ ನನ್ನನ್ನು ತುಂಬಾ ಹಚ್ಚಿಕೊಂಡಿರಿ. ನೀವು ವåಧ್ಯಾಹ್ನ ತರುತ್ತಿದ್ದ ಟಿಫಿನ್‌ ಬಾಕ್ಸ್‌ಅನ್ನು ಅದೆಷ್ಟು ಸಾರಿ ಕದ್ದು ತಿಂದಿದ್ದೇನೋ ಲೆಕ್ಕವಿಲ್ಲ. ಪ್ರತಿದಿನ ನೀವು ನನಗಾಗಿ ಚಾಕೊಲೇಟ್‌ ತರುತ್ತಿದ್ದಿರಿ. ನಿಮ್ಮ ಬ್ಯಾಗ್‌ನಲ್ಲಿರುವ ಚಾಕ್‌ಲೇಟ್‌ ಹಾಗೇ ಇದ್ದರೆ, ಮರುದಿನ ನೀವೇ ಬಂದು, “ಯಾಕೋ ಗೂಬೆ ಚಾಕೊಲೇಟ್‌ ತಿಂದಿಲ್ಲ ನಿನ್ನೆ’ ಎಂದು ಬಯ್ಯುತ್ತಿದ್ದಿರಿ. ಪ್ರತಿದಿನ “ಐ ಲವ್‌ ಯೂ ಸೀನಿಯರ್‌’ ಎಂದು ತಪ್ಪದೇ ಹೇಳುತ್ತಿದ್ದೆ. ಆಗ ನೀವು, “ಹೋಗೋ ಗೂಬೆ, ಬರೀ ಇದೇ ಆಯ್ತು ನಿಂದು’ ಎಂದು ಮುನಿಸಿಕೊಳ್ಳುತ್ತಿದ್ರಿ. ನಿಜಕ್ಕೂ ನಿಮ್ಮಂಥ ಸೀನಿಯರ್‌ ಸಿಕ್ಕಿದ್ದು ಪುಣ್ಯವೇ ಸರಿ. ಆದರೆ, ಬೀಳ್ಕೊಡುಗೆ ಸಮಾರಂಭದಲ್ಲಿ ನೀವು ನನ್ನನ್ನು ಅಪ್ಪಿ, ಕಣ್ಣೀರು ಸುರಿಸಿದ್ದನ್ನು ಕಂಡು ಗಾಬರಿಯಾಗಿಬಿಟ್ಟಿತ್ತು. ಅಯ್ಯೋ, ನಾಳೆಯಿಂದ ನೀವು ಕಾಲೇಜಿಗೆ ಬರುವುದಿಲ್ಲವಲ್ಲ ಎಂದು ದುಃಖ ತಡೆಯಲಾರದೇ ಬಿಕ್ಕಿ ಬಿಕ್ಕಿ ಅತ್ತುಬಿಟ್ಟೆ. ಆಗ ನೀವು, ಕೈಗೊಂದು ಗಿಫ್ಟ್ ಕೊಟ್ಟು, ಚಾಕ್‌ಲೇಟ್‌ ತಿನ್ನಿಸಿ, ನಡೆದುಬಿಟ್ಟಿರಿ.

ಅಷ್ಟೊಂದು ಪ್ರೀತಿಸುತ್ತಿದ್ದ ನೀವು, ಅಂದಿನಿಂದ ಇಂದಿನವರೆಗೆ ಒಂದೇ ಒಂದು ಕರೆ ಮಾಡಿಲ್ಲ, ಮೆಸೇಜ್‌ ಕೂಡಾ ಇಲ್ಲ. ನಿಮ್ಮನ್ನೇ ಜೀವದಂತೆ ಹಚ್ಚಿಕೊಂಡಿದ್ದ ನನಗಿಲ್ಲ ತುಂಬಾ ಕಷ್ಟವಾಗುತ್ತಿದೆ. ನಿಮ್ಮ ನೆನಪು ದಿನವೂ ಕಾಡುತ್ತಿದೆ. ನೀವೀಗ ಎಲ್ಲಿದ್ದೀರಿ, ಹೇಗಿದ್ದೀರಿ, ಏನು ಮಾಡುತ್ತಿದ್ದೀರಿ? ನಿಮ್ಮ ಫೋನ್‌ ಕೂಡ ಸ್ವಿಚ್‌ಆಫ್ ಆಗಿ ಆರು ತಿಂಗಳಾಗಿದೆ. ಯಾರಾದರೂ ಗೂಬೆ ಎಂದರೆ ಸಾಕು; ನಿಮ್ಮದೇ ನೆನಪಾಗಿ ಕಣ್ತುಂಬುತ್ತದೆ. ಆದರೆ, ಎಲ್ಲೇ ಇರಿ, ಹೇಗೆ ಇರಿ, ಯಾವಾಗಲೂ ನಗ್‌ ನಗ್ತಾ ಸದಾ ಖುಷಿಯಾಗಿರಿ. 

ನಿಮ್ಮದೇ ನೆನಪಲ್ಲಿ ಸದಾ ನಿಮ್ಮನ್ನೇ ಪ್ರೀತಿಸುವ 

Advertisement

ಇಂತಿ ನಿಮ್ಮ ಗೂಬೆ

ಸುನೀಲ ಗದೆಪ್ಪಗೋಳ

Advertisement

Udayavani is now on Telegram. Click here to join our channel and stay updated with the latest news.

Next