Advertisement

ನನ್ನ ಕ್ಷೇತ್ರದ ಜನರ ನೆರವಿಗೆ ನಾನು ಸದಾ ಸಿದ್ಧ: ಆರ್ ಅಶೋಕ

06:24 PM Aug 20, 2021 | Team Udayavani |

ಬೆಂಗಳೂರು  : ಕೋವಿಡ್ ಎಲ್ಲರಿಗೂ ಅದೆಷ್ಟು ತೊಂದರೆ ನೀಡಿದೆ ಎಂಬುದನ್ನ ತುಂಬಾ ಹತ್ತಿರದಿಂದ ಕಂಡಿದ್ದೇನೆ. ಹಲವರು ಹಲವು ರೀತಿಯಲ್ಲಿ ಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ನನ್ನ ಕ್ಷೇತ್ರದ ಎಲ್ಲಾ ವರ್ಗದ ಜನರಿಗೆ ಸಾಧ್ಯವಾದಷ್ಟು ನೆರವು ನೀಡಬೇಕೆಂದು ನಿರ್ಧರಿಸಿದ್ದೇನೆ. ಹೀಗಾಗಿ ಅವರ ಸಂಕಷ್ಟದಲ್ಲಿ ನಾನು ಪಾಲುದಾರ. ಅವರ ನೆರವಿಗೆ ನಾನು ಸದಾ ಸಿದ್ಧ” ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.

Advertisement

ತಮ್ಮ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಶಾಸಕರ ಕಚೇರಿಯಲ್ಲಿ 1500ಕ್ಕೂ ಹೆಚ್ಚು ಆಟೋ ಚಾಲಕರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿದ ಸಚಿವರು,”ಕೋವಿಡ್ ಬಗ್ಗೆ ತುಂಬಾ ನಿರ್ಲಕ್ಷ್ಯ ಬೇಡ. ಎಲ್ಲರೂ ಜಾಗರೂಕರಾಗಿರಬೇಕಿದೆ. ಹಲವು ವರ್ಗದ ಜನರು ಕೋವಿಡ್ ನಿಂದ ತತ್ತರಿಸಿದ್ದಾರೆ. ಹೀಗಾಗಿ ಪೌರಕಾರ್ಮಿಕರು, ಅರ್ಚಕರು, ಸವಿತಾ ಸಮಾಜದವರು, ಆಟೋ ಡ್ರೈವರ್ ಗಳು, ಖಾಸಗಿ ಶಾಲಾ ಸಿಬ್ಬಂದಿ, ನ್ಯೂಸ್ ಪೇಪರ್, ಹಾಲು ಹಾಕುವವರು, ಬೀದಿ ಬದಿ ವ್ಯಾಪಾರಿಗಳು, ಮೆಕ್ಯಾನಿಕ್ ಗಳು, ಎಲೆಕ್ಟ್ರೀಷಿಯನ್ಸ್ ಹೀಗೆ ವಿವಿಧ ವರ್ಗದ ಜನರಿಗೆ ನೆರವು ನೀಡಲಾಗಿದೆ,” ಎಂದು ಹೇಳಿದ್ದಾರೆ.

ಇದನ್ನೂ ಓದಿ : ಜಬಲ್ ಪುರ ವಿಮಾನ ನಿಲ್ದಾಣವನ್ನು ರಾಣಿ ದುರ್ಗಾವತಿ ವಿಮಾನ ನಿಲ್ದಾಣವೆಂದು ಮರುನಾಮಕರಣ..?!

“ಕೋವಿಡ್ ನ ಹಾವಳಿ ತಾರಕ್ಕೇರಿದಾಗ ಹಲವರಿಗೆ ನಮ್ಮ ಕಡೆಯಿಂದ ಆಕ್ಸಿಜನ್ ಕಾನ್ಸಂಟ್ರೇಟರ್ ವ್ಯವಸ್ಥೆ ಕೂಡಾ ಮಾಡಲಾಯಿತು. ಕೋವಿಡ್ ನಿಂದ ಮೃತರಾದ 1200ಕ್ಕೂ ಅಧಿಕ ಜನರ ಅಸ್ಥಿ ವಿಸರ್ಜನೆ ಮಾಡಿದೆ. ಈ ಎಲ್ಲಾ ಕಾರ್ಯಗಳನ್ನ ಮಾಡಿದ್ದೇ ಸರ್ಕಾರ ಸದಾ ನಿಮ್ಮ ಜೊತೆಗೆ ನಿಲ್ಲುತ್ತದೆ. ನಾವೆಲ್ಲಾ ನಿಮ್ಮ ಕಷ್ಟಗಳಿಗೆ ಸ್ಪಂದಿಸುತ್ತೇವೆ ಎಂಬ ಆತ್ಮವಿಶ್ವಾಸ ತುಂಬುವುದಾಗಿದೆ”, ಎಂದಿದ್ದಾರೆ.

“ಕೋವಿಡ್ ನ ಮೂರನೇ ಅಲೆ ಕಾಣಿಸಿಕೊಂಡಿದ್ದೇ ಆದರೆ ಅದಕ್ಕೆ ಬೇಕಾದ ಅಗತ್ಯ ತಯಾರಿಗಳನ್ನು ಕೂಡಾ ಸರ್ಕಾರ ಈಗಾಗಲೇ ಮಾಡಿಕೊಳ್ಳುತ್ತಿದೆ. ಪದ್ಮನಾಭನಗರ ಕ್ಷೇತ್ರದಲ್ಲಿ ಮಕ್ಕಳಿಗಾಗಿಯೇ ಸುಸಜ್ಜಿತ ಎರಡು ಕೋವಿಡ್ ಆರೈಕೆ ಕೇಂದ್ರಗಳನ್ನ ಸಿದ್ಧಪಡಿಸಲಾಗಿದೆ. ಅಲ್ಲಿ ಮಕ್ಕಳ ಜೊತೆಗೆ ಪಾಲಕರು ಉಳಿದುಕೊಳ್ಳಲು ಕೂಡಾ ವ್ಯವಸ್ಥೆ ಮಾಡಲಾಗಿದೆ. ಈ ಆಸ್ಪತ್ರೆಗಳಲ್ಲಿ ಸಂಪೂರ್ಣವಾಗಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ನಿರಂತರವಾಗಿ ನಿತ್ಯ ಸಾವಿರಾರು ಜನರಿಗೆ ಆಹಾರ ವಿತರಣೆ ಕೆಲಸ ಆಗುತ್ತಿದೆ. ಜನ ಭರವಸೆ ಕಳೆದುಕೊಳ್ಳುವುದು ಬೇಡ. ನಾನು ಸದಾ ನಿಮ್ಮೊಂದಿಗಿದ್ದೇನೆ” ಎಂದು ಪುನರುಚ್ಛರಿಸಿದ್ದಾರೆ.

Advertisement

ಇದನ್ನೂ ಓದಿ : ಗೋವಾ : ಶೇ. 70 ರಷ್ಟು ಮೀನುಗಾರಿಕಾ ಬೋಟ್‍ ಗಳು ದಡದಲ್ಲಿಯೇ ಸ್ತಬ್ಧ.!

Advertisement

Udayavani is now on Telegram. Click here to join our channel and stay updated with the latest news.

Next