Advertisement

ನಾಡು -ನುಡಿ ಸೇವೆಗೆ ಸದಾ ಸನ್ನದ್ಧರಾಗಿ: ಫಕೀರಪ್ಪ

04:36 PM Jan 08, 2018 | |

ಯಾದಗಿರಿ: ಕರವೇ ಕಾರ್ಯಕರ್ತರು ಕನ್ನಡ ನಾಡು ನುಡಿ ಸೇವೆಗೆ ಸದಾ ಸನ್ನದ್ಧರಾಗಬೇಕು ಎಂದು ಕರ್ನಾಟಕ ರಕ್ಷಣಾ
ವೇದಿಕೆ (ಶಿವರಾಮೆಗೌಡ ಬಣ) ಜಿಲ್ಲಾಧ್ಯಕ್ಷ ಎಸ್‌. ಫಕೀರಪ್ಪ ನಾಯಕ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಈಚೆಗೆ ನೂತನ ಪದಾಧಿ ಕಾರಿಗಳ ಆಯ್ಕೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಯಾದಗಿರಿ ಜಿಲ್ಲೆಯು ಗಡಿ ಜಿಲ್ಲೆಯಾಗಿದ್ದು, ಆ ಗಡಿ ಗ್ರಾಮಗಳಲ್ಲಿ ಹಲವಾರು ಸಮಸ್ಯೆಗಳಿದ್ದು, ನಿತ್ಯ ಅಲ್ಲಿನ ಜನರು ಪರದಾಡುತ್ತಿದ್ದಾರೆ. ಅವರಿಗೆ ಸರ್ಕಾರಿ ಸೌಲಭ್ಯ ಸಿಗುವಂತೆ ಕರವೇ ಕಾರ್ಯಕರ್ತರು ಹೋರಾಟ ರೂಪಿಸಬೇಕು ಎಂದು ಹೇಳಿದರು.

Advertisement

ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಎಚ್‌.ಕೆ. ಯಲ್ಲಪ್ಪ ನಾಯಕ ಹಿಬ್ರಾಹಿಂಪುರ, ಜಿಲ್ಲಾ ರೈತ ಘಟಕದ ಅಧ್ಯಕ್ಷ ಮಲ್ಲಪ್ಪ ದೇವರಮನಿ ತಡಬಿಡಿ ಇದ್ದರು.

ರಾಮ ಸಮುದ್ರ ಗ್ರಾಮ: ನಾಗಪ್ಪ ಗೌಡಗೇರಿ ಅಧ್ಯಕ್ಷ, ಮಂಜುನಾಥಗೌಡ ಪೊಲೀಸ್‌ ಪಾಟೀಲ್‌ ಗೌರವ ಅಧ್ಯಕ್ಷ, ತಾಯಪ್ಪ ಮ್ಯಾಗಳ್ಳೋರ್‌ ಪ್ರಧಾನ ಕಾರ್ಯದರ್ಶಿ, ಸಾಬಣ್ಣ ಅನಪುರ ಉಪಾಧ್ಯಕ್ಷ, ಬಂಗಾರೆಪ್ಪ ಮದ್ದಲಿ, ರಮೇಶ ಗಣಪುರ, ಆಂಜನೇಯ ಗುಣಕಿ, ಆಂಜನೇಯ ಮ್ಯಾಗಳ್ಳೋರ್‌, ವೆಂಕಟೇಶ ಬೆನಕಪ ನೋರ್‌, ಸಾಬಯ್ಯ ಕೊಳೇರ್‌ ಆಯ್ಕೆ ಮಾಡಲಾಯಿತು.

ಯಾದಗಿರಿ ತಾಲೂಕು ಘಟಕದ ನೂತನ ಪದಾಧಿಕಾರಿಗಳು: ಸಾಬಯ್ಯ ನಾಯಕ ಮಸ್ಕನಳ್ಳಿ ತಾ. ಕಾರ್ಯಧ್ಯಕ್ಷರು. ಮಲ್ಲು
ಮಸ್ಕನಳ್ಳಿ ತಾಲೂಕು ಯುವ ಘಟಕ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next