Advertisement
ಯಾಕೋ ಹುಡುಗಿ, ಇತ್ತೀಚೆಗೆ “ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು’ ಎಂಬಂತೆ ಯಾರೊಂದಿಗೂ ನಾನು ಸೇರುತ್ತಿಲ್ಲ. ಬರೀ ನಿನ್ನ ಗುಂಗಿನಲ್ಲೇ ಸಮಯ ಹೋಗುತ್ತಿದೆ. “ನೀರಿಳಿಯದ ಗಂಟಲೋಳ್ ಕಡುಬು ತುರುಕಿದ ಹಾಗಾಯ್ತು’ ಅನ್ನುವ ಹಾಗೆ ಊಟ, ನಿದ್ದೆ ಬೇಡವಾಗಿದೆ.
ನೇರವಾಗಿ ವಿಷಯಕ್ಕೆ ಬರುವೆ. “ಕೊಂಕಣ ಸುತ್ತಿ ಮೈಲಾರಕ್ಕೆ’ ಬರುವವನು ನಾನಲ್ಲ. ನೀನಂದ್ರೆ ನನಗಿಷ್ಟ, ಇದರ ಮೇಲೆ ನಿನ್ನಿಷ್ಟ. ಅರೆ! ಏನ್ ಈ ಹುಡ್ಗ “ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ’ ಮಾತಾಡ್ತಾನೆ ಅಂತ ಅಂದೊRಳ್ಳಬೇಡ. ನನ್ನ ಬಗ್ಗೆ ನಿಂಗೊಂದಿಷ್ಟು ಹೇಳೆÉàಬೇಕು. ನಾನೇನು “ಓದಿ ಓದಿ ಮರುಳಾದ ಕೂಚುಭಟ್ಟ’ನ ಥರ ಪುಸ್ತಕದ ಹುಳುವಲ್ಲ. “ಯುದ್ಧಕಾಲೇ ಶಸ್ತ್ರಾಭ್ಯಾಸ’ ಮಾಡುವ ಸಾಮಾನ್ಯ ಹುಡುಗ. “ಹೆಣ್ಣಿಗೆ ಹಟ ಇರಬಾರದು, ಗಂಡಿಗೆ ಚಟ ಇರಬಾರದು’ ಅಲ್ವಾ? ನನಗೆ ಯಾವ ದುರಾಭ್ಯಾಸಗಳಿಲ್ಲ. ಇನ್ನೂ ಹೇಳಬೇಕಂದ್ರೆ, “ಯಾರದೋ ದುಡ್ಡಿನಲ್ಲಿ ಯಲ್ಲಮ್ಮನ ಜಾತ್ರೆ’ ಮಾಡುವ ಸ್ವಲ್ಪ ಜಿಪುಣನೂ ಹೌದು. ಅದ್ಯಾಕೋ ಗೊತ್ತಿಲ್ಲ ಹುಡುಗಿ, “ಹುಚ್ಚು ಖೋಡಿ ಮನಸು, ಅದು ಹದಿನಾರರ ವಯಸ್ಸು’ ಅನ್ನುವ ಹಾಗೆ, ನಿನ್ನನ್ನು ನೋಡಿದ ದಿನದಿಂದ ನನ್ನ ಮನಸ್ಸು ಚಿಟ್ಟೆಯಂತೆ ಹಾರಾಡುತ್ತಿದೆ. “ಮೂಗಿಗಿಂತ ಮೂಗುತಿ ಭಾರ’ ಎನ್ನುವಂತೆ ನೀನು ಮೂಗುತಿಯಲ್ಲಿ ತುಂಬಾ ಸುಂದರವಾಗಿ ಕಾಣುತ್ತೀಯ ಗೆಳತಿ. “ನಾರಿಗೆ ಗುಣವೇ ಶೃಂಗಾರ, ನಿನಗೆ ಮೂಗುತಿಯೇ ಶೃಂಗಾರ’. “ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು’ ಅಂತಾರಲ್ಲ. ನಿನ್ನ ವಿಷಯದಲ್ಲಿ ಅದು ಖಂಡಿತಾ ಸತ್ಯ. ನಿನ್ನ ಸ್ನಿಗ್ಧ ನಗು ನನ್ನನ್ನು ಮರಳು ಮಾಡಿಬಿಟ್ಟಿದೆ ಹುಡುಗಿ. ನಿನ್ನನ್ನು ನೋಡಲು ಚಾತಕ ಪಕ್ಷಿಯಂತೆ ನಿನ್ನ ಡಿಪಾರ್ಟ್‌ಮೆಂಟ್ ಮುಂದೇನೆ ಕಾಯುತ್ತಿರುತ್ತೇನೆ.
Related Articles
Advertisement
“ನಿನ್ನೊಂದಿಗೆ ಮಾತಿಗೆ ಸಿಕ್ಕರೆ ಮಳೆಗೆ ಸಿಕ್ಕಂತೆ’ ಅಂತ ನಿನ್ನ ಗೆಳತಿಯರು ಹೇಳುತ್ತಿರುತ್ತಾರೆ. ಎಷ್ಟು ಮಾತಾಡ್ತೀಯಾ ಮಾತಿನ ಮಲ್ಲಿ? “ಮಾತು ಬೆಳ್ಳಿ, ಮೌನ ಬಂಗಾರ’ ಕಣೇ ಕುಳ್ಳಿ. ಅಯ್ಯೋ, ಸುಮ್ನೆ ತಮಾಷೆ ಮಾಡಿದೆ. ಮೊನ್ನೆ ನಿಮ್ಮ ಡಿಪಾರ್ಟ್‌ಮೆಂಟ್‌ನಲ್ಲಿ ನಡೆದ ಫ್ರೆಶರ್ಸ್ ಪಾರ್ಟಿಯಲ್ಲಿ ನೀನು ಮಾಡಿದ ನೃತ್ಯಕ್ಕೆ ಮನಸೋತು ಹೋದೆ ಹುಡುಗಿ. ಯಾರೋ ನೀನು ಚೆನ್ನಾಗಿ ಡ್ಯಾನ್ಸ್ ಮಾಡಿಲ್ಲವೆಂದಾಗ ನನ್ನ ಮುಖ ಸಪ್ಪೆಯಾಯಿತು. ಹೋಗಲಿಬಿಡು, “ಕುಣಿಯಲಾರದವಳು ನೆಲ ಡೊಂಕು’ ಅಂದಳಂತೆ. ನೀನೇನೂ ಬೇಜಾರಾಗ್ಬೇಡ. ನಮ್ಮ ಲೆಕ್ಚರರ್ಸ್ ಯಾವುದೋ ಕಾರಣಕ್ಕಾಗಿ ನಿಮ್ಮ ಡಿಪಾರ್ಟ್‌ಮೆಂಟ್‌ಗೆ ಕರೆದುಕೊಂಡು ಹೋಗುವುದಾಗಿ ಹೇಳಿದಾಗ “ವೈದ್ಯ ಹೇಳಿದ್ದೂ ಹಾಲು ಅನ್ನ, ರೋಗಿ ಬಯಸಿದ್ದೂ ಹಾಲು ಅನ್ನ’ ಅನ್ನುವಷ್ಟು ಖುಷಿಯಾಯ್ತು.
ಯಾಕೋ ಹುಡುಗಿ, ಇತ್ತೀಚೆಗೆ “ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು’ ಎಂಬಂತೆ ಯಾರೊಂದಿಗೂ ನಾನು ಸೇರುತ್ತಿಲ್ಲ. ಬರೀ ನಿನ್ನ ಗುಂಗಿನಲ್ಲೇ ಸಮಯ ಹೋಗುತ್ತಿದೆ. “ನೀರಿಳಿಯದ ಗಂಟಲೋಳ್ ಕಡುಬು ತುರುಕಿದ ಹಾಗಾಯ್ತು’ ಅನ್ನುವ ಹಾಗೆ ಊಟ, ನಿದ್ದೆ ಬೇಡವಾಗಿದೆ. ನೀನು ನನ್ನತ್ತ ನೋಡಿ ಮುಗುಳ್ನಕ್ಕಾಗ ನನ್ನ ಪರಿಸ್ಥಿತಿ “ಬೆಕ್ಕಿಗೆ ಆಟ, ಇಲಿಗೆ ಪ್ರಾಣಸಂಕಟ’ ಎನ್ನುವ ಹಾಗಿರುತ್ತದೆ. ಅÇÉಾ! ಮೊನ್ನೆ ಕ್ಯಾಂಪ್‌ನಲ್ಲಿ ನಿನ್ನನ್ನು ನನ್ನ ಸ್ನೇಹಿತರು ರೇಗಿಸಿದಾಗ “ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ’ ಪ್ರಯೋಗಿಸಿದಂತೆ ನನ್ನ ಮೇಲೆ ಕೋಪಮಾಡಿಕೊಂಡು ರೇಗಾಡಿದೆ. ಯಾಕೋ ಅವತ್ತು ಬಹಳ ಬೇಸರವಾಯಿತು. “ತಾಳಿದವನು ಬಾಳಿಯಾನು’ ಎಂದು ಸುಮ್ಮನಾಗಿಬಿಟ್ಟೆ. ತಪ್ಪು ನನ್ನದಲ್ಲ ಎಂದು ಗೊತ್ತಾದಾಗ ನೀನು ಬಂದು ಕ್ಷಮೆ ಕೇಳಿದೆ. ಆದರೂ ನೀನೊಮ್ಮೆ “ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡ’ಬೇಕಿತ್ತು.
ಈ ವಿಷಯದಲ್ಲಿ ನಿನ್ನೊಂದಿಗೆ ನನ್ನ ತ”ಗಾದೆ’ ಇದೆ ಹುಡುಗಿ. ಏನೇ ಹೇಳು, ನಿನ್ನ ನೆನಪುಗಳು ಒಂದು ರೀತಿ “ಬಿಸಿ ತುಪ್ಪ ಇದ್ದಹಾಗೆ. ನುಂಗೋಕ್ಕೂ ಆಗೋಲ್ಲ, ಉಗುಳ್ಳೋದೂ ಕಷ್ಟವೇ’. “ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದ ಹಾಗೆ’ ಕನಸಿನ ರಾಶಿಗಳನ್ನು ಹೊತ್ತುಕೊಂಡು ನಿನಗಾಗಿ ಕಾದು ಕುಳಿತಿದ್ದೇನೆ.– ಇಂತಿ ನಿನ್ನ ಹುಡುಗ