Advertisement

ಆಳ್ವಾಸ್‌ ಸತತ 16ನೇ ಬಾರಿ ಅಗ್ರಸ್ಥಾನಿ

09:57 AM Sep 28, 2019 | keerthan |

ಮೂಡುಬಿದಿರೆ: ಮಂಗಳೂರು ವಿ.ವಿ. ದೈಹಿಕ ಶಿಕ್ಷಣ ವಿಭಾಗ ಹಾಗೂ ಮೂಡುಬಿದಿರೆ ಆಳ್ವಾಸ್‌ ಕಾಲೇಜಿನ ಸಹಯೋಗದಲ್ಲಿ ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ನಡೆದ 39ನೇ ಮಂಗಳೂರು ವಿ.ವಿ. ಅಂತರ್‌ ಕಾಲೇಜ್‌ ಮತ್ತು ಭಿನ್ನ ಸಾಮರ್ಥ್ಯದ ಮಕ್ಕಳ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಮೂಡುಬಿದಿರೆಯ ಆಳ್ವಾಸ್‌ ಕಾಲೇಜು ಒಟ್ಟು 500 ಅಂಕಗಳೊಂದಿಗೆ ಸಮಗ್ರ ಚಾಂಪಿಯನ್‌ಶಿಪ್‌ ಪಡೆದು ಸತತ 16ನೇ ಬಾರಿ ಅಗ್ರಸ್ಥಾನಿಯಾಗಿದೆ.

Advertisement

ಸಮಾರೋಪ ಸಮಾರಂಭದಲ್ಲಿ ಮಂಗಳೂರು ವಿ.ವಿ. ಕುಲಪತಿ ಡಾ| ಪಿ. ಸುಬ್ರಹ್ಮಣ್ಯ ಎಡಪಡಿತ್ತಾಯ ಮಾತನಾಡಿ, ಆಳ್ವಾಸ್‌ ಕಾಲೇಜು ಮಂಗಳೂರು ವಿ.ವಿ. ಅವಿಭಾಜ್ಯಅಂಗವಾಗಿ, ರಾಷ್ಟ್ರೀಯ ಮಟ್ಟದಲ್ಲಿ ಮಂಗಳೂರು ವಿ.ವಿ. ಸಾಧನೆ ಮೆರೆಯಲು ಸದಾ ಸಹಕರಿಸಿದೆ ಎಂದರು.

ಮಂಗಳೂರು ವಿ.ವಿ. ಕ್ರೀಡಾಪಟುಗಳಿಗೆ ನೀಡುತ್ತಿರುವ ಸಹಕಾರವನ್ನು ಸ್ಮರಿಸಿದ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅವರು “ಆಳ್ವಾಸ್‌ ಶಿಕ್ಷಣ ಸಂಸ್ಥೆಯು ಕ್ರೀಡೆಗಾಗಿ ವರ್ಷಕ್ಕೆ 8 ಕೋ.ರೂ.ಗಳಷ್ಟು ಮೊತ್ತವನ್ನು ಮೀಸಲಿರಿಸಿ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ ‘ ಎಂದರು. ಮಾಜಿ ಸಚಿವ ಕೆ. ಅಭಯಚಂದ್ರ ಮುಖ್ಯಅತಿಥಿಯಾಗಿದ್ದರು.

ಆಳ್ವಾಸ್‌ ಪದವಿ ಕಾಲೇಜಿನ ಪ್ರಾಂಶುಪಾಲ ಡಾ| ಕುರಿಯನ್‌, ಮಂಗಳೂರು ವಿ.ವಿ. ದೈಹಿಕ ಶಿಕ್ಷಣ ನಿರ್ದೇಶಕ ಡಾ| ಕಿಶೋರ್‌ಕುಮಾರ್‌ ಸಿ.ಕೆ. ಉಪಸ್ಥಿತರಿದ್ದರು. ಕೂಟ ದಾಖಲೆಯನ್ನು ಸಾಧಿಸಿದ ವಿದ್ಯಾರ್ಥಿಗಳಿಗೆ ತಲಾ ರೂ. 2,000 ನಗದು ಬಹುಮಾನ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next