ಅಳ್ವಾರ್(ರಾಜಸ್ಥಾನ್): ವಿಶೇಷ ಚೇತನ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಫ್ಲೈಓವರ್ ಬಳಿ ಬಿಟ್ಟು ಹೋಗಿರುವ ಅಳ್ವಾರ್ ಅತ್ಯಾಚಾರ ಪ್ರಕರಣದ ತನಿಖೆಯಲ್ಲಿ ಈವರೆಗೆ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ ಎಂದು ರಾಜಸ್ಥಾನ್ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಯಡಿಯೂರಪ್ಪ ಬೇಲ್ ಮೇಲೆ ಆಚೆ ಇರುವುದಲ್ಲವೇ ? ಡಿ.ಕೆ.ಶಿವಕುಮಾರ್ ಪ್ರಶ್ನೆ
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಪುರಾವೆ ಸಿಕ್ಕಿಲ್ಲ. ಪ್ರಕರಣದ ನಂತರ ಆಕೆಯ ಮನೆ ಹಾಗೂ ಫ್ಲೈಓವರ್ ಪ್ರದೇಶದವರೆಗಿನ ವಿವಿಧ ಪ್ರದೇಶಗಳ ಸಿಸಿಟಿವಿ ಫೂಟೇಜ್ ಪರಿಶೀಲಿಸಿದ್ದೇವೆ. ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಸಾಧ್ಯತೆ ಕಡಿಮೆ ಇದೆ ಎಂದು ಸಿವಿಲ್ ರೈಟ್ಸ್ ಡಿಐಜಿ ಡಾ.ರವಿ ಎಎನ್ ಐ ಜತೆ ಮಾತನಾಡುತ್ತ ಮಾಹಿತಿ ನೀಡಿದ್ದಾರೆ.
ರಾಜಸ್ಥಾನದ ಅಳ್ವಾರ್ ನ ಟಿಜಾರಾ ಫ್ಲೈಓವರ್ ಬಳಿ ಅಪ್ರಾಪ್ತ ಬಾಲಕಿ ಪತ್ತೆಯಾಗಿದ್ದಳು. ಆಕೆ ರಕ್ತಸ್ರಾವದ ಮಡುವಿನಲ್ಲಿ ಬಿದ್ದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಲಕಿಗೆ ಶಸ್ತ್ರಚಿಕಿತ್ಸೆ ನಡೆಸಿದ ನಂತರ ಆಕೆ ಆರೋಗ್ಯ ಸ್ಥಿರವಾಗಿರುವುದಾಗಿ ವೈದ್ಯರು ತಿಳಿಸಿದ್ದರು.
ವಿಧಿವಿಜ್ಞಾನ ವರದಿಯ ಆಧಾರದ ಮೇಲೆ ಇದೊಂದು ಅತ್ಯಾಚಾರ ಪ್ರಕರಣ ಎಂದು ನಿರ್ಧರಿಸುವುದಿಲ್ಲ ಎಂದು ಅಳ್ವಾರ್ ಪೊಲೀಸರು ತಿಳಿಸಿದ್ದು, ತಾಂತ್ರಿಕ ಸಾಕ್ಷ್ಯಾಧಾರ ಮತ್ತು ವಿಡಿಯೋ ಸಾಕ್ಷ್ಯದ ಪ್ರಕಾರ, ಆಕೆ ಟಿಜಾರಾ ಫ್ಲೈಓವರ್ ಮೇಲೆ ಸಂತ್ರಸ್ತೆ ನಡೆದುಕೊಂಡು ಹೋಗಿರುವುದು ಸೆರೆಯಾಗಿದೆ. ವೈದ್ಯರ ವರದಿ ಪ್ರಕಾರ ಆಕೆ ಗುಪ್ತಾಂಗದಲ್ಲಿ ಯಾವುದೇ ಗಾಯಗಳಿಲ್ಲ ಎಂದು ತಿಳಿಸಿರುವುದಾಗಿ ವರದಿ ವಿವರಿಸಿದೆ.