Advertisement

ಆಳ್ವಾಸ್‌ ವಿರಾಸತ್‌ಗೆ ಇಂದು ತೆರೆ

04:09 PM Jan 14, 2018 | |

ಮೂಡಬಿದಿರೆ: ವಿದ್ಯಾಗಿರಿ ಸನಿಹ ಪುತ್ತಿಗೆ ಗ್ರಾಮದ ವಿವೇಕಾನಂದ ನಗರದಲ್ಲಿರುವ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್‌ ವೇದಿಕೆಯಲ್ಲಿ ನಡೆಯುತ್ತಿರುವ 24ನೇ ವರ್ಷದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್‌ ವಿರಾಸತ್‌ ರವಿವಾರ ಸಮಾಪನಗೊಳ್ಳಲಿದೆ.

Advertisement

ಈ ಬಾರಿಯ ವಿರಾಸತ್‌ ಐದು ಆಯಾಮಗಳಲ್ಲಿ ಅರಳಿಕೊಂಡಿದೆ. ಹಿಂದಿ ಚಿತ್ರರಂಗದ ಸುಪ್ರಸಿದ್ಧ ಹಿನ್ನೆಲೆ ಗಾಯಕರಾದ ಕೆ.ಕೆ. ಬಳಗ ಮತ್ತು ತಂಡದವರು ಮೊದಲ ದಿನ ಸೇರಿದ ಅರ್ಧ ಲಕ್ಷಕ್ಕೂ ಅಧಿಕ ಮಂದಿಯನ್ನು ಸಂಗೀತ ರಸಧಾರೆ ಯಲ್ಲಿ ತೋಯಿಸಿಬಿಟ್ಟರು. ಶನಿವಾರ ನಡೆದ ಮುಂಬಯಿಯ ಶಂಕರ್‌ ಮಹ ದೇವನ್‌ -ಎಹಸಾನ್‌-ಲೋಯ್‌, ಸಿದ್ಧಾರ್ಥ ಮಹದೇವನ್‌ ಮತ್ತು ಬಳಗದವರ ಸುಮಧುರ ಸಂಗೀತಕ್ಕೂ ಜನವೋ ಜನ.

ಕೇರಳದ ಸೂರ್ಯಗಾಯತ್ರಿ ಅವರ ದೇವರನಾಮ, ಮಂಗಳೂರಿನ ಸನಾತನ ನಾಟ್ಯಾಲಯದ ವಿ| ಶಾರದಾಮಣಿ ಶೇಖರ್‌ ಮತ್ತು ವಿ| ಶ್ರೀಲತಾ ನಾಗರಾಜ್‌ ನಿರ್ದೇಶನದಲ್ಲಿ ಪ್ರಸ್ತುತಪಡಿಸಿದ ಸನಾತನ ರಾಷ್ಟ್ರಾಮೃತ, ಕೇರಳದ ಮುತ್ತಿರಿಕ್ಕಸ್‌ ಕೋಟಪುರಂ ಮತ್ತು ಬಳಗದವರ ದಫು¾ಟ್ಟು, ಬಿ. ಎಸ್‌. ಆನಂದ್‌, ಪನ್ನಗ ಶರ್ಮನ್‌ ತಂಡದವರ ಮೃದಂಗ ತರಂಗ, ಕೋಲ್ಕತಾದ ಉಪಾಸನಾ ಸೆಂಟರ್‌ ಫಾರ್‌ ಡ್ಯಾನ್ಸ್‌ ಇವರ ಕಥಕ್‌, ಕುಂದಾಪುರದ ನೃತ್ಯ ವಸಂತ ನಾಟ್ಯಾಲಯದವರ ಕರಾವಳಿ ವೈಭವ, ನಿತ್ಯ ನಡೆದ ಆಳ್ವಾಸ್‌ ಸಾಂಸ್ಕೃತಿಕ ತಂಡಗಳ ವೈವಿಧ್ಯಮಯ ಪ್ರದರ್ಶನಗಳು ಜನಮನ ಸೂರೆಗೊಳ್ಳುವಲ್ಲಿ ಯಶಸ್ವಿಯಾಗಿವೆ.

ಇಂದು ಶೋಭಾ ಬ್ರೂಟಗೆ  ವರ್ಣ ವಿರಾಸತ್‌ ಪ್ರಶಸ್ತಿ ಪ್ರದಾನ ರವಿವಾರ ಆಳ್ವಾಸ್‌ ವಿರಾಸತ್‌ ಸಮಾಪನಗೊಳ್ಳುವ ಜತೆಗೆ ಕಳೆದ ಜ. 9ರಿಂದ ವಿದ್ಯಾಗಿರಿಯಲ್ಲಿ ನಡೆದ ಆಳ್ವಾಸ್‌ ವರ್ಣ ವಿರಾಸತ್‌ ರಾಷ್ಟ್ರೀಯ ಚಿತ್ರಕಲಾವಿದರ ಶಿಬಿರವೂ ಮುಕ್ತಾಯಗೊಳ್ಳಲಿದ್ದು, ರಾತ್ರಿ 9ರ ವರೆಗೆ ಚಿತ್ರಕಲಾಕೃತಿಗಳನ್ನು ವೀಕ್ಷಿಸಲು ಅವಕಾಶವಿದೆ. ಸಂಜೆ ಹೊಸದಿಲ್ಲಿಯ ಹಿರಿಯ ಚಿತ್ರಕಲಾವಿದೆ ಶೋಭಾ ಬ್ರೂಟ ಅವರಿಗೆ ಆಳ್ವಾಸ್‌ ವರ್ಣ ವಿರಾಸತ್‌ ಪ್ರಶಸ್ತಿ ಪ್ರದಾನ ಮಾಡಲಾಗುವುದು. 

ಖೇರ್‌ ಚಿತ್ರ ಸಂಗೀತ: ಮುಂಬಯಿಯ ಕೈಲಾಶ್‌ ಖೇರ್‌ ಚಿತ್ರಸಂಗೀತ, ಮಾ| ಸದ್ಗುಣ ಐತಾಳ್‌ ಬಳಗದಿಂದ ಮ್ಯಾಜಿಕ್‌ ಆಫ್‌ ಮ್ಯಾಂಡೋಲಿನ್‌, ಒರಿಸ್ಸಾ ಡ್ಯಾನ್ಸ್‌ ಅಕಾಡೆಮಿಯಿರಿಂದ ಒಡಿಸ್ಸಿ ನೃತ್ಯ, ಕೊಡವೂರು ನೃತ್ಯ ನಿಕೇತನದವರಿಂದ ನೃತ್ಯ ವೈಭವ ಮತ್ತು ಆಳ್ವಾಸ್‌ ವಿದ್ಯಾರ್ಥಿಗಳಿಂದ ಬಂಜಾರ, ಒಡಿಶಾದ ಗೋಟಿಪುವ, ಮಣಿಪುರದ ಸ್ಟಿಕ್‌ ಡ್ಯಾನ್ಸ್‌, ಕಥಕ್‌ ನೃತ್ಯ – ಚಾರ್‌ ಪ್ರಹರ್‌ ಏರ್ಪಡಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next