Advertisement

Moodabidri ಆಳ್ವಾಸ್‌ ವಿರಾಸತ್‌ – 2023: ಡಿ. 14-17: ಆಹಾರ, ಕೃಷಿ-ಕರಕುಶಲ ವಸ್ತು ಮೇಳ

11:52 PM Nov 21, 2023 | Team Udayavani |

ಮೂಡುಬಿದಿರೆ: ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ ನಡೆಸುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್‌ ವಿರಾಸತ್‌ ಸಂದರ್ಭದಲ್ಲಿ ಶತಾಯುಷಿ ಮಿಜಾರುಗುತ್ತು ಆನಂದ ಆಳ್ವರ ಸ್ಮರಣಾರ್ಥ ವಿದ್ಯಾಗಿರಿಯ ಶ್ರೀಮತಿ ಸುಂದರಿ ಆನಂದ ಆಳ್ವ ಆವರಣದ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ಸಭಾಂಗಣದಲ್ಲಿ ಡಿಸೆಂಬರ್‌ 14ರಿಂದ 17ರ ವರೆಗೆ ಬೆಳಗ್ಗೆ 9ರಿಂದ ರಾತ್ರಿ 9ರ ವರೆಗೆ “ಆಳ್ವಾಸ್‌ ಆಹಾರೋತ್ಸವ, ಕೃಷಿ- ಕರಕುಶಲ ವಸ್ತುಗಳ ಮಹಾಮೇಳ’ ನಡೆಯಲಿದೆ ಎಂದು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Advertisement

ಆಹಾರೋತ್ಸವ ಪ್ರದರ್ಶನ ಮತ್ತು ಮಾರಾಟ ಮಳಿಗೆ ಗಳಲ್ಲಿ ದೇಸಿ ಆಹಾರ ಪದಾರ್ಥಗಳಾದ ಸಸ್ಯಾ ಹಾರ- ಮಾಂಸಾಹಾರ ಖಾದ್ಯಗಳು, ಫಾಸ್ಟ್‌ಫ‌ುಡ್‌ ಹಾಗೂ ವೈವಿಧ್ಯಮಯ ಪಾನೀಯಗಳಿಗೆ ಸಂಬಂಧಿಸಿದ ಸಿದ್ಧ ಮತ್ತು ಸ್ಥಳದಲ್ಲೇ ತಯಾರಿಸಿ ನೀಡುವ ಆಹಾರಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಲ್ಲಿ ಹಣ್ಣು, ತರಕಾರಿ, ಹೂವು ಬೀಜಗಳ ಮಾರಾಟ, ನರ್ಸರಿಗಳು, ಸಾವಯವ – ರಾಸಾಯನಿಕ ಗೊಬ್ಬರ ಗಳು, ನೀರು-ನೆಲಗಳಲ್ಲಿ ಬೆಳೆಯುವ ವೈವಿಧ್ಯಮಯ ಹೂಗಿಡಗಳು, ಕೃಷಿ ಉಪಕರಣ- ಯಂತ್ರಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸೆರಾಮಿಕ್ಸ್‌ ಮತ್ತು ಗಾಜಿನ ಕರಕುಶಲ ವಸ್ತುಗಳು, ಫೈಬರ್‌, ಜವುಳಿ, ಚರ್ಮ, ಹೂವಿನಿಂದ ತಯಾರಿಸಿದ ಕರಕುಶಲ ವಸ್ತುಗಳು, ಗೃಹೋಪಯೋಗಿ ವಸ್ತು ಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಮಳಿಗೆಗಳನ್ನು ತೆರೆಯಲು ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನಿಗದಿತ ಶುಲ್ಕ ಸಂದಾಯ ಮಾಡಿ ಡಿ. 6ರ ಒಳಗಡೆ ನೋಂದಾಯಿಸಿಕೊಳ್ಳುವಂತೆ ಮತ್ತು ಡಿ. 8ರ ಒಳಗಡೆ ನೋಂದಾಯಿಸಿದ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು ಎಂದರು.

ಹೆಚ್ಚಿನ ಮಾಹಿತಿಗೆ – ಆಳ್ವಾಸ್‌ ಕೃಷಿಸಿರಿ ವಿಭಾಗ, ಡಾ| ಎಂ. ಶಂಕರ್‌ ನಾಯಕ್‌ ಸಂಕೀರ್ಣ, ಆಳ್ವಾಸ್‌ ಆಡಳಿತ ಕಚೇರಿ, ಸ್ವರಾಜ್ಯ ಮೈದಾನದ ಬಳಿ, ಮೂಡುಬಿದಿರೆ-574227 ಇಲ್ಲಿ ಡಾ| ಶಶಿಕುಮಾರ್‌, ಡಾ| ವಿನುತಾ ಬಿ.ಎಂ. ಅವರನ್ನು ಸಂಪರ್ಕಿಸಬಹುದು ಎಂದರು.

Advertisement

ಮಹಾಮೇಳದ ಕಾರ್ಯಕಾರಿ ಸಮಿತಿ ಸದಸ್ಯರಾದ ರಾಜವರ್ಮ ಬೈಲಂಗಡಿ, ಸುಭಾಶ್ಚಂದ್ರ ಚೌಟ, ಜಿನೇಂದ್ರ ಜೈನ್‌, ಉದಯ ದೇವಾಡಿಗ, ಗುಣಪಾಲ ಮುದ್ಯ ಹಾಗೂ ಡಾ| ಶಶಿಕುಮಾರ ಪತ್ರಿಕಾ ಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next