Advertisement

ಆಳ್ವಾಸ್‌ ನುಡಿಸಿರಿಯಲ್ಲಿ  ಉದ್ಯೋಗ ಸಿರಿ

11:56 AM Dec 04, 2017 | |

ಮೂಡಬಿದಿರೆ -ವಿದ್ಯಾಗಿರಿ: ಆಳ್ವಾಸ್‌ ನುಡಿಸಿರಿ 2017ರ ಮೂರನೇ ದಿನವಾದ ರವಿವಾರ ವಿದ್ಯಾಗಿರಿಯ ಪಿ.ಜಿ. ಬ್ಲಾಕ್‌ನಲ್ಲಿ ಕನ್ನಡ ಮಾಧ್ಯಮದಲ್ಲಿ ಎಸ್‌ಎಸ್‌ಎಲ್‌ಸಿ ವರೆಗೆ ಓದಿದ ಮತ್ತು ಹೆಚ್ಚಿನ ಶಿಕ್ಷಣ ಪಡೆದವರಿಗಾಗಿ ಏರ್ಪಡಿಸಲಾಗಿದ್ದ “ಆಳ್ವಾಸ್‌ ಉದ್ಯೋಗ ಸಿರಿ’ಗೆ ಉತ್ತಮ ಸ್ಪಂದನೆ ಕಂಡುಬಂದಿದೆ.

Advertisement

71 ಕಂಪೆನಿಗಳು ಭಾಗವಹಿಸಿದ್ದವು. 838 ಮಂದಿ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದಾರೆ. ಇವರಲ್ಲಿ 216 ಮಂದಿಗೆ ಉದ್ಯೋಗ ಲಭಿಸಿದೆ. ಆನ್‌ಲೈನ್‌ ಮೂಲಕ 3,023 ಮಂದಿ ಸ್ಥಳದಲ್ಲೇ 834 ಮಂದಿ ನೋಂದಣಿ ನಡೆಸಿದ್ದರು. ಆಳ್ವಾಸ್‌ ಟ್ರಸ್ಟಿ ವಿವೇಕ ಆಳ್ವ ಉದ್ಯೋಗ ಸಿರಿಯ ಸಮಗ್ರ ಉಸ್ತುವಾರಿ ನಡೆಸಿದ್ದರು. ಕಾರ್ಯಕ್ರಮವನ್ನು ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲಾಭಿವೃದ್ಧಿ ನಿಗಮದ ಅಧ್ಯಕ್ಷ ಮುರಳೀಧರ ಹಾಲಪ್ಪ ಉದ್ಘಾಟಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next