Advertisement
ಈ ಕುರಿತಾಗಿ ಪತ್ರಿಕಾಗೋಷ್ಟೀಯಲ್ಲಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.)ದ ಡಾ. ಎಂ. ಮೋಹನ ಆಳ್ವ, ಸಂಸ್ಥೆಯ ಕ್ರೀಡಾ ವಿಭಾಗದ ಧನಲಕ್ಷ್ಮೀ ಮತ್ತು ಶುಭ ಜಪಾನಿನ ಟೋಕಿಯೋ ಒಲಂಪಿಕ್ಸ್ ಕ್ರೀಡಾಕೂಟಕ್ಕೆ ಆಯ್ಕೆ ಆಗಿರುವುದು ಸಂಸ್ಥೆಗೆ ಹೆಮಮೆಯ ಸಂಗತಿ ಎಂದಿದ್ದಾರೆ.
Related Articles
Advertisement
ಇದನ್ನೂ ಓದಿ : ಭಾರತಕ್ಕೆ ಎಂದೂ ಅಭದ್ರತೆಯ ಸ್ಥಿತಿ ಒದಗಿರಲಿಲ್ಲ : ಕೇಂದ್ರದ ವಿರುದ್ಧ ಗಾಂಧಿ ಟ್ವೀಟಾಕ್ರೋಶ
ಆಳ್ವಾಸ್‌ನ ಧನಲಕ್ಷ್ಮೀ , ಶುಭ ಟೋಕಿಯೊ ಒಲಂಪಿಕ್ಸ್ ಗೆ : ಬಡತನದಲ್ಲಿ ಅರಳಿದ ಕ್ರೀಡಾಸಾಧಕರು
ಧನಲಕ್ಷ್ಮೀ ಮತ್ತು ಶುಭ ಇಬ್ಬರೂ ಮೂಲತ : ತಮಿಳುನಾಡಿನ ತಿರುಚ್ಚಿಯವರು.
ಮನೆಯಲ್ಲಿ ಕಡುಬಡತನ. ಡಾ| ಮೋಹನ ಆಳ್ವರ ಕಣ್ಣಿಗೆ ಬಿದ್ದ ಈ ಕ್ರೀಡಾಳುಗಳು 2017ರಲ್ಲಿ ಆಳ್ವಾಸ್ ಶಿಕ್ಷಣಾಲಯವನ್ನು ಕ್ರೀಡಾ ದತ್ತು ಸ್ವೀಕಾರದಡಿ ಸೇರಿಕೊಂಡು ಮತ್ತೆ ಹಂತಹಂತವಾಗಿ ಸಾಧನೆ ಮಾಡುತ್ತ ಮುನ್ನಡೆ ಸಾಧಿಸುತ್ತ ಬಂದಿದ್ದಾರೆ.
ಧನಲಕ್ಷ್ಮೀ ಆಳ್ವಾಸ್‌ನಲ್ಲಿ ಪಿಜಿ ಡಿಸಿಎ ಹಾಗೂ ಶುಭ ಬಿಬಿಎ ಪದವಿ ಓದುತ್ತಲಿದ್ದಾರೆ.
ಆಳ್ವಾಸ್ ಸೇರಿಕೊಂಡ ಬಳಿಕ, ಅಂತರ್ ವಿ.ವಿ. ಕ್ರೀಡಾಕೂಟದಲ್ಲಿ 200 ಮೀ. ಓಟದಲ್ಲಿ ಚಿನ್ನ, 100 ಮೀ. ಓಟದಲ್ಲಿ ರಜತ ಪದಕ ಗೆದ್ದಿದ್ದರೆ ಶುಭ 400 ಮೀ. ರಿಲೇಯಲ್ಲಿ ಕಂಚಿನ ಪದಕ ಪಡೆದರು.
ಧನಲಕ್ಷ್ಮೀವಈಗಾಗಲೇ ಜಿಂದಾಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದು ಬಳಿಕ ಪಾಟಿಯಾಲದ ಕ್ರೀಡಾ ತರಬೇತಿ ಶಿಬಿರ ಸೇರಿದರು. ಶುಭ ಕೂಡ ಅಲ್ಲಿಗೆ ಸೇರ್ಪಡೆಗೊಂಡರು. ಅಂತರ್‌ರಾಜ್ಯ ಆತ್ಲೆಟಿಕ್ ಕ್ರೀಡಾ ನಿರ್ವಹಣೆಯ ಆಧಾರದಲ್ಲಿ ಅವರಿಬ್ಬರೂ ಟೋಕಿಯೋ ಒಲಿಂಪಿಕ್ಸ್ ಗೆ ಆಯ್ಕೆಯಾಗುವಂತಾಯಿತು. ಭಾರತದ 4ಇಂಟು 400 ಮೀ. ಮಿಕ್ಸೆಡ್ ರಿಲೇ ತಂಡದ ಇಬ್ಬರು ಮಹಿಳಾ ಓಟಗಾರರು ಆಳ್ವಾಸ್‌ನವರಾಗಿರುವುದು ವಿಶೇಷ.
ಆಳ್ವಾಸ್ ನ ಕ್ರೀಡಾ ಸಾಧನೆ :
2016 ರಿಯೋ ಒಲಿಂಪಿಕ್ಸ್ ನಲ್ಲಿ ಆಳ್ವಾಸ್ ದತ್ತು ಸ್ವೀಕಾರದ ಕ್ರೀಡಾಳುವಾಗಿ ಎಂ. ಆರ್. ಪೂವಮ್ಮ , ಧಾರುಣ್ ಅಯ್ಯ ಸ್ವಾಮಿ ಮತ್ತು ಮೋಹನ್ ಭಾರತದ ತಂಡಗಳಲ್ಲಿದ್ದರು. ಪೂವಮ್ಮ ಮಹಿಳೆಯರ 4 ಇಂಟು 400 ಮೀ. ರಿಲೇಯಲ್ಲಿ, ಧಾರುಣ್ ಆಯ್ಯ ಸ್ವಾಮಿ ಹಾಗೂ ಮೋಹನ್ ಪುರುಷರ 4ಇಂಟು 400 ಮೀ. ರಿಲೇ ತಂಡದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.ಈ ಮೂವರಿಗೂ ಅಂದು ಡಾ| ಮೋಹನ ಆಳ್ವರು ಉಚಿತ ಹಾಸ್ಟೆಲ್ ಸಹಿತ ಶಿಕ್ಷಣ, ಕ್ರೀಡಾ ತರಬೇತಿ, ಪ್ರವಾಸ ವೆಚ್ಚ ಇತ್ಯಾದಿಗಳನ್ನು ಒದಗಿಸಿದ್ದಲ್ಲದೆ ಒಲಿಂಪಿಕ್ಸ್ ಗೆ ಆಯ್ಕೆಯಾದುದಕ್ಕಾಗಿ ಪ್ರೋತ್ಸಾಹಕ ಧನವಾಗಿ ತಲಾ ರೂ. 1 ಲಕ್ಷ ಕೊಡುಗೆಯಾಗಿ ನೀಡಿದ್ದು ಇದೇ ರೀತಿಯ ಪ್ರೋತ್ಸಾಹ ಇದೀಗ ಟೋಕಿಯೋ ಒಲಿಂಪಿಕ್ಸ್ ಗೆ ಆಯ್ಕೆಯಾಗಿರುವ ಧನಲಕ್ಷ್ಮೀ ಹಾಗೂ ಶುಭ ಅವರಿಗೆ ಲಭಿಸುತ್ತಿದೆ.
ಇದನ್ನೂ ಓದಿ : ಹರ್ ಘರ್ ಜಲ್ : ಒಂದು ಲಕ್ಷ ಗ್ರಾಮಗಳಲ್ಲಿ ಟ್ಯಾಪ್ ವಾಟರ್ ಸರಬರಾಜು ಕಾರ್ಯ ಪೂರ್ಣ: ಕೇಂದ್ರ