Advertisement

ವಿಶ್ವ ಜಾಂಬೂರಿಯಲ್ಲಿ “ಕಾಂತಾರ’ಗದ್ದಲ!

01:31 AM Dec 26, 2022 | Team Udayavani |

ಮೂಡುಬಿದಿರೆ: ವಿಶ್ವದೆಲ್ಲೆಡೆ ಅಬ್ಬರದ ಪ್ರದರ್ಶನ ಕಂಡಿರುವ”ಕಾಂತಾರ’ ಚಿತ್ರ ವಿಶ್ವ ಜಾಂಬೂರಿ ಯಲ್ಲೂ ಮೋಡಿ ಮಾಡಿದೆ. ಚಿತ್ರ ವೀಕ್ಷಣೆ ಅವಕಾಶಕ್ಕಾಗಿ ಆಗ್ರಹಿಸಿ ಶಿಬಿರಾ ರ್ಥಿಗಳು ಹಾಗೂ ಶಿಕ್ಷಕರು ಗಲಾಟೆ ಮಾಡಿದ ಪ್ರಸಂಗವೂ ನಡೆಯಿತು!

Advertisement

ಆಳ್ವಾಸ್‌ ಕ್ಯಾಂಪಸ್‌ನಲ್ಲಿ ಜಾಂಬೂರಿಯ ಶಿಬಿರಾರ್ಥಿಗಳು ಹಾಗೂ ಅವರ ಶಿಕ್ಷಕರಿಗಾಗಿ ಕಾಂತಾರ, ಭಜರಂಗಿ ಭಾಯಿಜಾನ್‌, ಅಪ್ಪು, ಚಾರ್ಲಿ 777 ಚಲನಚಿತ್ರಗಳ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಜಾಂಬೂರಿಯ ಆರಂಭದ ದಿನದಿಂದಲೂ ಶಿವರಾಮ ಕಾರಂತ ಹಾಗೂ ಕುವೆಂಪು ಥಿಯೇಟರ್‌ಗಳಲ್ಲಿ ಚಲನಚಿತ್ರಗಳ ಪ್ರದರ್ಶನ ನಡೆಯುತ್ತಿದೆ. ಒಂದು ಬಾರಿಗೆ 250 ಮಂದಿಗೆ ಚಿತ್ರ ವೀಕ್ಷಣೆಗೆ ಅವಕಾಶವಿದೆ. ಪ್ರತೀ ಥಿಯೇಟರ್‌ನಲ್ಲಿ ದಿನಕ್ಕೆ ಎರಡು ಪ್ರದರ್ಶನ ಮಾಡಲಾಗುತ್ತಿದೆ.

ಒಂದು ಥಿಯೇಟರ್‌ನಲ್ಲಿ ಕಾಂತಾರ, ಅಪ್ಪು ಹಾಗೂ ಇನ್ನೊಂದರಲ್ಲಿ ಭಜರಂಗಿ ಭಾಯಿಜಾನ್‌, ಚಾರ್ಲಿ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕಾಂತಾರ ಚಿತ್ರಕ್ಕೆ ಹೆಚ್ಚು ಬೇಡಿಕೆಯ ಹಿನ್ನೆಲೆಯಲ್ಲಿ ಒಂದು ಥಿಯೇಟರ್‌ನಲ್ಲಿ ಕಾಂತಾರದ ಎರಡು ಪ್ರದರ್ಶನಕ್ಕೆ ಅವಕಾಶ ನೀಡಲಾಗಿದ್ದರೂ ಮತ್ತೂಂದು ಪ್ರದರ್ಶನ ಏರ್ಪಡಿಸಬೇಕೆಂದು ಶಿಬಿರಾರ್ಥಿಗಳು ಒತ್ತಾಯಿಸಿದರು. ಇದಕ್ಕೆ “ಅವಕಾಶ ನೀಡಿಲ್ಲ’ ಎಂಬ ಕಾರಣಕ್ಕೆ ಸಂಘಟಕರ ಜತೆಗೆ ಮಾತಿನ ಚಕಮಕಿ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next