Advertisement

ಮೂಡುಬಿದಿರೆ: ಏಳು ದಿನಗಳ ಉತ್ಸವ, ಶಿಕ್ಷಣ ಕಾಶಿಯಲ್ಲಿ ವಿಶ್ವ ಸಂಸ್ಕೃತಿಯ ತೇರು

12:07 AM Dec 22, 2022 | Team Udayavani |

ಮೂಡುಬಿದಿರೆ: ಇಡೀ ವಿಶ್ವದ ಪ್ರಾತಿನಿಧಿಕವಾಗಿ ಮೂಡು ಬಿದಿರೆಯಲ್ಲಿ ಸೇರಿರುವ ಸಾಂಸ್ಕೃತಿಕ ಜಾಂಬೂರಿಯು ಒಂದು ಮಿನಿ ವಿಶ್ವವಾಗಿ ಗೋಚರಿಸಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯ ಡಾ| ವೀರೇಂದ್ರ ಹೆಗ್ಗಡೆ ಬಣ್ಣಿಸಿದರು.

Advertisement

ಉದ್ಘಾಟನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅವರು, ಸಂದಿಗ್ಧ ಸಂದರ್ಭಗಳನ್ನು ಎದುರಿಸುವ ಧೈರ್ಯ ಮತ್ತು ಸ್ಥೈರ್ಯವನ್ನು ಯುವಕರು ರೂಢಿಸಿಕೊಳ್ಳಬೇಕು. ಬಿಕ್ಕಟ್ಟಿನ ಸಂದ ರ್ಭಗಳಲ್ಲಿ ಧೃತಿಗೆಡ ಬಾರದು. ಜಾಂಬೂ ರಿಯಂತಹ ಅವಕಾಶಗಳು ಯುವ ಜನರಿಗೆ ಸಂದಿಗ್ಧ ಸಂದರ್ಭಗಳನ್ನು ಎದುರಿಸುವ ಸಾಮರ್ಥ್ಯವನ್ನು ವರ್ಧಿಸುತ್ತವೆ ಎಂದರು.

ವ್ಯಕ್ತಿತ್ವಕ್ಕೆ ಮೌಲಿಕ ಆಯಾಮ ತಂದುಕೊಳ್ಳುವ ನಿಶ್ಚಿತ ಪ್ರಜ್ಞೆ ಯೊಂದಿಗೆ ಗಟ್ಟಿಹೆಜ್ಜೆಗಳನ್ನಿರಿಸಿ ಸಾಮಾಜಿಕ ಬದಲಾವಣೆ ನೆಲೆ ಗೊಳಿಸುವ ಕೊಡುಗೆಗಳನ್ನು ನೀಡುವುದರ ಕಡೆಗೆ ಯುವಕರು ಹೆಚ್ಚು ಗಮನಹರಿಸಬೇಕು ಎಂದು ಅವರು ಹೇಳಿದರು.

ವ್ಯಕ್ತಿತ್ವ ವನ್ನು ಮರುರೂಪಿಸಿಕೊಳ್ಳುವ ಹಂಬಲದಿಂದ ಯುವಕರು ತಮ್ಮ ಮನಸ್ಸನ್ನು ಉದಾರವಾಗಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಡಾ. ಹೆಗ್ಗಡೆ ತಿಳಿಸಿದರು.

ಬ್ರಿಟಿಷರ ದಾಸ್ಯದಲ್ಲಿದ್ದ ಕಾರಣ ಭಾರತದ ಅನೇಕರಿಗೆ ನಾವು ಕೀಳೆಂಬ ಭಾವನೆ ಇತ್ತು. ಈಗ ಅದೆಲ್ಲವೂ ದೂರವಾಗುವ ಕಾಲ, ಭಾರತೀಯರು ಆತ್ಮವಿಶ್ವಾಸ ವೃದ್ಧಿಸಿಕೊಳ್ಳುತ್ತಿದ್ದಾರೆ. ಯುವಜನರೆಲ್ಲರನ್ನೂ ದೇಶ ಕರೆಯುತ್ತಿದೆ. ಮುಂದಿನ 10 ವರ್ಷಗಳಲ್ಲಿ ಭಾರತದ ಪ್ರಗತಿಗೆ ಕೈಜೋಡಿಸಬೇಕಿದೆ ಎಂದು ಅವರು ಕರೆಯಿತ್ತರು.

Advertisement

ಭಾವೈಕ್ಯಕ್ಕೆ ಆದ್ಯತೆ ನೀಡುವ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ನೈಜ ಭಾರತೀಯ ಪರಿಕಲ್ಪನೆಯನ್ನು ಜೀವಂತವಾಗಿರಿಸಿದೆ. ನಾವೆಲ್ಲರೂ ಒಂದೇ ಎಂಬ ತಣ್ತೀವನ್ನು ತನ್ನ ಕಾರ್ಯಕ್ರಮಗಳ ಮೂಲಕ ಇದು ಸಾರುತ್ತಿದೆ. ಸಣ್ಣ ವಯಸ್ಸಿನಿಂದಲೇ ಭಾವೈಕ್ಯದ ಪಾಠ ಕಲಿತುಕೊಳ್ಳಲು ಇದು ನೆರವಾಗುತ್ತಿದೆ ಎಂದೂ ತಿಳಿಸಿದರು.

ದೇಶ ಸೇವೆಗೆ ಸದಾ ಸಿದ್ಧ
ಭಾರತ ಸ್ಕೌಟ್‌ ಮತ್ತು ಗೈಡ್ಸ್‌ ಇದರ ರಾಷ್ಟ್ರೀಯ ಮುಖ್ಯ ಆಯುಕ್ತ ಡಾ| ಕೆ.ಕೆ. ಖಂಡೇಲ್‌ವಾಲ್‌ ಮಾತನಾಡಿ, ದೇಶದಲ್ಲಿ ಸ್ಕೌಟ್‌ ಚಳವಳಿ ಹೊಸ ಉತ್ಸಾಹದಿಂದ ಮುನ್ನಡೆಯುತ್ತಿದ್ದು ಶೀಘ್ರವೇ 10 ಲಕ್ಷ ಮಂದಿಯ ಶಕ್ತಿಯಾಗಲಿದೆ. ದೇಶಕ್ಕೆ ಸಂಬಂಧಿಸಿದ ಯಾವುದೇ ಸೇವೆಗೆ ಸದಾ ಸನ್ನದ್ಧವಿರಲಿದೆ ಎಂದರು.

ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕ ಉಮಾನಾಥ ಕೋಟ್ಯಾನ್‌, ಏಷ್ಯಾ ಪೆಸಿಫಿಕ್‌ ವಲಯ ಸ್ಕೌಟ್‌ನ ಪ್ರಾದೇಶಿಕ ನಿರ್ದೇಶಕ ಜೆ. ರಿಝಾಲ್‌ ಪಂಗಿಲಿನನ್‌, ವಿಶ್ವ ಗೈಡ್‌ ಸಂಸ್ಥೆಯ ಚಂಪಕ ಇಮಾಲಿನ್‌ ಪಹಮಿಲ್‌, ದ.ಕ. ಜಿಲ್ಲಾಧಿಕಾರಿ ರವಿ ಕುಮಾರ್‌ ಎಂ.ಆರ್‌., ಜಿ.ಪಂ. ಸಿಇಒ ಡಾ| ಕುಮಾರ್‌ ಮೊದಲಾದವರು ಉಪಸ್ಥಿತರಿದ್ದರು.

ರಾಜ್ಯ ಸ್ಕೌಟ್‌ ಮುಖ್ಯ ಆಯುಕ್ತ ಪಿಜಿಆರ್‌ ಸಿಂಧ್ಯಾ ಸ್ವಾಗತಿಸಿದರು. ಆಳ್ವಾಸ್‌ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ವಂದಿಸಿದರು.

ಇಲ್ಲೇ ಮಿನಿ ವಿಶ್ವ: ಡಾ| ವೀರೇಂದ್ರ ಹೆಗ್ಗಡೆ
ಮೂಡುಬಿದಿರೆ : ಈಗಾಗಲೇ ಆಳ್ವಾಸ್‌ ನುಡಿಸಿರಿಯ ಮೂಲಕ ಸಾಹಿತ್ಯ ಲೋಕದಲ್ಲಿ ವಿಹರಿಸಿ ರುವ ಜೈನ ಕಾಶಿ-ಶಿಕ್ಷಣ ಕಾಶಿ ಮೂಡುಬಿದಿರೆ ಇದೀಗ ಸ್ಕೌಟ್‌ ಗೈಡ್‌ನ‌ ಜಾಂಬೂರಿ ಆಯೋಜನೆಯ ಮೂಲಕ ಒಂದು ವಾರ ಕಾಲ ವಿಶ್ವ ಸಾಂಸ್ಕೃತಿಕ ಸಂಭ್ರಮಕ್ಕೆ ಅನಾವರಣ ಗೊಂಡಿದೆ.

ಸಾವಿರ ಸಾವಿರ ಸಂಖ್ಯೆಯಲ್ಲಿ ದೇಶ ವಿದೇಶದಿಂದ ಆಗಮಿಸಿದ ಸ್ಕೌಟ್‌, ಗೈಡ್‌, ರೋವರ್ ಮತ್ತು ರೇಂಜರ್ಸ್‌ ಶಿಬಿರಾರ್ಥಿಗಳು ಅದ್ದೂರಿಯ ಕಾರ್ಯಕ್ರಮದಲ್ಲಿ ಸಂಭ್ರಮ ಸಡಗರದಿಂದ ಪಾಲ್ಗೊಂಡಿದ್ದಾರೆ.

ಮಂಗಳೂರು, ಕಾರ್ಕಳ, ಬಂಟ್ವಾಳ…ಹೀಗೆ ಎಲ್ಲ ರಸ್ತೆಗಳ ಮುಖೇನ ನೂರಾರು ಬಸ್‌, ಟೆಂಪೋ, ಕಾರು, ಜೀಪು, ದ್ವಿಚಕ್ರ ವಾಹನಗಳಲ್ಲಿ ಬಂದ ಸಹಸ್ರಾರು ಮಂದಿ ಆಳ್ವಾಸ್‌ ಕ್ಯಾಂಪಸ್‌ನಲ್ಲಿ ಮೊದಲ ದಿನವೇ ಸೇರಿ ಜನಜಾತ್ರೆಗೆ ಸಾಕ್ಷಿಯಾದರು. ಬೆಳಗ್ಗಿನಿಂದ ಸಂಜೆಯವರೆಗೆ ನಡೆದ ಬಗೆ ಬಗೆಯ ಸಂಗೀತ-ನಾಟ್ಯ ಸಹಿತ ವಿವಿಧ ವಿನೋದಾವಳಿಗಳು ಮೂಡುಬಿದಿರೆಯನ್ನು ಅಕ್ಷರಶಃ ಸಾಂಸ್ಕೃತಿಕ ಸುಧೆಯಲ್ಲಿ ಮಿಂದೇಳುವಂತೆ ಮಾಡಿತು.

ಡಿ. 27ರ ವರೆಗೂ ಇದೇ ಸಂಭ್ರಮ ಇರಲಿದೆ. ದೇಶ-ವಿದೇಶದ ವಿವಿಧ ಭಾಷೆಯ ಮಕ್ಕಳು, ಶಿಕ್ಷಕರು, ಪೋಷಕರು ಒಂದೆಡೆ ಜಮೆಯಾಗಿ ಭಾತೃತ್ವದ ಭಾಷ್ಯ ಬರೆಯುತ್ತಿದ್ದಾರೆ.
ಮೈಮನ ರೋಮಾಂಚನ ಗೊಳಿಸುವ ಪುಷೊ³àದ್ಯಾನ ಹಾಗೂ ಹಣ್ಣು ಹಂಪಲು ಪ್ರದರ್ಶನ, 5 ವೇದಿಕೆ ಗಳಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ, ಕೈ ಮಗ್ಗ, ಖಾದಿ, ರೇಷ್ಮೆ, ಕರಕುಶಲ ವಸ್ತುಗಳು, ತಿಂಡಿ ತಿನಿಸುಗಳ ದೇಸಿ ಮಳಿಗೆಗಳು ಆಕರ್ಷಕ ವಾಗಿವೆ. ನೂರಾರು ವೈವಿಧ್ಯ ಮಯ ಹಾಗೂ ದಿನವಹಿ ಅಗತ್ಯ ವಸ್ತುಗಳ ಮಾರಾಟ ಮಳಿಗೆ ಸಹಿತ ಹತ್ತು ಹಲವು ವಿನೂತನಗಳಿಗೆ ಸಾಕ್ಷಿಯಾಗಿದೆ.

ಬಾಣಸಿಗರು ಸಿದ್ಧ
ಸಾರ್ವಜನಿಕರು ಹಾಗೂ ಶಿಬಿರಾರ್ಥಿಗಳಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಿದ್ದು ಕೂಡ ಸುವ್ಯವಸ್ಥಿತವಾಗಿ ನಡೆಯಿತು. ಸಹಸ್ರಾರು ಜನರ ಹೊಟ್ಟೆ ತಣಿಸಲು ಸರಿಸುಮಾರು 1 ಸಾವಿರ ಬಾಣಸಿಗರು ಟೊಂಕ ಕಟ್ಟಿ ಸಿದ್ಧರಾಗಿದ್ದಾರೆ.

ಮೆರವಣಿಗೆಗೇ ಮೆರುಗು
ಮೂಡುಬಿದಿರೆ : ವಿಶ್ವ ಮಟ್ಟಕ್ಕೆ ಭಾರತದ ಸಾಂಸ್ಕೃತಿಕ ಪರಂಪರೆಯ ಸೊಗಡನ್ನು ಪರಿಚಯಿಸುವ ಪ್ರಧಾನ ಆಶಯವನ್ನು ಹೊಂದಿರುವ ವಿಶ್ವ ಸಾಂಸ್ಕೃತಿಕ ಜಾಂಬೂರಿಯು ಆದ್ದೂರಿ ಮೆರವಣಿಗೆಯ ಮೂಲಕ ರಾಷ್ಟ್ರದ ಶ್ರೀಮಂತ ಸಂಸ್ಕೃತಿ ಪರಂಪರೆಯನ್ನು ಸಾಕ್ಷೀಕರಿಸಿತು.

ವಿದೇಶವೂ ಸೇರಿದಂತೆ 100ಕ್ಕೂ ಅಧಿಕ ಕಲಾತಂಡಗಳು, 3 ಸಾವಿರಕ್ಕೂ ಆಧಿಕ ಕಲಾವಿದರಿಂದ ಕೂಡಿದ್ದ ವರ್ಣಮಯ ಮೆರವಣಿಗೆ ಇಡೀ 7 ದಿನಗಳ ಸಾಂಸ್ಕೃತಿಕ ಜಾಂಬೂರಿಗೆ ಮುನ್ನುಡಿಯಾಯಿತು. ವಿವಿಧ ರಾಜ್ಯ, ದೇಶಗಳ ಸಹಸ್ರಾರು ವಿದ್ಯಾರ್ಥಿಗಳ ಎದುರು ಹಾದು ಹೋದ ವಿವಿಧ ಕಲಾ ತಂಡಗಳು ರೋಮಾಂಚನಗೊಳಿಸಿದವು. ವಿಶಾಲ ವನಜಾಕ್ಷಿ ಶ್ರೀಪತಿ ಭಟ್‌ ವೇದಿಕೆಯಲ್ಲಿ ಹಾಗೂ ಅದರ ಮುಂದೆ ಸಾಗಿದ ಸಾಂಸ್ಕೃತಿಕ ಮೆರವಣಿಗೆಯನ್ನು ವೀಕ್ಷಿಸಿ ವಿದ್ಯಾರ್ಥಿಗಳು ಹರ್ಷೋದ್ಗಾರ ಮಾಡುವುದು ಕಂಡುಬಂದಿತು.

ನಂದೀಧ್ವಜ, ಘಟೋತ್ಕಜ, ಊರಿನ ಚೆಂಡೆ, ನಾದಸ್ವರ, ಕೊಡೆಗಳು, ಯಕ್ಷಗಾನ ವೇಷ, ಗೂಳಿ ಹಾಗೂ ಕಟ್ಟಪ್ಪ, ಗೊರವರ ಕುಣಿತ, ಸೋಮನ ಕುಣಿತ, ಆಂಜನೇಯ, ಮರಗಾಲು, ತಮಟೆ ವಾದನ, ಸಿಂಹರಾಜ, ಹುಲಿವೇಷ ನೋಡುಗರ ಕುತೂಹಲಕ್ಕೆ ಕಾರಣವಾದವು. ಶಿಲ್ಪಾ ಗೊಂಬೆ ಬಳಗ, ಆಳ್ವಾಸ್‌ನ ಗೊಂಬೆ ಬಳಗ, ಕಾಟೂìನ್‌ ಗೊಂಬೆಗಳು ನೋಡುಗರಿಗೆ ಖುಷಿ ಕೊಟ್ಟವು.
ರಾಜ್ಯದ ಸಮೃದ್ಧತೆಯ ಪ್ರತೀಕವಾದ ಬೇಡರಕುಣಿತ, ಹಗಲು ವೇಷ, ಜಗ್ಗಳಿಕೆ, ವೀರಭದ್ರನ ಕುಣಿತ, ಪುರವಂತಿಕೆ, ವೀರಗಾಸೆ, ಶಂಖದಾಸರು, ಕರಡಿಮಜಲು, ಕಂಸಾಳೆ, ಡೊಳ್ಳು ಕುಣಿತ, ಮಹಿಳೆ, ಪುರುಷರ ನಗಾರಿ, ಕೇರಳದ ಪೂಕಾವಡಿ, ಕಥಕ್ಕಳಿ, ಕಾಳಿ ವೇಷ, ಶೃಂಗಾರಿ ಮೇಳ, ಕೇರಳದ ದೇವರ ವೇಷ, ಪಂಚವಾದ್ಯ ರಂಜಿಸಿದವು.

ಹಣೆಗಣ್ಣಿನ ಬೆಂಕಿ!
ಹರನ ಹಣೆಯಲ್ಲಿರುವ ಮೂರನೇ ಕಣ್ಣಿನಿಂದ ಬೆಂಕಿಯ ಜ್ವಾಲೆ ಹೊರ ಹೊಮ್ಮುವ ವಿಶೇಷ ವ್ಯವಸ್ಥೆ ಮಾಡಿದ್ದು ನೋಡುಗರ ಮೆಚ್ಚುಗೆಗೆ ಪಾತ್ರವಾಯಿತು. ಇದೆ ರೀತಿ ಘಟೋತ್ಕಜ, ಗೂಳಿ ಮತ್ತು ಕಟ್ಟಪ್ಪ, ವಿಚಿತ್ರ ಮಾನವ, ಕೇರಳದ ತೆಯ್ಯಂ ಮುಂತಾದ ವೇಷಗಳು ವಿಭಿನ್ನ ವೇಷಗಾರಿಕೆ, ಕುಣಿತ ಹಾಗೂ ವರ್ತನೆಯಿಂದ ಗಮನ ಸೆಳೆದವು.
ಮಂಗಳೂರಿನ ಚೆಂಡೆ ತಂಡದ ಲಯಬದ್ಧ ಹೊಡೆತ ಸ್ಥಳದಲ್ಲಿದ್ದವರನ್ನು ಕುಳಿತಲ್ಲೇ ನರ್ತಿಸುವಂತೆ ಮಾಡಿತು. ಕಲಾತಂಡಗಳು ಸಾಗಿಬರುವ ದಾರಿಯ ಇಕ್ಕೆಲಗಳಲ್ಲೂ ಸೇರಿದ್ದ ಪ್ರತಿನಿಧಿಗಳು ಮೊಬೈಲ್‌ನಿಂದ ಫೋಟೋ ಕ್ಲಿಕ್ಕಿಸುವುದು, ವೇಷಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸುವುದು ಮಾಮೂಲಿಯಾಗಿತ್ತು.

ಇಂದಿನ ಸಾಂಸ್ಕೃತಿಕ ಕಲಾಪಗಳು
ಮೂಡುಬಿದಿರೆ: ಜಾಂಬೂರಿಯ ವಿವಿಧ ವೇದಿಕೆಗಳಲ್ಲಿ ಗುರುವಾರ ಬೆಳಗ್ಗೆ 10ರಿಂದ ರಾತ್ರಿ 8.30ರ ವರೆಗೆ ನಡೆಯುವ ಸಾಂಸ್ಕೃತಿಕ ಕಲಾಪಗಳ ವಿವರ ಇಂತಿವೆ.
ಡಾ| ವಿ.ಎಸ್‌. ಆಚಾರ್ಯ ಸಭಾಂಗಣ-ಲಘು ಸಂಗೀತ (ಉಡುಪಿ ವಿನುಷ್‌ ಬಳಗ), ಧರ್ಮಸ್ಥಳ ಕುರಿತಾದ ಮಂಜು ನಾದ, ಹಿಂದುಸ್ತಾನಿ ಗಾಯನ (ನೌಷಾದ್‌, ನಿಶಾದ್‌), ದಾಸರ ಪದಗಳು

(ರಾಯಚೂರು ಶೇಷಗಿರಿದಾಸ್‌ ಬಳಗ), ಸಾರಂಗಿ (ಸರ್ಫ್‌ರಾಜ್‌ ಖಾನ್‌), ನಾಟೊÂàಲ್ಲಾಸ (ವಿ. ವೃಂದಾ ಬೆಂಗ ಳೂರು) ಮತ್ತು ನೃತ್ಯ (ವಿ. ಪ್ರಮೀಳಾ ಲೋಕೇಶ್‌ ಕಡಬ).
ನುಡಿಸಿರಿ ವೇದಿಕೆಯಲ್ಲಿ ಮ್ಯಾಂಡೊಲಿನ್‌ (ಮಾ| ವಿಶ್ವೇಶ್ವರ ಚೆನ್ನೈ), ಹಾಸ್ಯ (ಕೃಷ್ಣ ಪವನ್‌ ಕುಮಾರ್‌ ಬಳಗ ಮಂಗಳೂರು), ಸಿತಾರ್‌ ಕೊಳಲು (ಡಾ| ಮೊಹ್ಸಿನ್‌ಖಾನ್‌ ಬಳಗ), ದಾಸವಾಣಿ (ವಿಜಯಕುಮಾರ್‌ ಪಾಟೀಲ್‌), ತಾಳ-ಲಯ (ಬೀಟ್‌ ಗುರೂಸ್‌ ಬೆಂಗಳೂರು), ನಾಟ್ಯ (ಸಾಯಿ ಡಾನ್ಸ್‌ ಬೆಂಗಳೂರು), ಕೃಷಿ ಸಿರಿ ವೇದಿಕೆಯಲ್ಲಿ ಜಾನಪದ ಗಾಯನ (ಶರಣಪ್ಪ ವಡಿಗೇರಿ ಬಳಗ), ಜನಪದ ಗೀತೆ (ಗೀತಾ ಬಳಗ ಧಾರವಾಡ), ಪುಂಡುವೇಷ ವೈಭವ (ರಾಕೇಶ್‌ ರೈ), ದೊಡ್ಡಾಟದ ಹಾಡುಗಳು (ಬಸವರಾಜ ಶಿಗ್ಗಾಂವಿ), ತುಳು ಹಾಸ್ಯ (ಉಮೇಶ್‌ ಮಿಜಾರ್‌, ದೀಪಕ್‌ ರೈ), ರಸಸಂಜೆ (ಜಗದೀಶ ಪುತ್ತೂರು) ಕಾರ್ಯಕ್ರಮಗಳು ನಡೆಯಲಿವೆ.

ಸಂಜೆ 4ರಿಂದ ಪ್ಯಾಲೇಸ್‌ ಗ್ರೌಂಡ್‌ನ‌ಲ್ಲಿ ಭಾವಗಾನ (ರಮೇಶ್ಚಂದ್ರ ಬೆಂಗಳೂರು), 5.30ರಿಂದ ಕೆ.ವಿ. ಸುಬ್ಬಣ್ಣ ಬಯಲು ರಂಗಮಂದಿರದಲ್ಲಿ ಕನ್ನಡ ಡಿಂಡಿಮ (ಶಂಕರ ಶ್ಯಾನುಭೋಗ್‌ ಬಳಗ) ಕಾರ್ಯಕ್ರಮ ಸಂಯೋಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next