Advertisement

ಜಾಂಬೂರಿ: ನೀಲ ಕಡಲಿನಲಿ ಕಣ್ಣು ಹಾಯಿಸಿದುದ್ದಕ್ಕೂ ಕೌತುಕದ ಹಾಯಿ ದೋಣಿ

10:48 AM Dec 23, 2022 | Team Udayavani |

ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಅಂತಾರಾಷ್ಟ್ರೀಯ ಜಾಂಬೂರಿಯ ಎರಡನೇ ದಿನವಾದ ಗುರುವಾರ ಶಿಬಿರಾರ್ಥಿಗಳು ಸಾಹಸ ಕ್ರೀಡೆಗಳಲ್ಲಿ ತೊಡಗಿಸಿಕೊಂಡರು. ಕಣ್ಣು ಹಾಯಿಸಿದಲ್ಲೆಲ್ಲ ಕೌತುಕವೇ ತುಂಬಿದ್ದು, ಒಂದಕ್ಕಿಂತ ಒಂದು ಆಕರ್ಷಕವಾಗಿತ್ತು. ಒಂದು ಕಡೆ ಸಾಂಸ್ಕೃತಿಕ ಲೋಕವೇ ಧರೆಗಿಳಿದು ಬಂದಂತಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಜನರು ಹೊಸ ಲೋಕದ ವಿಶೇಷ ಅನುಭವಗಳನ್ನು ಆಸ್ವಾದಿಸಿ ಬೆರಗುಗಣ್ಣಿನಿಂದ ಸಂಭ್ರಮಿಸಿದರು.

Advertisement

ದೊಡ್ಡ ಸಂಖ್ಯೆಯಲ್ಲಿ ಮಕ್ಕಳ ಸಮ್ಮಿಲನವೇ ಜಾಂಬೂರಿ!
ಮೂಡುಬಿದಿರೆ: ಮಕ್ಕಳಲ್ಲಿ ನಿಸರ್ಗದ ಬಗ್ಗೆ ಒಲವು ಮೂಡಿಸಿ ಅವರು ಸದಾ ಗೆಲುವಿನಿಂದ ಇರುವಂತೆ ಮಾಡುವ ವಿಶಿಷ್ಟ ತರಬೇತಿಯೇ ಸ್ಕೌಟ್‌-ಗೈಡ್‌ ಚಳವಳಿ. ಬಾಲಕರಿಗೆ ಸ್ಕೌಟ್‌ ಇದ್ದಂತೆ ಬಾಲಕಿಯರಿಗೆ ಗೈಡ್‌ ಆರಂಭವಾಯಿತು. ವಿಶ್ವದ 216 ರಾಷ್ಟ್ರಗಳು ಮತ್ತು ಪ್ರಾಂತ್ಯ ಗಳಲ್ಲಿ 54 ದಶಲಕ್ಷಕ್ಕೂ ಹೆಚ್ಚು ಜನ ಸ್ಕೌಟ್‌/ಗೈಡ್‌ನ‌ಲ್ಲಿ ಸದಸ್ಯರಾಗಿದ್ದಾರೆ. ಕರ್ನಾಟಕದಲ್ಲಿ ಪ್ರಸಕ್ತ ಸಾಲಿನಲ್ಲಿ 6.5 ಲಕ್ಷ ಕಬ್‌-ಬುಲ್‌ ಬುಲ್ಸ್‌, ಸ್ಕೌಟ್ಸ್‌-ಗೈಡ್ಸ್‌/ರೋವರ್‌- ರೇಂಜರ್‌ಗಳು ಹಾಗೂ ದಳಗಳ ನಾಯಕ/ ನಾಯಕಿಯರಿದ್ದಾರೆ.

ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ನ ಅಡಿಶನಲ್‌ ಇಂಟರ್‌ನ್ಯಾಶನಲ್‌ ಕಮಿಷನರ್‌ ಮಧುಸೂದನ್‌ “ಉದಯ ವಾಣಿ’ ಜತೆಗೆ ಮಾತನಾಡಿ, “ಸ್ಕೌಟ್ಸ್‌ ಮತ್ತು ಗೈಡ್‌ ಮಕ್ಕಳ ಸಮ್ಮಿಲನವೇ ಜಾಂಬೂರಿ ಅನ್ನುತ್ತಾರೆ. “ಇದಕ್ಕೆ ಸುಮಾರು 100 ವರ್ಷಗಳ ಇತಿಹಾಸವಿದೆ. 1920ರಲ್ಲಿ ಮೊದಲ ಜಾಂಬೂರಿ ಲಂಡನ್‌ನಲ್ಲಿ ನಡೆದಿದೆ. ಬಳಿಕ ಪ್ರತೀ 4 ವರ್ಷಗಳಿಗೊಮ್ಮೆ ನಡೆಸುತ್ತಾ ಬರಲಾಗಿದೆ. ರಾಷ್ಟ್ರ, ರಾಜ್ಯ ಮಟ್ಟದ ಜಾಂಬೂರಿಯನ್ನೂ ಆಯೋಜಿಸಲಾಗುತ್ತಿದೆ. ಮುಂದಿನ ವರ್ಷ ಆಗಸ್ಟ್‌ನಲ್ಲಿ ಕೊರಿಯಾದಲ್ಲಿ ವಿಶ್ವ ಜಾಂಬೂರಿ ನಡೆಯಲಿದೆ ಎನ್ನುತ್ತಾರೆ.

ಸಾಮಾನ್ಯವಾಗಿ ನಡೆಯುವ ಜಾಂಬೂರಿಯಲ್ಲಿ ಮಕ್ಕಳು ಟೆಂಟ್‌ಗಳಲ್ಲಿ ವಾಸವಾಗಿರುತ್ತಾರೆ. ಊಟ-ತಿಂಡಿ ಎಲ್ಲವನ್ನು ಅವರೇ ನೋಡಿಕೊಳ್ಳುತ್ತಾರೆ. ಆದರೆ ಮೂಡು ಬಿದಿರೆಯಲ್ಲಿ ನಡೆಯುವ ಜಾಂಬೂರಿಗೆ ಸಾಂಸ್ಕೃತಿಕ ಮೆರುಗು ನೀಡಬೇಕು ಎಂಬ ಆಶಯದಿಂದ “ಏಕ್‌ ಭಾರತ್‌ ಶ್ರೇಷ್ಠ ಭಾರತ್‌’ ಕಲ್ಪನೆಯಲ್ಲಿ ಸಾಂಸ್ಕೃತಿಕ ಜಾಂಬೂರಿಯನ್ನು ಆಯೋಜಿಸಲಾಗಿದೆ.

ಜಾಂಬೂರಿ ಹಿಂದಿನಿಂದ ಬಂದಿರುವ ಪದ. “ಗೆಟ್‌ ಟುಗೆದರ್‌’ ಎಂಬ ಅರ್ಥವೂ ಇದೆ. ಎಲ್ಲರೂ ಜಾಮ್‌ ಆಗಿ ಖುಷಿಯಿಂದ ಸಂಭ್ರಮಿಸುವ ಅರ್ಥವೂ ಇದೆ. ಬೇರೆ ಬೇರೆ ಭಾಷೆಗಳಲ್ಲಿ ವಿವಿಧ ಅರ್ಥಗಳಿವೆ ಎಂದರು.

Advertisement

ಸ್ಕೌಟ್ಸ್‌ – ಗೈಡ್‌ನ‌ ಹಿರಿಯ ಮುಖಂಡರಾದ ಎನ್‌.ಜಿ. ಮೋಹನ್‌ ಅವರು ಉದಯವಾಣಿ ಜತೆಗೆ ಮಾತನಾಡಿ, “ದೊಡ್ಡ ಸಂಖ್ಯೆಯಲ್ಲಿ ಮಕ್ಕಳನ್ನು ಸೇರಿಸುವ ಕಾರ್ಯಕ್ರಮವನ್ನು ಜಾಂಬೂರಿ ಎನ್ನುತ್ತೇವೆ. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗುವ ಕಾರ್ಯಕ್ರಮಕ್ಕೆ ಈ ಹೆಸರು ಇರುತ್ತದೆ. ಆದರೆ ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ ಜಾಂಬೋರೆಟ್‌, ಜಿಲ್ಲೆ-ತಾಲೂಕು ಮಟ್ಟದಲ್ಲಿ ನಡೆಸುವಾಗ ರ್ಯಾಲಿ ಎಂದೂ ಕರೆಯಲಾಗುತ್ತದೆ. ಮೂಡುಬಿದಿರೆಯ ಸಾಂಸ್ಕೃತಿಕ ಜಾಂಬೂರಿ ದೇಶದಲ್ಲೇ ಮೊದಲ ಬಾರಿಗೆ ನಡೆಯುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next