Advertisement

Alvas ಇಂಡಿಯನ್‌ ಸೈನ್ಸ್‌ ಸೊಸೈಟಿ ಸ್ಪರ್ಧೆ: 5 ಮಾದರಿಗಳು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆ

12:12 AM Nov 27, 2023 | Team Udayavani |

ಮೂಡುಬಿದಿರೆ: “ವಿಜ್ಞಾನದ ಗಡಿಗೆಯಲ್ಲಿರುವ ಕುತೂಹಲ ಮತ್ತು ಸೃಜನಶೀಲತೆಯನ್ನು ಸಮುದಾಯದಲ್ಲಿ ಆವಶ್ಯಕತೆ ಇರುವ ಜನರಿಗೆ ಉಣಬಡಿಸಿದಾಗ, ಆವಿಷ್ಕಾರಗಳ ಫಲ ಸಮುದಾಯಕ್ಕೆ ತಲುಪಿದಾಗ ಸಾರ್ಥಕವೆನಿಸುತ್ತದೆ’ ಎಂದು ಅಮೆರಿಕ ಫ್ಲೋರಿಡಾದ ಹೂಡಿಕೆ ಬ್ಯಾಂಕರ್‌ ಎಮಿಲಿ ಆಳ್ವ ಹೇಳಿದರು.

Advertisement

ಭಾರತೀಯ ವಿಜ್ಞಾನ ಸಮಾಜ (ಇಂಡಿಯನ್‌ ಸೈನ್ಸ್‌ ಸೊಸೈಟಿ) ಸಹಯೋಗದಲ್ಲಿ ಆಳ್ವಾಸ್‌ ಕೇಂದ್ರೀಯ ಶಾಲೆ (ಸಿಬಿಎಸ್‌ಸಿ)ಯಲ್ಲಿ ಶನಿವಾರ ನಡೆದ ಭಾರತೀಯ ವಿಜ್ಞಾನ ಮತ್ತು ಎಂಜಿನಿಯರಿಂಗ್‌ ಮೇಳ (ಇನ್‌ಸೆಫ್‌)ದ ಪ್ರಾದೇಶಿಕ ಮೇಳ ಮತ್ತು ವಿಜ್ಞಾನ ವಿಸ್ತರಣ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ವಿತರಿಸಿ ಅವರು ಮಾತನಾಡಿದರು.

ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್‌ ಆಳ್ವ ಮಾತನಾಡಿ, ಸೃಜನಶೀಲ ಯೋಚನೆಗಳು ಯೋಜನೆಗಳಾಗಬೇಕು; ನೀವು ಭವಿಷ್ಯದ ಉದ್ಯೋಗದಾತರಾಗಬೇಕೇ ಹೊರತು ಉದ್ಯೋಗ ಆಕಾಂಕ್ಷಿಗಳಲ್ಲ ಎಂದರು.

ರಾಷ್ಟ್ರಮಟ್ಟಕ್ಕೆ 5 ಪ್ರವೇಶಿಕೆಗಳು
ಭಾರತೀಯ ವಿಜ್ಞಾನ ಸಮಾಜದ ನಾರಾಯಣ ಅಯ್ಯರ್‌ ಮಾತನಾಡಿ, “ಚಿನ್ನದ ಪದಕ ಪಡೆದ ನಾಲ್ಕು ಹಾಗೂ ಬೆಳ್ಳಿ ಪಡೆದ ಒಬ್ಬರ (ಅದ್ವಿಜ್‌ ಸಜೇಶ್‌) ಮಾದರಿಗಳು ರಾಜ್‌ಕೋಟ್‌ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ. ರಾಷ್ಟ್ರ ಮಟ್ಟದ ವಿಜೇತರು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ತೆರಳಲಿದ್ದಾರೆ’ ಎಂದು ಘೋಷಿಸಿದರು.

ಆಳ್ವಾಸ್‌ ಶಾಲೆಗಳ ಆಡಳಿತಾಧಿಕಾರಿ ಪ್ರೀತಮ್‌ ಕುಂದರ್‌, ಶಾಲೆಗಳ ಮುಖ್ಯ ಶಿಕ್ಷಕರಾದ ಮೊಹಮ್ಮದ್‌ ಶಫಿ ಶೇಕ್‌, ಜಾನೆಟ್‌ ಪಾಯಸ್‌, ಶೈಲಜಾ ರಾವ್‌, ಉಮಾರಿ ಫಾಜ್‌, ವಿಜಯಾ ಇದ್ದರು. ಮುಖ್ಯ ಶಿಕ್ಷಕಿ ಸರ್ವಾಣಿ ಡಿ. ಹೆಗ್ಡೆ ಹಾಗೂ ಸಹ ಶಿಕ್ಷಕಿ ಸಪ್ನಾ ನಿರೂಪಿಸಿದರು.

Advertisement

ವಿವಿಧ ಶಾಲೆಗಳಿಂದ ಬಂದಿದ್ದ ವಿಜ್ಞಾನ ಮಾದರಿಗಳ ಪೈಕಿ 35 ಅಂತಿಮ ಹಂತಕ್ಕೆ ಆಯ್ಕೆಯಾಗಿ, ಪ್ರದರ್ಶನ ಹಾಗೂ ಸ್ಪರ್ಧೆಯಲ್ಲಿ ಪಾಲ್ಗೊಂಡವು. ವಿದ್ಯಾರ್ಥಿಗಳ ಜತೆ ಮಾರ್ಗದರ್ಶಕ ಶಿಕ್ಷಕರು ಉಪಸ್ಥಿತರಿದ್ದರು.

ನಾಲ್ವರಿಗೆ ಚಿನ್ನ: ಪುತ್ತೂರು ವಿವೇಕಾನಂದ ಆ.ಮಾ. ಶಾಲೆಯ ಧನ್ಯಶ್ರೀ ಮತ್ತು ಆಪ್ತಚಂದ್ರಮತಿ ಮುಳಿಯ, ಆಳ್ವಾಸ್‌ ಕೇಂದ್ರೀಯ ಶಾಲೆಯ ಅಮೋಘ ಎ. ಹೆಬ್ಟಾರ್‌ ಮತ್ತು ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದ ಸುಹಾಸ್‌ ಎಂ. ಬಣಕಾರ್‌ ಹಾಗೂ ಹೃಷಿಕೇಶ್‌ ನಾಯಕ್‌ ಅವರ ವಿಜ್ಞಾನ ಮಾದರಿಗಳು ಚಿನ್ನದ ಪದಕ ಪಡೆದವು.

ಐವರಿಗೆ ಬೆಳ್ಳಿ ಪದಕ:
ಪುತ್ತೂರಿನ ಸುದಾನ ವಸತಿ ಶಾಲೆಯ ಅದ್ವಿಜ್‌ ಸಜೇಶ್‌, ಮೊಡಂಕಾಪು ಕಾರ್ಮೆಲ್‌ ಸಂಯುಕ್ತ ಪ.ಪೂ. ಕಾಲೇಜಿನ ಅರೋನ್‌ ಡಿ’ಸೋಜಾ, ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದ ಆದ್ಯಾ ಪಿ. ಶೆಟ್ಟಿ, ಪುತ್ತೂರಿನ ವಿವೇಕಾನಂದ ಆ.ಮಾ.ಶಾಲೆಯ ಅಭಿನವ್‌ ಆಚಾರ್‌ ಕೆ. ಮತ್ತು ಶ್ರೀಜಿತ್‌ ಸಿ.ಎಚ್‌. ಹಾಗೂ ಪುತ್ತೂರಿನ ಸುದಾನ ವಸತಿ ಶಾಲೆಯ ಸೃಷ್ಟಿ ಎನ್‌.ವಿ.ಅವರ ಮಾದರಿಗಳು ಬೆಳ್ಳಿಯ ಪದಕ ಪಡೆದಿವೆ.

ಆರು ಮಂದಿಗೆ ಕಂಚಿನ ಪದಕ: ಪುತ್ತೂರಿನ ವಿವೇಕಾನಂದ ಆ.ಮಾ. ಶಾಲೆಯ ಆರ್ಯನ್‌ ಸಿ.ಆರ್‌., ದಿಶಾಂತ್‌ ಕೆ., ಮತ್ತು ಗೌತಮಕೃಷ್ಣ, ಸುದಾನ ವಸತಿ ಶಾಲೆಯ ಆದಿತ್ಯ ಕೆ., ಬಂಟ್ವಾಳ ಬಿಆರ್‌ಎಂಪಿಸಿ ಪಬ್ಲಿಕ್‌ ಸ್ಕೂಲ್‌ ಮತ್ತು ಕಾರ್ಮೆಲ್‌ ಹೈಸ್ಕೂಲ್‌ನ ರಿಶೋನ್‌ ಸಂಸಿಯಾ ಪಿಂಟೊ ಮತ್ತು ನಿಹಾರಿಕಾ, ಮಂಗಳೂರಿನ ಶಕ್ತಿ ವಸತಿ ಶಾಲೆಯು ಶಾಸ್ತ ನಾಯ್ಕ ವಿ. ಹಾಗೂ ಪುತ್ತೂರಿನ ವಿವೇಕಾನಂದ ಆ.ಮಾ. ಶಾಲೆಯ ಬಿ. ಧ್ಯಾನ್‌ ಶೆಟ್ಟಿ ಅವರ ಮಾದರಿಗಳು ಕಂಚಿನ ಪದಕ ಪಡೆದವು.

Advertisement

Udayavani is now on Telegram. Click here to join our channel and stay updated with the latest news.

Next