ಮೂಡುಬಿದಿರೆ: ಜೀವನ ದಲ್ಲಿ ಮಾನವೀಯ ಮೌಲ್ಯಗಳು, ಸಾಮಾ ಜಿಕ ಪ್ರಜ್ಞೆ ಹಾಗೂ ಜೀವನ ಕೌಶಲಗ ಳನ್ನುಬೆಳೆಸಿಕೊಳ್ಳುವುದು ಅಗತ್ಯ ಎಂದು ಬೆಂಗಳೂರು ಎಚ್.ಎ.ಎಲ್.ನ ಜನರಲ್ ಮ್ಯಾನೇಜರ್ ಪ್ರಕಾಶ್ ಕೆ. ಹೇಳಿದರು.
ಮಿಜಾರಿನ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನ ಹನ್ನೊಂದನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಕೇವಲ ಪುಸ್ತಕ ಮತ್ತು ಇಂಟರ್‌ನೆಟ್‌ಗಳಿಂದ ಮಾತ್ರವಲ್ಲದೇ ಸಮಾಜ ಹಾಗೂ ಅನುಭವಸ್ಥರಿಂದಲೂ ಜ್ಞಾನ ಸಂಪಾದನೆ ಮಾಡುವುದು ಅಗತ್ಯ. ವಿದ್ಯಾರ್ಥಿ ಜೀವನದಲ್ಲಿ ಪಡೆ ದು ಕೊಂಡ ಜ್ಞಾನವನ್ನು ದೈನಂದಿನ ಜೀವನ ದಲ್ಲಿ ಅಳ ವಡಿ ಸಿಕೊಂಡಾಗಲೇ ಧ್ಯೇಯದ ಕಡೆಗೆ ಸಾಗಬಹುದು. ಕಠಿನ ಪರಿಶ್ರಮ ದಿಂದ ಗುರಿಯನ್ನು ಸುಲಭವಾಗಿ ಸಾಧಿಸ ಬಹುದು.
ಜೀವನದಲ್ಲಿ ಸಮಾಜ, ಕೆಲಸ ಮತ್ತು ಕುಟುಂಬವನ್ನು ಸಮಾನವಾಗಿ ನಿಭಾಯಿ ಸುವುದು ಅತ್ಯಗತ್ಯ ಎಂದರು.
ಸಮ್ಮಾನ
ಶಿಕ್ಷಣ, ಕ್ರೀಡೆ ಹಾಗೂ ಸಾಂಸ್ಕೃತಿಕ ವಿಭಾಗಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ, ಪ್ರೋತ್ಸಾಹ ಧನ ಹಾಗೂ ಶಾಲು ಹೊದಿಸಿ ಸಮ್ಮಾನಿಸಲಾಯಿತು.ಆಳ್ವಾಸ್ ಎಜುಕೇಶನ್ ಫೌಂಡೇಶನ್‌ನ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಡಾಣ ಪೀಟರ್ ಫೆರ್ನಾಂಡಿಸ್ ಹಾಗೂ ವಿವಿಧ ವಿಭಾಗಗಳ ಡೀನ್‌ಗಳು ಉಪಸ್ಥಿತರಿದ್ದರು.