Advertisement

ಆಳ್ವಾಸ್‌ ಚಿತ್ರಸಿರಿ, ವ್ಯಂಗ್ಯಚಿತ್ರಸಿರಿ ಪ್ರಶಸ್ತಿ ಪ್ರದಾನ

11:56 AM Nov 27, 2017 | Team Udayavani |

ಮೂಡಬಿದಿರೆ: ಆಳ್ವಾಸ್‌ ನುಡಿಸಿರಿ ಸಮ್ಮೇಳನದಂಗವಾಗಿ ಏರ್ಪಡಿಸಲಾದ ರಾಜ್ಯಮಟ್ಟದ ಆಳ್ವಾಸ್‌ ಚಿತ್ರಸಿರಿ,
ವ್ಯಂಗ್ಯಚಿತ್ರ ಸಿರಿ ಶಿಬಿರ ಹಾಗೂ ಛಾಯಾಚಿತ್ರಸಿರಿ ಸ್ಪರ್ಧೆಯ ವಿಜೇತರಿಗೆ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ
ಪ್ರದಾನ ಮಾಡಲಾಯಿತು.

Advertisement

ಹಿರಿಯ ಛಾಯಾ ಚಿತ್ರಗ್ರಾಹಕ ಡಾ.ಓ.ಪಿ. ಶರ್ಮ ಅವರಿಗೆ “ಆಳ್ವಾಸ್‌ ಛಾಯಾಚಿತ್ರಸಿರಿ” ಪ್ರಶಸ್ತಿ, ಉಡುಪಿಯ
ರಮೇಶ್‌ ರಾವ್‌ ಅವರಿಗೆ “ಆಳ್ವಾಸ್‌ ಚಿತ್ರಸಿರಿ’ ಪ್ರಶಸ್ತಿ ಹಾಗೂ ಮಂಗಳೂರು ಮೂಲದ ವ್ಯಂಗ್ಯ ಚಿತ್ರಕಲಾವಿದ
ಪ್ರಕಾಶ್‌ ಶೆಟ್ಟಿ ಬೆಂಗಳೂರು ಅವರಿಗೆ “ವ್ಯಂಗ್ಯಚಿತ್ರಸಿರಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಭಾನುವಾರ
ವಿದ್ಯಾಗಿರಿಯ ಡಾ.ವಿ.ಎಸ್‌. ಆಚಾರ್ಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅವರು ಪ್ರಶಸ್ತಿ ಪ್ರದಾನ ನೆರವೇರಿಸಿದರು. ಪ್ರಶಸ್ತಿ ತಲಾ 25,000 ರೂ.ನಗದು, ಸನ್ಮಾನ ಫಲಕ ಒಳಗೊಂಡಿದೆ. ಮೂಡಬಿದಿರೆ ಜೈನಮಠದ ಶ್ರೀ ಚಾರು ಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚನವಿತ್ತರು. ಈ ವೇಳೆ ಮಾತನಾಡಿದ ಮೋಹನ ಆಳ್ವ, ಮುಂದಿನ ವರ್ಷ ನುಡಿಸಿರಿಯ ಒಂದು ತಿಂಗಳ ಮೊದಲು ಶಿಲಾಶಿಲ್ಪ, ಕಾಷ್ಠ ಶಿಲ್ಪ ಶಿಬಿರ ಏರ್ಪಡಿಸಲಾಗುವುದು.

ಆಳ್ವಾಸ್‌ ಸಂಸ್ಥೆಯ ವತಿಯಿಂದ ಇದೇ ಮೊದಲ ಬಾರಿಗೆ ರಾಜ್ಯಮಟ್ಟದಲ್ಲಿ ಆಯೋಜಿಸಲಾಗಿರುವ ವ್ಯಂಗ್ಯ ಚಿತ್ರಸಿರಿಯನ್ನು ದಕ್ಷಿಣ ವಲಯ, ರಾಷ್ಟ್ರಮಟ್ಟದಲ್ಲಿ ಆಯೋಜಿಸುವ ಚಿಂತನೆ ನಡೆಯುತ್ತಿದೆ ಎಂದು ಹೇಳಿದರು.

ಛಾಯಾಚಿತ್ರಸಿರಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ, ಶಿಬಿರದಲ್ಲಿ ಪಾಲ್ಗೊಂಡ ವ್ಯಂಗ್ಯ ಚಿತ್ರಕಾರರು ಹಾಗೂ ಚಿತ್ರ ಕಲಾವಿದರಿಗೆ ಪ್ರಮಾಣ ಪತ್ರ  ತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next