ಕೊಟ್ಟಿಗೆಹಾರ: ನಿಡುವಾಳೆಯ ಶ್ರೀರಾಮೇಶ್ವರ ದೇವಸ್ಥಾನದಲ್ಲಿ ನಾಳೆ ನ.23 ರಂದು ಕಾರ್ತೀಕ ದೀಪೋತ್ಸವ ನಡೆಯಲಿದೆ.
Advertisement
ಸಂಜೆ 7.30 ರಿಂದ ದೀಪೋತ್ಸವ ಆರಂಭಗೊಳ್ಳಲಿದ್ದು, ದೀಪೋತ್ಸವದ ಅಂಗವಾಗಿ ವಿಶೇಷ ಪೂಜಾ ವಿಧಿವಿಧಾನಗಳು ನೆರವೇರಲಿದೆ. ದೇವಸ್ಥಾನದ ಆವರಣವನ್ನು ತಳಿರು ತೋರಣ ಹಾಗೂ ವಿದ್ಯುತ್ ದೀಪಾಲಂಕಾರಗಳಿಂದ ಆಕರ್ಷಕವಾಗಿ ಸಿಂಗರಿಸಲಾಗಿದೆ. ಶ್ರೀ ಮಹಾಗಣಪತಿ ಕಾಲಭೈರವ, ಸರ್ಪಾದ್ಯಷ್ಟಕುಲನಾಗ ಉಮಾ ಸಹಿತ ಶ್ರೀರಾಮೇಶ್ವರ ದೇವರಿಗೆ ಮಹಾಮಂಗಳಾರತಿ ಮತ್ತು ವಿವಿಧ ಪೂಜಾ ವಿಧಿವಿಧಾನಗಳು ನೆರವೇರಲಿದ್ದು ಹಾಗೂ ಭಕ್ತಾಧಿಗಳಿಗೆ ಪ್ರಸಾಧ ವಿನಿಯೋಗ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪಕ ನಾಗರಾಜ್ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.