Advertisement

ಹನುಮಗಿರಿ: ಮನಸೂರೆಗೊಂಡ ಆಳ್ವಾಸ್‌ ಸಾಂಸ್ಕೃತಿಕ ವೈಭವ ಕಾರ್ಯಕ್ರಮ

09:51 AM Jan 08, 2020 | Hari Prasad |

ಈಶ್ವರಮಂಗಲ: ಶ್ರೀ ಕ್ಷೇತ್ರ ಹನುಮಗಿರಿ ಮತ್ತು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ ಮೂಡಬಿದರೆ ಇವರ ಜಂಟಿ ಆಶ್ರಯದಲ್ಲಿ ಹನುಮಗಿರಿ ಶಾಲಾ ಮೈದಾನದಲ್ಲಿ ಆಳ್ವಾಸ್‌ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಸೋಮವಾರ ನಡೆಯಿತು. ಕಾರ್ಯಕ್ರಮವನ್ನು ಹನುಮಗಿರಿ ಕ್ಷೇತ್ರದ ಮಹಾಪೋಷಕ ಜಿ.ಕೆ ಮಹಾಬಲೇಶ್ವರ ಭಟ್‌ ಕೋನೆತೋಟ ಉದ್ಘಾಟಿಸಿ ಶುಭ ಹಾರೈಸಿದರು. ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ, ಭಜನ ಸಂಭ್ರಮದ ಪ್ರಧಾನ ಕಾರ್ಯದರ್ಶಿ ಸಹಜ್‌ ರೈ ಬಳ್ಳಜ್ಜ, ನಿರ್ವಹಣಾ ಸಮಿತಿಯ ಅಧ್ಯಕ್ಷ ರಂಗನಾಥ ಶೆಣೈ ಮುಳ್ಳೇರಿಯಾ, ಕಾರ್ಯಾಧ್ಯಕ್ಷ ಎ ಮಂಜುನಾಥ ರೈ ಸಾಂತ್ಯ,ಧರ್ಮದರ್ಶಿ ಶಿವರಾಮ ಶರ್ಮ ಉಪಸ್ಥಿತರಿದ್ದರು.


ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಸುಮಾರು 325 ವಿದ್ಯಾರ್ಥಿಗಳಿಂದ 3ಗಂಟೆ 30 ನಿಮಿಷ ನಡೆದ ಕಾರ್ಯಕ್ರಮದಲ್ಲಿ ದೇಶ ವಿದೇಶಗಳ ವಿವಿಧ ಪ್ರಕಾರದ ಶಾಸ್ತ್ರಿಯ, ಜಾನಪದ ನೃತ್ಯ ರೂಪಕಗಳಾದ ಕೇರಳ ಮೋಹಿನಿಯಾಟ್ಟಮ್‌ – ಅಷ್ಟಲಕ್ಷ್ಮಿ,ಬಡಗುತಿಟ್ಟು ಯಕ್ಷಗಾನ ಶ್ರೀರಾಮ ಪಟ್ಟಾಭಿಷೇಕ,ಆಂಧ್ರದ ಜನಪದ ಬಂಜಾರ ನೃತ್ಯ, ಮಣಿಪುರಿ ಸ್ಟಿಕ್‌ ಡ್ಯಾನ್ಸ್‌, ಭೋ ಶಂಭೋ ಶಾಸ್ತ್ರಿಯ ನೃತ್ಯ, ಗುಜರಾತಿನ ಗಾರ್ಭ ಮತ್ತು ದಾಂಡಿಯಾ, ಮಲ್ಲಕಂಬ ಮತ್ತು ರೋಪ್‌ ಕಸರತ್ತು, ಮಣಿಪುರಿ ದೋಲ್‌ ಚಲಮ್‌, ಪಂಜಾಬಿನ ಬಾಂಗ್ಡ ನೃತ್ಯ,ಕಥಕ್‌ ನೃತ್ಯ – ನವರಂಗ್‌,ಪಶ್ಚಿಮ ಬಂಗಾಳದ ಪುರುಲಿಯ ಸಿಂಹ ನೃತ್ಯ, ತೆಂಕುತಿಟ್ಟು ಯಕ್ಷಗಾನ ಅಗ್ರಪೂಜೆ ಪ್ರದರ್ಶನಗೊಂಡಿತು.

Advertisement

ಭಜನಾ ಸಂಭ್ರಮ ಸಂದರ್ಭದಲ್ಲಿ ನಡೆಯಬೇಕಿದ್ದ ಈ ಸಾಂಸ್ಕೃತಿಕ ಕಾರ್ಯಕ್ರಮ ಪೇಜಾವರ ಶ್ರೀಗಳ ನಿಧನದಿಂದಾಗಿ ಮುಂದೂಡಲ್ಪಟ್ಟಿತ್ತು.

Advertisement

Udayavani is now on Telegram. Click here to join our channel and stay updated with the latest news.

Next