Advertisement
ವಾರದ ಸಂತೆ ಪ್ರತೀ ಶನಿವಾರ ಇಲ್ಲಿನ ಮುತ್ತಪ್ಪ ನಗರದಲ್ಲಿ ಹಲವು ವರ್ಷಗಳಿಂದ ನಡೆಯುತ್ತಿದೆ. ಊರ ಮತ್ತು ಪರವೂರಿನಹಲವು ಮಂದಿ ಇಲ್ಲಿ ಬಂದು ತರಕಾರಿ ಹಾಗೂ ದಿನಸಿ ವಸ್ತುಗಳನ್ನು ಖರೀದಿಸುತ್ತಾರೆ. ಈ ಹಿನ್ನೆಲೆಯಲ್ಲಿ ಗುತ್ತಿಗಾರು ಪಂಚಾಯತ್ ವಿವಿಧ ಅನುದಾನಗಳ ಮೂಲಕ ಸಂತೆ ಮಾರುಕಟ್ಟೆಗೆಂದೇ ಉತ್ತಮವಾದ ಕಟ್ಟಡ ನಿರ್ಮಿಸಿಕೊಟ್ಟಿದೆ. ಆದರೆ ಈ ಪ್ರಾಂಗಣದಲ್ಲಿ ಕೆಲವೇ ವ್ಯಾಪಾರಿಗಳು ವಹಿವಾಟಿನಲ್ಲಿ ತೊಡಗಿದ್ದು, ಉಳಿದವರು ಹೆದ್ದಾರಿಯ ಬದಿಯಲ್ಲೇ ವ್ಯಾಪಾರ ನಡೆಸುತ್ತಿದ್ದಾರೆ.
Related Articles
Advertisement
ಸಂತೆ ನಡೆಯುವ ಪ್ರದೇಶದಲ್ಲೇ ಗುತ್ತಿಗಾರು ಸ.ಪ.ಪೂ ಕಾಲೇಜಿಗೆ ತೆರಳುವ ರಸ್ತೆ ಇದೆ. ಶನಿವಾರ ಮಧ್ಯಾಹ್ನ ಮಕ್ಕಳು ಮನೆಗೆ ತೆರಳುವ ವೇಳೆ ರಸ್ತೆಯಲ್ಲಿ ಓಡಿ ಬರುವುದು ಮತ್ತು ರಸ್ತೆ ತುಂಬೆಲ್ಲಾ ವಾಹನಗಳ ಓಡಾಟ ಹಾಗೂ ವಾಹನ ನಿಲುಗಡೆಯೂ ಅಲ್ಲಿಯೇ ಮಾಡುವುದರಿಂದ ಅಪಾಯ ಸಂಭವಿಸುವ ಸಾಧ್ಯತೆಯೂ ಹೆಚ್ಚಿದೆ ಎಂಬುದು ಸ್ಥಳೀಯರ ಅಭಿಪ್ರಾಯ.
ಸಂತೆ ದಿನದಂದು ವ್ಯಾಪಾರಿಗಳಿಂದ ಗುತ್ತಿಗಾರು ಪಂಚಾಯತ್ ಸುಂಕ ಸಂಗ್ರಹಿಸುತ್ತಿದೆ. ಆದರೆ ತಾನೇ ನಿರ್ಮಿಸಿದ ಕಟ್ಟಡದಲ್ಲಿವ್ಯಾಪಾರ ವಹಿವಾಟು ನಡೆಸುವಂತೆ ಸೂಚಿಸುವ ಅಥವಾ ಮೇಲ್ವಿಚಾರಣೆ ನಡೆಸುವ ಗೋಜಿಗೆ ಪಂಚಾಯತ್ ಹೋಗುವುದಿಲ್ಲ.
ಹಾಗಾಗಿಯೇ ವ್ಯಾಪಾರಿಗಳು ರಸ್ತೆ ಬದಿ ಟೆಂಟ್ ಹಾಕಿ ವ್ಯಾಪಾರ ಮಾಡುತ್ತಿದ್ದಾರೆ ಎಂಬುದು ಸದ್ಯದ ದೂರು. ಅಗತ್ಯ ಕ್ರಮ ಕೈ
ಗೊಳ್ಳಬೇಕೆಂಬುದು ಸಾರ್ವಜನಿಕರ ಆಗ್ರಹ ಪಾಳು ಬಿದ್ದ ಮೀನು ಮಾರಾಟ ಪ್ರಾಂಗಣ ಸಂತೆ ಮಾರುಕಟ್ಟೆ ಬಳಿಯಲ್ಲೇ ಹಸಿಮೀನು ಮಾರಾಟಕ್ಕೆ ಪ್ರಾಂಗಣ ನಿರ್ಮಿಸಲಾಗಿದ್ದು, ಈ ಕಟ್ಟಡಕ್ಕೆ ಭೇಟಿ ನೀಡುವವರೇ ಇಲ್ಲವಾಗಿದೆ. ಮೀನು ಮಾರಾಟಗಾರರೂ ರಸ್ತೆ ಬದಿಯಲ್ಲೇ ವ್ಯಾಪಾರ ನಡೆಸುವ ಕಾರಣ ಈ ಕಟ್ಟಡವೂ ನಿರ್ವಹಣೆ ಇಲ್ಲದೆ ಪಾಳು ಬಿದ್ದಿದೆ. ಅನುದಾನ ಮಂಜೂರಾಗಿದೆ ಸಂತೆ ಮಾರುಕಟ್ಟೆ ಸಮಸ್ಯೆ ಅರಿವಿಗೆ ಬಂದಿದೆ. ಮೀನು ಮಾರುಕಟ್ಟೆಗೆ ಮೂಲ ಸೌಕರ್ಯ ಕಲ್ಪಿಸಲು ಅನುದಾನ ಮಂಜೂರಾಗಿದೆ. ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ.
-ಸುಮಿತ್ರಾ ಮೂಕಮಲೆ,
ಅಧ್ಯಕ್ಷರು, ಗ್ರಾ.ಪಂ. ಗುತ್ತಿಗಾರು ಸೂಕ್ತ ನಿಯಮ ರೂಪಿಸಿ ಸಂತೆ ಮಾರುಕಟ್ಟೆ ಆವಶ್ಯಕವಾಗಿದ್ದು, ಜತೆಗೆ ಮಾರಾಟಕ್ಕೆ ಸೂಕ್ತ ನಿಯಮಗಳನ್ನು ರೂಪಿಸಬೇಕಿದೆ. ಅಹಿತಕರ ಘಟನೆ ಸಂಭವಿಸುವ ಮೊದಲು ಸ್ಥಳೀಯಾಡಳಿತ ಎಚ್ಚೆತ್ತುಕೊಳ್ಳಬೇಕು.
-ದಿನೇಶ್,ಗ್ರಾಮಸ್ಥರು ಕೃಷ್ಣಪ್ರಸಾದ್ ಕೋಲ್ಚಾರ್