Advertisement

ಬೇಕಾಬಿಟ್ಟಿ ಟೋಲ್‌ ಸಂಗ್ರಹಿಸಿದರೂ ಬೀದಿ ದೀಪ ಉರಿಸುವುದಿಲ್ಲ

01:19 AM Dec 12, 2021 | Team Udayavani |

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನವಯುಗ ಕಂಪೆನಿ ಸೌಲಭ್ಯ ಒದಗಿಸದೆ ಹಲವು ವರ್ಷಗಳಿಂದ ಟೋಲ್‌ ಸಂಗ್ರಹಿಸು ತ್ತಿದ್ದು, ಬೀದಿ ದೀಪ ಉರಿಸಲು ಮಾತ್ರ ಪಿಳ್ಳೆ ನೆಪ ಹೇಳಿ ದಿನ ದೂಡುತ್ತಿದೆ. ಕಂಪೆನಿಯು ಮೊಂಡುತನ ತೋರಿ ಉರಿಯಲು ಸಿದ್ಧವಾಗಿರುವ ಹೆದ್ದಾರಿ ಫ್ಲೈಓವರ್‌ನ ಬೀದಿ ದೀಪಗಳನ್ನು ಎರಡು ವರ್ಷಗಳಿಂದ ಬಂದ್‌ ಮಾಡಿ ಕುಳಿತಿದೆ.

Advertisement

ಪಂಪ್‌ವೆಲ್‌ ಮತ್ತು ತೊಕ್ಕೊಟ್ಟು ಫ್ಲೈಓವರ್‌, ಪಡುಬಿದ್ರಿ ಪೇಟೆ ಮತ್ತು ಉಡುಪಿಯ ಕರಾವಳಿ ಸರ್ಕಲ್‌ ಸಹಿತ
ಹಲವೆಡೆ ಬೀದಿ ದೀಪ ಅಳವಡಿಸಿ ಪರೀಕ್ಷಾರ್ಥ ಉರಿಸಿ ನೋಡಿ ಎರಡು ವರ್ಷಗಳಾಗಿವೆ. ಆದರೆ ಅನಂತರ ಅದು
ತುಕ್ಕು ಹಿಡಿಯುತ್ತಿದೆ. ಹೆದ್ದಾರಿ ಗುತ್ತಿಗೆ ವಹಿಸಿರುವ ನವಯುಗ ಕಂಪೆನಿಗೆ ಕೇಳಿದರೆ ಅದಕ್ಕೆ ಪ್ರತ್ಯೇಕ ಟೋಲ್‌ ನಿಗದಿ
ಯಾಗಬೇಕೆಂಬ ಉತ್ತರ ಬರುತ್ತಿದೆ. ಈಗಾಗಲೇ ಟೋಲ್‌ ಸಂಗ್ರಹಿಸುವ ಪ್ರದೇಶದಲ್ಲಿ ಹಲವಾರು ರೀತಿಯ ಮೂಲ ಸೌಕರ್ಯಗಳು ಇಲ್ಲವಲ್ಲ ಎಂಬ ಪ್ರಶ್ನೆಗೆ ಉತ್ತರವೇ ಇಲ್ಲವಾಗಿದೆ.

ಈಗ ಸಂಗ್ರಹಿಸುತ್ತಿರುವ ಶುಲ್ಕದಲ್ಲಿ ಈ ಬೀದಿ ದೀಪಗಳ ನಿರ್ವಹಣೆ ಸೇರಿಲ್ಲ; ಅವು ಉರಿಯ ಬೇಕಾದರೆ ಟೋಲ್‌ ಶುಲ್ಕವನ್ನು ಹೆಚ್ಚಳ ಮಾಡಬೇಕು ಎಂದು ಹೆದ್ದಾರಿ ಅಭಿವೃದ್ಧಿ ಮತ್ತು 25 ವರ್ಷಗಳ ನಿರ್ವಹಣೆಯ ಗುತ್ತಿಗೆ ವಹಿಸಿಕೊಂಡಿರುವ ನವಯುಗ ಎಂಜಿನಿಯರಿಂಗ್‌ ಕಂಪೆನಿಯು ರಾ.ಹೆ. ಪ್ರಾಧಿಕಾರ (ಎನ್‌ಎಚ್‌ಎಐ)ಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಅಲ್ಲಿಂದ ಟೋಲ್‌ ಏರಿಕೆಗೆ ಅನುಮೋದನೆ ಸಿಕ್ಕಿದರೆ ಮಾತ್ರ ಈ ಬೀದಿ ದೀಪಗಳು ಉರಿಯುತ್ತದೆ ಎಂಬುದು ಅಧಿಕಾರಿಗಳ ಉತ್ತರ.

ಮೂಲ ಸೌಕರ್ಯಕ್ಕೆ
ಅನ್ವಯಿಸುವುದಿಲ್ಲ!
ತಲಪಾಡಿ- ಕುಂದಾಪುರ ನಡುವಣ 90 ಕಿ.ಮೀ. ಹೆದ್ದಾರಿಯ 80 ಕಿ.ಮೀ.ಯ ಪ್ರಮುಖ ರಸ್ತೆಯ ಕಾಮಗಾರಿ ಬಹುತೇಕ ಪೂರ್ಣಗೊಂಡಾಗ ಸಂಚಾರಕ್ಕೆ ಮುಕ್ತಗೊಳಿಸಿ ಟೋಲ್‌ ವಿಧಿಸ ಲಾಗಿತ್ತು. ನಾಲ್ಕು ಕಡೆಗಳ ಒಟ್ಟು 10 ಕಿ.ಮೀ.ಗೆ ಟೋಲ್‌ವಿಧಿಸಿಲ್ಲ. ಈಗ ಅದು ಪೂರ್ಣಗೊಂಡಿದೆ ಎಂಬುದು ಕಂಪೆನಿಯ ವಾದ. ಆದರೆ ಒಟ್ಟು 90 ಕಿ.ಮೀ. ರಸ್ತೆಯಲ್ಲಿ ಇನ್ನೂ ಹಲವೆಡೆ ಸರ್ವೀಸ್‌ ರಸ್ತೆ ಕಾಮಗಾರಿ ಆಗಿಲ್ಲ. ಬಸ್‌ ನಿಲ್ದಾಣಗಳು ಆಗಿಲ್ಲ. ಟೋಲ್‌ ಗ‌ಳಲ್ಲಿ ಆ್ಯಂಬುಲೆನ್ಸ್‌, ಕ್ರೇನ್‌ ಸವಲತ್ತು ಸರಿಯಾಗಿಲ್ಲ. ಸಾರ್ವಜನಿಕರಿಗೆ ಕುಡಿಯುವ ನೀರಿಲ್ಲ, ಹೆದ್ದಾರಿಯಲ್ಲಿ ಅವಘಡವಾದರೆ ತಿಳಿಸುವುದಕ್ಕೆಂದು ಇರಿಸಲಾಗಿರುವ ಫೋನ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಹೆದ್ದಾರಿ ಗುಂಡಿ ಗಳನ್ನು ಮುಚ್ಚುವವರಿಲ್ಲ. ಇವುಗಳೆಲ್ಲ ಇಲ್ಲದಿದ್ದರೂ ಟೋಲ್‌ ವಿಧಿಸಲಾಗುತ್ತಿದೆ. ಆದರೆ ಬೀದಿ ದೀಪ ಉರಿಸುವುದಕ್ಕೆ ಮಾತ್ರ ಟೋಲ್‌ ಹೆಚ್ಚಿಸಬೇಕೆಂಬ ಮೊಂಡುವಾದ.

ಇದನ್ನೂ ಓದಿ:ಜೂಜು ಅಡ್ಡೆಯ ಮೇಲೆ ಕೋಳಾಲ ಪೋಲೀಸರ ದಾಳಿ : ಮೂವರು ವಶಕ್ಕೆ

Advertisement

ಜೀವ ಹೋದರೂ
ದೀಪ ಉರಿಸುವುದಿಲ್ಲ
ಪಂಪ್‌ವೆಲ್‌ ಮತ್ತು ತೊಕ್ಕೊಟ್ಟು ಫ್ಲೈಓವರ್‌ಗಳಲ್ಲಿ ಬೀದಿ ದೀಪ ಅಳ ವಡಿಸಿ 2 ವರ್ಷ ಸಮೀಪಿಸಿದರೂ ಅದನ್ನು ಉರಿಸುತ್ತಿಲ್ಲ. ಪಂಪ್‌ವೆಲ್‌ ಫ್ಲೈಓವರ್‌ನ ಮಧ್ಯ ಭಾಗ ತಿರುವಿನಿಂದ ಕೂಡಿದ್ದು ಹಲವು ಅಪಘಾತಗಳು ಸಂಭವಿಸಿವೆ. ತೊಕ್ಕೊಟ್ಟು ಫ್ಲೈ ಓವರ್‌ನಲ್ಲಿಯೂ ಅವಘಡಗಳಾಗಿವೆ. ರಾತ್ರಿ ವೇಳೆಯಲ್ಲಿ “ರಾಷ್ಟ್ರೀಯ ಹೆದ್ದಾರಿ ಯಲ್ಲವೆ’ ಎಂಬ ಧೈರ್ಯದಿಂದ ಚಾಲಕರು ವಾಹನಗಳನ್ನು ವೇಗವಾಗಿ ಚಲಾಯಿಸಿ ಅಪಘಾತಕ್ಕೊಳ
ಗಾಗುತ್ತಾರೆ. ಜೀವ ಹೋದರೂ ಕಂಪೆನಿಯವರು.

ತಲಪಾಡಿಯಿಂದ ಕುಂದಾಪುರ ತನಕದ ಹೆದ್ದಾರಿಯನ್ನು ಸಂಚಾರಕ್ಕೆ ಬಿಟ್ಟು ಕೊಡುವಾಗ ಕಾಮಗಾರಿ ಪರಿಪೂರ್ಣವಾಗಿರದ ಕಾರಣ 80 ಕಿ.ಮೀ. ಮಾತ್ರ ಪರಿಗಣಿಸಿ ಟೋಲ್‌ ನಿಗದಿ ಪಡಿಸಲಾಗಿತ್ತು. 90 ಕಿ.ಮೀ. ರಸ್ತೆಯನ್ನು ಪರಿಗಣಿಸಿ ಟೋಲ್‌ ಶುಲ್ಕ ಪರಿಷ್ಕರಿಸುವಂತೆ ಮನವಿ ಮಾಡಿದ್ದಾರೆ. ಮೂಲ ಸೌಕರ್ಯ ಒದಗಿಸುವುದು ನವಯುಗ ಕಂಪೆನಿಯ ಜವಾಬ್ದಾರಿ.
– ಎ.ಕೆ. ಜಾನ್‌ಬಾಸ್‌,
ಯೋಜನಾ ನಿರ್ದೇಶಕ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ನಿಯಮ
ಮೀರಿ ಸಂಗ್ರಹ
ಟೋಲ್‌ಗೇಟ್‌ಗಳ ನಡುವಿನ ಅಂತರ 60 ಕಿ.ಮೀ. ಇರಬೇಕೆಂಬ ನಿಯಮ ಇದ್ದರೂ 5-6 ಕಿ.ಮೀ. ಅಂತರದ ಸುರತ್ಕಲ್‌ ಮತ್ತು ಹೆಜಮಾಡಿಯಲ್ಲಿ ಗೇಟ್‌ಗಳಿವೆ. ಈ ಬಗ್ಗೆ ಜನಪ್ರತಿ ನಿಧಿಗಳಾಗಲಿ, ಅಧಿಕಾರಿಗಳಾಗಲಿ ಮಾತನಾ ಡುತ್ತಿಲ್ಲ ಏಕೆ ಎಂದು ಸಾಮಾಜಿಕ ಕಾರ್ಯಕರ್ತ ಜಿ.ಕೆ. ಭಟ್‌ ಪ್ರಶ್ನಿಸಿದರೆ, ಈ ವಿಚಾರದಲ್ಲಿ ಜನ ಪ್ರತಿನಿಧಿಗಳು ಮಧ್ಯಪ್ರವೇಶಿಸಿ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಸಾಮಾಜಿಕ ಹೋರಾಟ ಗಾರ ಮುನೀರ್‌ ಕಾಟಿಪಳ್ಳ ಆಗ್ರಹಿಸಿದ್ದಾರೆ.

– ಹಿಲರಿ ಕ್ರಾಸ್ತಾ

Advertisement

Udayavani is now on Telegram. Click here to join our channel and stay updated with the latest news.

Next