Advertisement

ತಂಡದಲ್ಲಿಲ್ಲದಿದ್ದರೂ ರಾಜ್‌ಕೋಟ್‌ ಟೆಸ್ಟ್‌  ವೇಳೆ ಕಾಣಿಸಿಕೊಳ್ಳಲಿದ್ದಾರೆ ಪೂಜಾರ!

11:24 PM Feb 12, 2024 | Team Udayavani |

ರಾಜ್‌ಕೋಟ್‌: ಹೌದು, ಇಂಗ್ಲೆಂಡ್‌ ಎದುರಿನ ರಾಜ್‌ಕೋಟ್‌ ಟೆಸ್ಟ್‌ ಪಂದ್ಯದ ವೇಳೆ “ಟೆಸ್ಟ್‌ ಸ್ಪೆಷಲಿಸ್ಟ್‌’ ಖ್ಯಾತಿಯ ಚೇತೇಶ್ವರ್‌ ಪೂಜಾರ ಅಂಗಳದಲ್ಲಿ ಕಾಣಿಸಿಕೊಳ್ಳಲಿದ್ದಾರೆ! ಆದರೆ ತಂಡದ ಆಟಗಾರನಾಗಿ ಅಲ್ಲ ಎಂಬುದನ್ನು ಗಮನಿಸಬೇಕು.

Advertisement

ಟೆಸ್ಟ್‌ ಪಂದ್ಯದ ಮುನ್ನಾ ದಿನ (ಫೆ. 14) ಸೌರಾಷ್ಟ್ರ ಕ್ರಿಕೆಟ್‌ ಮಂಡಳಿ ತನ್ನಿಬ್ಬರು ಕ್ರಿಕೆಟಿಗರಾದ ಚೇತೇಶ್ವರ್‌ ಪೂಜಾರ ಮತ್ತ ರವೀಂದ್ರ ಜಡೇಜ ಅವರನ್ನು ಸಮ್ಮಾನಿಸಲಿದೆ. ಅಂದು “ಸೌರಾಷ್ಟ್ರ ಕ್ರಿಕೆಟ್‌ ಅಸೋಸಿಯೇಶನ್‌ ಸ್ಟೇಡಿಯಂ’ಗೆ ನೂತನ ಹೆಸರನ್ನಿಡುವ ಕಾರ್ಯಕ್ರಮ ಜರಗಲಿದ್ದು, ಈ ಸಂದರ್ಭದಲ್ಲಿ ಸೌರಾಷ್ಟ್ರದ ಕ್ರಿಕೆಟ್‌ ಸಾಧಕರನ್ನು ಗೌರವಿಸುವುದು ಮಂಡಳಿಯ ಉದ್ದೇಶ.

“ಸೌರಾಷ್ಟ್ರದ ಇಬ್ಬರು ಖ್ಯಾತ ಕ್ರಿಕೆಟಿಗರಾದ ಚೇತೇಶ್ವರ್‌ ಪೂಜಾರ ಮತ್ತು ರವೀಂದ್ರ ಜಡೇಜ ಅವರನ್ನು ಈ ಸಂದರ್ಭದಲ್ಲಿ ಸಮ್ಮಾನಿಸಲಾಗುವುದು. ಇಬ್ಬರೂ ಒಟ್ಟಿಗೇ ಇಲ್ಲಿ ಟೆಸ್ಟ್‌ ಆಡಿದ್ದರೆ ಹೆಚ್ಚು ಖುಷಿಯಾಗುತ್ತಿತ್ತು’ ಎಂಬುದಾಗಿ ಸೌರಾಷ್ಟ್ರ ಕ್ರಿಕೆಟ್‌ ಮಂಡಳಿಯ ಅಧ್ಯಕ್ಷ ಜಯದೇವ್‌ ಶಾ ಹೇಳಿದ್ದಾರೆ.

ಪೂಜಾರ ಸದ್ಯ ಟೀಮ್‌ ಇಂಡಿಯಾದಿಂದ ಬೇರ್ಪಟ್ಟಿದ್ದಾರೆ. “ಈ ಕುರಿತು ನಾನು ಹೆಚ್ಚೇನೂ ಹೇಳಲಾರೆ. ಇದೆಲ್ಲ ಆಟಗಾರರ ಫಾರ್ಮ್ ಹಾಗೂ ಆಯ್ಕೆಗಾರರ ನಿರ್ಧಾರವನ್ನು ಅವಲಂಬಿಸಿರುತ್ತದೆ. ಆದರೆ ಪೂಜಾರ ಸಾಧನೆ ಬಗ್ಗೆ ಸೌರಾಷ್ಟ್ರಕ್ಕೆ ಹೆಮ್ಮೆ ಇದೆ’ ಎಂದು ಶಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next