Advertisement
ಅಂಬಾಗಿಲು-ಪೆರಂಪಳ್ಳಿ ಹಳೆಯ ಇಕ್ಕಟ್ಟಾದ ರಸ್ತೆ ವಿಸ್ತರಣೆಗೊಳಿಸಿ ಭೂಸ್ವಾಧೀನ ಪ್ರಕ್ರಿಯೆ ಮೂಲಕ ವ್ಯವಸ್ಥಿತ ರಸ್ತೆ ರೂಪಿಸುವ ಯೋಜನೆ ಇದಾಗಿತ್ತು. ಪೆರಂಪಳ್ಳಿ ಮೇಲ್ಸೇತುವೆಯಿಂದ ಮೂಡು ಪೆರಂಪಳ್ಳಿ ಚರ್ಚ್‌ವರೆಗೆ ಉತ್ತಮ ರಸ್ತೆ ನಿರ್ಮಾಣಗೊಂಡಿದೆ. ಆದರೆ ಅಂಬಾಗಿಲಿನಿಂದ ರೈಲ್ವೇ ಮೇಲ್ಸೇತುವೆ ವರೆಗಿನ ರಸ್ತೆಗೆ ಮೊದಲ ಲೇಯರ್ ಡಾಮರು ಕೆಲಸ ಮಾಡಲಾಗಿತ್ತು.
Related Articles
Advertisement
23 ಕೋ. ರೂ. ವೆಚ್ಚದಲ್ಲಿ ಚತುಷ್ಪಥ ರಸ್ತೆ ನಿರ್ಮಾಣದಲ್ಲಿ ಅಂಬಾಗಿಲು-ಪೆರಂಪಳ್ಳಿ ರಸ್ತೆ ಯೋಜನೆ ಒಂದು ಭಾಗವಾಗಿದೆ. ಟಿಡಿಆರ್ ಪ್ರಕ್ರಿಯೆ ಮೂಲಕ ಭೂಸ್ವಾಧೀನವಾಗಿ 2020ರಲ್ಲಿ ಶಾಸಕ ಕೆ. ರಘುಪತಿ ಭಟ್ ಕಾಮಗಾರಿಗೆ ಚಾಲನೆ ನೀಡಿದ್ದರು. ಗುತ್ತಿಗೆಯನ್ನು ಮೂರು ಪಾಲುಗಳನ್ನಾಗಿ ಮಾಡಿ ನೀಡಲಾಗಿತ್ತು. ಒಂದು ಭಾಗದಲ್ಲಿ (ಚರ್ಚ್ ಸಮೀಪ) ಮಾತ್ರ ಕಾಂಕ್ರೀಟ್-ಡಾಮರು ರಸ್ತೆ ಕೆಲವು ಮೀಟರ್ ರಸ್ತೆ ವ್ಯವಸ್ಥಿತವಾಗಿ ನಡೆದಿದೆ. ಆದರೆ ಕಂಟ್ರಿ ಇನ್ ಕಡೆಯಿಂದ ಬರುವ ಇಳಿಜಾರು ರಸ್ತೆ, ಅಂಬಾಗಿಲಿನಿಂದ ರೈಲ್ವೇ ಮೇಲ್ಸೇತುವೆ ವರೆಗೆ ಹಲವೆಡೆ ರಸ್ತೆ ದುಃಸ್ಥಿತಿಯಲ್ಲಿದೆ.
ಶೀಘ್ರ ವ್ಯವಸ್ಥಿತ ರಸ್ತೆ: ಮಳೆಯಿಂದಾಗಿ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಮೊದಲ ಲೇಯರ್ ಡಾಮರು ಕೆಲಸ ನಡೆದಿದ್ದರೂ ಕೆಲವು ಕಡೆಗಳಲ್ಲಿ ಮಳೆಯಿಂದ ರಸ್ತೆ ಹದಗೆಟ್ಟಿದೆ. ಸಣ್ಣ ಪ್ರಮಾಣದಲ್ಲಿ ಆಗಾಗ ಮಳೆ ಇರುವುದರಿಂದ ದೀಪಾವಳಿ ಮುಗಿದ ಅನಂತರ ಪೂರ್ಣ ಪ್ರಮಾಣದಲ್ಲಿ ಮೊದಲ ಹಾಗೂ ಎರಡನೇ ಹಂತದ ಲೇಯರ್ ಡಾಮರು ಕೆಲಸವನ್ನು ವ್ಯವಸ್ಥಿತವಾಗಿ ಪೂರ್ಣಗೊಳಿಸಲಾಗುವುದು. ನವೆಂಬರ್ ಅಂತ್ಯದ ಒಳಗೆ ಕೆಲಸ ಮುಗಿಸಲಾಗುತ್ತದೆ. ಇಂದ್ರಾಳಿಯಲ್ಲಿ ರೈಲ್ವೇ ಕೆಲಸ ನಡೆಯುತ್ತಿರುವುದರಿಂದ ಈ ರಸ್ತೆ ಬದಲಿ ಮಾರ್ಗವಾಗಿರುವ ಹಿನ್ನೆಲೆಯಲ್ಲಿ ಗುಂಡಿಗಳನ್ನು ಮುಚ್ಚಲು ತಾತ್ಕಾಲಿಕ ನೆಲೆಯಲ್ಲಿ ತೇಪೆ ಕಾರ್ಯ ನಡೆಸಲಾಗುತ್ತಿದೆ. – ಜಗದೀಶ್ ಭಟ್, ಎಇಇ, ಲೋಕೋಪಯೋಗಿ ಇಲಾಖೆ, ಉಡುಪಿ