Advertisement
ಶಿಕ್ಷಕರಿಗೆ ಶಿಕ್ಷಣ ನೀಡುವ ಎರಡು ವರ್ಷಗಳ ಬ್ಯಾಚುಲರ್ ಆಫ್ ಎಜುಕೇಶನ್ (ಬಿಎಡ್) ಕೋರ್ಸ್ ಅನ್ನು ರದ್ದುಗೊಳಿಸಲು ಸರಕಾರ ಉದ್ದೇಶಿಸಿದೆ. ಇದರ ಬದಲು 4 ವರ್ಷಗಳ ಸಮಗ್ರ ಶಿಕ್ಷಕ ತರಬೇತಿ ಯೋಜನೆಗೆ ಮಾತ್ರ ಅವಕಾಶ ಕಲ್ಪಿಸಲು ಉದ್ದೇಶಿಸಿದೆ. ಸಮರ್ಥ ಶಿಕ್ಷಕರನ್ನು ರೂಪಿಸುವ ಮಹತ್ವಾಕಾಂಕ್ಷೆಯೊಂದಿಗೆ ಕೇಂದ್ರ ಸರಕಾರ ಹೊಸ ಬಿ.ಎಡ್ ಕೋರ್ಸ್ ಗೆ ಅಧಿಸೂಚನೆ ಹೊರಡಿಸಿದೆ.
ಒಂದು ವರ್ಷ ಇದ್ದ ಬಿಎಡ್ ಕೋರ್ಸ್ ಅನ್ನು 2014ರಲ್ಲಿ 2 ವರ್ಷದ ಕೋರ್ಸ್ ಆಗಿ ಪರಿವರ್ತಿಸಲಾಗಿತ್ತು. ಆದರೆ, ಅದನ್ನು ರದ್ದುಗೊಳಿಸಿ 4 ವರ್ಷದ ಸಮಗ್ರ ಶಿಕ್ಷಕ ತರಬೇತಿ ಯೋಜನೆಯನ್ನು ಆರಂಭಿಸಲಾಗಿದೆ. ಪಿಯುಸಿ ಮುಗಿಸಿದವರು 4 ವರ್ಷದ ಬಿಎ ಬಿಎಡ್ ಅಥವಾ ಬಿಎಸ್ಸಿ ಬಿಎಡ್ ಕೋರ್ಸ್ ಆಯ್ಕೆ ಮಾಡಿಕೊಳ್ಳಲು ಅರ್ಹತೆ ಹೊಂದಿರುತ್ತಾರೆ. ಬಿಟೆಕ್ ಮತ್ತು ಎಂಬಿಬಿಎಸ್ ಕೋರ್ಸ್‌ಗಳ ರೀತಿಯಲ್ಲೇ ಬಿಎಡ್ ಶಿಕ್ಷಣ ನೀಡಲು ಸರಕಾರ ಬಯಸಿದೆ. ಮಹತ್ವದ ಬದಲಾವಣೆ
ಶಿಕ್ಷಣದಲ್ಲಿ ಬೋಧನೆಯ ಗುಣಮಟ್ಟವನ್ನು ಸುಧಾರಿಸಲು, ನಾಲ್ಕು ವರ್ಷಗಳ ಬ್ಯಾಚುಲರ್ ಇನ್ ಎಜುಕೇಶನ್ (ಬಿ.ಎಡ್) ಕೋರ್ಸ್ ಅನ್ನು ಹೊರತರಲು ಸರಕಾರ ಯೋಚಿಸಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಹೊಸ ನಿಯಮ ಜಾರಿಗೆ ಬರುವ ಸಾಧ್ಯತೆ ಇದೆ. ಈ ಹಿಂದೆ ಕಡಿಮೆ ಆಂಕ ಗಳಿಸಿದ ಅಥವಾ ಯಾವುದೇ ನಿರ್ದಿಷ್ಟ ಉದ್ಯಮದಲ್ಲಿ ಕೌಶಲ್ಯಗಳನ್ನು ಹೊಂದಿರದ ಅಭ್ಯರ್ಥಿಗಳು ಕೊನೆಗೆ ಬೋಧನಾ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಈ ರೀತಿಯಾದರೆ ಶಿಕ್ಷಣವು ಸುಧಾರಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಬೋಧನಾ ವೃತ್ತಿ ಯನ್ನು ಆಯ್ಕೆಮಾಡಿಕೊಳ್ಳಲೆಂದೇ ಸರಕಾರವು ನಾಲ್ಕು ವರ್ಷಗಳ ಸಂಯೋಜಿತ ಬಿಎಡ್ ಕೋರ್ಸ್ ಅನ್ನು ರೂಪಿಸಿದೆ.
Related Articles
Advertisement
ಅಭ್ಯರ್ಥಿಗಳು ಪಿಯುಸಿಯಲ್ಲಿ ಉತ್ತೀರ್ಣರಾದ ಅನಂತರ 4 ವರ್ಷದ ಬಿಎಡ್ ಕೋರ್ಸ್‌ಗೆ ಸೇರಬಹುದು. ಶಿಕ್ಷಕ ವೃತ್ತಿಯಲ್ಲಿ ಆಸಕ್ತಿ ಇರುವವರು ಈ ಕ್ಷೇತ್ರಕ್ಕೆ ಆಗಮಿಸಬೇಕು ಎನ್ನುವ ಉದ್ದೇಶದಿಂದ ಈ ಹೊಸ ಬದಲಾವಣೆ ಮಾಡಲಾಗಿದೆ.
ಇನ್ನು ಸ್ನಾತಕ ಅಥವಾ ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳು ಎರಡು ವರ್ಷದ ಬಿಎಡ್ ಕೋರ್ಸ್ ಅಥವಾ ಮೂರು ವರ್ಷದ ಇಂಟಿಗ್ರೇಟೆಡ್ ಬಿಎಡ್ + ಎಂಎಡ್ ಕೋರ್ಸ್ ಮಾಡಬಹುದು. ಈ ಗ್ರೇಸ್ ಅವಧಿ ಎಷ್ಟು ಸಮಯದವರೆಗೆ ಲಭ್ಯವಿರುತ್ತದೆ ಎಂದು ಸರಕಇನ್ನೂ ಘೋಷಿಸದ ಕಾರಣ ಅಭ್ಯರ್ಥಿಗಳು ಶಿಕ್ಷಣ ಇಲಾಖೆಯನ್ನು ಸಂಪರ್ಕಿಸಬೇಕಾಗುತ್ತದೆ.
ಬಿಎಡ್ ಕೋರ್ಸ್ಈ ಹಿಂದೆ ಪಿಯುಸಿ ಆಬಳಿಕ ಪದವಿ ಶಿಕ್ಷಣ ಪಡೆದು ಬಳಿಕ ಎರಡು ವರ್ಷಗಳ ಬಿಎಡ್ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಇತ್ತು. ಆದರೆ ಹೊಸ ನಿಯಮದಂತೆ ಪಿಯುಸಿ ಬಳಿಕ ಆಸಕ್ತ ಅಭ್ಯರ್ಥಿಗಳು ಮೂರು ವಿಧಗಳಲ್ಲಿ ಲಭ್ಯವಿರುವ ಬಿಎಡ್ ಕೋರ್ಸ್ ಅನ್ನು ಆಯ್ಕೆ ಮಾಡಿ ಅಧ್ಯಯನ ಮಾಡಬಹುದು. ಅವುಗಳೆಂದರೆ ಬಿಎ-ಬಿಎಡ್, ಬಿಎಸ್ಸಿ-ಬಿಎಡ್ ಮತ್ತು ಬಿಕಾಂ-ಬಿಎಡ್ ಕೋರ್ಸ್‌ಗಳು. ಐದು ವರ್ಷದ ಬದಲಾಗಿ ನಾಲ್ಕೇ ವರ್ಷದಲ್ಲಿ ಬಿಎಡ್ ಕೋರ್ಸ್ ಮಾಡಬಹುದಾಗಿದೆ.
ಎಂಜಿನಿಯರ್, ವೈದ್ಯರಂತೆ ಶಿಕ್ಷಕರಿಗೂ ಶಿಕ್ಷಣ
•ಪ್ರಜ್ಞಾ ಶೆಟ್ಟಿ ವಿದ್ಯಾರ್ಥಿಗಳು ಪಿಯುಸಿ ಕಾಲಿಡುತ್ತಿದ್ದಂತೆ ಪಿಯುಸಿ ಬಳಿಕ ವಿದ್ಯಾರ್ಥಿಗಳು ವೈದ್ಯರು, ಎಂಜಿನಿಯರ್ ಆಗಬೇಕು ಎನ್ನುವ ಉದ್ದೇಶದಿಂದ ಅದಕ್ಕೆ ತಕ್ಕುದಾದ ತರಬೇತಿಯನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಆದರೆ ಶಿಕ್ಷಕರಾಗಬೇಕು ಎಂದು ಉದ್ದೇಶವಾಗಿಟ್ಟುಕೊಂಡು ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ. ಈ ಕಾರಣಕ್ಕಾಗಿಯೇ ಪಿಯುಸಿ ಮುಗಿದ ಕೂಡಲೇ ಎಂಬಿಬಿಎಸ್, ಎಂಜಿನಿಯರಿಂಗ್ ನಂತೆಯೇ ಶಿಕ್ಷಕ ಶಿಕ್ಷಣವಾಗಬೇಕು ಎಂಬ ಉದ್ದೇಶದಿಂದ ನಾಲ್ಕು ವರ್ಷಗಳ ಕೋರ್ಸ್ ಪರಿಚಯಿಸಲಾಗುತ್ತಿದೆ.
ಗುಣಮಟ್ಟ ಸುಧಾರಣೆ
ಬಿಎಡ್ ಕೋರ್ಸ್ ಗಳನ್ನು ನಾಲ್ಕು ವರ್ಷಗಳಿಗೆ ಬದಲಾಯಿಸಿರುವುದು ಉತ್ತಮ ಯೋಜನೆ. ಇದರಿಂದ ಶಿಕ್ಷಣ ಪದ್ಧತಿಯಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಶಿಕ್ಷಕರಿಗೂ ಬೋಧನಾ ಪದ್ಧತಿಯಲ್ಲಿ ಹೆಚ್ಚು ಪರಿಪೂರ್ಣತೆ ಪಡೆಯಲು ಸಾಧ್ಯವಾಗುತ್ತದೆ.
– ಡಾ| ಆರತಿ ಶೆಟ್ಟಿ, ಪ್ರಾಂಶುಪಾಲರು, ಎಂ. ವಿ. ಶೆಟ್ಟಿ, ಬಿಎಡ್ ಕಾಲೇಜು
ಬಿಎಡ್ ಕೋರ್ಸ್ ಗಳನ್ನು ನಾಲ್ಕು ವರ್ಷಗಳಿಗೆ ಬದಲಾಯಿಸಿರುವುದು ಉತ್ತಮ ಯೋಜನೆ. ಇದರಿಂದ ಶಿಕ್ಷಣ ಪದ್ಧತಿಯಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಶಿಕ್ಷಕರಿಗೂ ಬೋಧನಾ ಪದ್ಧತಿಯಲ್ಲಿ ಹೆಚ್ಚು ಪರಿಪೂರ್ಣತೆ ಪಡೆಯಲು ಸಾಧ್ಯವಾಗುತ್ತದೆ.
– ಡಾ| ಆರತಿ ಶೆಟ್ಟಿ, ಪ್ರಾಂಶುಪಾಲರು, ಎಂ. ವಿ. ಶೆಟ್ಟಿ, ಬಿಎಡ್ ಕಾಲೇಜು