Advertisement

ಅಂತೂ ಜಾಮಾ ಮಸೀದಿ ಪ್ರದೇಶ ಅಭಿವೃದ್ಧಿ! – 20 ವರ್ಷಗಳ ಬೇಡಿಕೆ ಜಾರಿ ಸನ್ನಿಹಿತ

08:51 PM May 08, 2023 | Team Udayavani |

ನವದೆಹಲಿ: ಎರಡು ದಶಕಗಳಿಂದ ದೆಹಲಿಯ ಜಾಮಾ ಮಸೀದಿ ಮತ್ತು ಸುತ್ತಲ ಪ್ರದೇಶವನ್ನು ಅಭಿವೃದ್ಧಿ ಮಾಡಬೇಕೆಂಬ ಮಾತುಗಳು ಕೇಳಿಬರುತ್ತಲೇ ಇದ್ದವು. ಇದೀಗ ಅದು ಸಾಕಾರಗೊಳ್ಳುವ ಹಂತಕ್ಕೆ ಬಂದಿದೆ. ಏಪ್ರಿಲ್‌ನಲ್ಲಿ ದೆಹಲಿ ಲೋಕೋಪಯೋಗಿ ಇಲಾಖೆ ಟೆಂಡರ್‌ ಕರೆದಿತ್ತು. ಇದಕ್ಕೆ ಸಂಬಂಧಪಟ್ಟ ಕರಡು ಯೋಜನಾ ಪ್ರತಿ (ಡಿಪಿಆರ್‌) ಸದ್ಯದಲ್ಲೇ ಸಿದ್ಧಗೊಳ್ಳಲಿದೆ. ಜಾಮಾ ಮಸೀದಿ ಮತ್ತು ಸುತ್ತಲ ವಾತಾವರಣ ಬಹಳ ಹದಗೆಟ್ಟು ಗಲೀಜಾಗಿರುವುದು ಮುಖ್ಯ ಕಾರಣ. ಅಲ್ಲದೇ ಇತ್ತೀಚೆಗೆ ವಿಪರೀತ ಮಳೆಯಿಂದ ಮಸೀದಿ ಮಧ್ಯದ ಗುಮ್ಮಟ ಕುಸಿದುಬಿದ್ದಿತ್ತು. ಅದರಿಂದ ಕೆಂಪು ಸ್ಲಾéಬ್‌ಗ ಹಾನಿಯಾಗಿತ್ತು. ಅದರ ಕೆಳಗಿದ್ದ ನ್ಯಾಯಾಲಯದ ಆವರಣಕ್ಕೆ ತೊಂದರೆಯಾಗಿತ್ತು. ಈ ಸರಣಿ ತೊಂದರೆಗಳಿಂದ ದೆಹಲಿ ಸರ್ಕಾರ ಈ ನಿರ್ಧಾರ ಮಾಡಿದೆ. ಜಾಮಾ ಮಸೀದಿ 17ನೇ ಶತಮಾನದಲ್ಲಿ ನಿರ್ಮಾಣವಾಗಿರುವ ಒಂದು ಐತಿಹಾಸಿಕ ಕೇಂದ್ರ. ವಕ್ಫ್ ಮಂಡಳಿ ವ್ಯಾಪ್ತಿಯಲ್ಲಿ ಬಂದರೂ, ಇದರ ನಿರ್ವಹಣೆ ಮಾಡುತ್ತಿರುವುದು ಭಾರತೀಯ ಪುರಾತತ್ವ ಇಲಾಖೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next