ವಾಷಿಂಗ್ಟನ್: ಟ್ವಿಟರ್, ಮೆಟಾ, ಅಮೆಜಾನ್ ಬಳಿಕ ಆಲ#ಬೆಟ್‌ನಿಂದಲೂ ಹತ್ತು ಸಾವಿರ ಮಂದಿ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಇದ್ದಾರೆ.
ಗೂಗಲ್‌ನ ಮಾತೃಸಂಸ್ಥೆ ಆಲ್ಫಾಬೆಟ್‌ಗೆ ಹೂಡಿಕೆ ಮಾಡಿರುವ ಕ್ರಿಸ್ಟೋಫರ್ ಹಾನ್ ಅವರು ಕಂಪನಿಯಲ್ಲಿ ಉತ್ತಮ ರೀತಿಯಲ್ಲಿ ಸಾಧನೆ ತೋರಿಸದೇ ಇರುವವರನ್ನು ತೆಗೆದು ಹಾಕಬೇಕು ಎಂದು ಫರ್ಮಾನು ಹೊರಡಿಸಿದ್ದಾರೆ. ಇದರ ಜತೆಗೆ ಕಂಪನಿ ಉದ್ಯೋಗಿಗಳಿಗೆ ಮಿತಿ ಮೀರಿ ಸಂಬಳ ನೀಡುತ್ತಿದೆ ಎಂದೂ ಅಭಿಪ್ರಾಯಪಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ ಮ್ಯಾನೇಜರ್‌ಗಳಿಗೆ ತೃಪ್ತಿದಾಯಕವಾಗಿ ಸಾಧನೆ ಮಾಡದಿರುವ ಉದ್ಯೋಗಿಗಳನ್ನು ವರ್ಗೀಕರಿಸಲು ಸೂಚನೆ ನೀಡಲಾಗಿದೆ. ಅವರು ಸೂಚಿಸುವವರನ್ನು ತೆಗೆದು ಹಾಕಲಾಗುತ್ತದೆ. ಗೂಗಲ್‌ನ ಮಾತೃಸಂಸ್ಥೆ 1,87,000 ಮಂದಿ ಉದ್ಯೋಗಿಗಳನ್ನು ಹೊಂದಿದೆ.
ಗ್ರೀನ್ ಕಾರ್ಡ್‌ಗೆ ಆತಂಕ:
ಮತ್ತೂಂದೆಡೆ, ಎಚ್-1ಬಿ ವೀಸಾ ಮೂಲಕ ತೆರಳಿದ ಭಾರತೀಯ ಟೆಕಿಗಳಿಗೆ ಆತಂಕ ಉಂಟಾಗಿದೆ. ಮೆಟಾ, ಅಮೆಜಾನ್, ಟ್ವಿಟರ್ ಸೇರಿದಂತೆ ಹಲವು ಕಂಪನಿಗಳು 45 ಸಾವಿರ ಮಂದಿಯನ್ನು ಅಮೆರಿಕದಲ್ಲಿ ನಿಯೋಜಿಸಿವೆ.
ಮೆಟಾ ಮತ್ತು ಟ್ವಿಟರ್- ಈ ಎರಡು ಕಂಪನಿಗಳೇ 350 ಮಂದಿಗೆ ಉದ್ಯೋಗ ನೀಡಿದ್ದವು. ಅವರಿಗೆ ಈಗ ಕೆಲಸ ಕಳೆದುಕೊಂಡ 60 ದಿನಗಳ ಒಳಗಾಗಿ ಹೊಸ ಉದ್ಯೋಗ ಹುಡುಕಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ಉಂಟಾಗಿದೆ. ಜತೆಗೆ ಗ್ರೀನ್ ಕಾರ್ಡ್‌ಗಾಗಿ ಕಾಯುತ್ತಿದ್ದವರಿಗೂ ಆತಂಕದ ಸ್ಥಿತಿ ಉಂಟಾಗಿದೆ.